17 ವರ್ಷದಿಂದ ಇವನು ಚಕ್ಕರೇ ಹೊಡೆದಿಲ್ಲ!
Team Udayavani, Mar 19, 2019, 12:30 AM IST
ನಿಮಗೆ ನೆನಪಿದೆಯಾ… ನೀವು ಹೊಡೆದ ಚಕ್ಕರ್‌ಗಳ ಲೆಕ್ಕ? ಎಲ್‌ಕೆಜಿಯಿಂದ ಡಿಗ್ರೀವರೆಗೆ ಎಷ್ಟ್ ಸಲ ಬಂಕ್ ಹೊಡೆದಿದ್ದೀರಿ? ಮೇಷ್ಟ್ರಿಗೆ ಚಳ್ಳೇಹಣ್ಣು ತಿನ್ನಿಸಲು ಏನೆಲ್ಲ ಸಬೂಬು ಹೇಳಿದ್ದೀರಿ? ಜ್ವರ, ಕೆಮ್ಮು, ಶೀತ… ಇನ್ನೂ ಏನೇನೆಲ್ಲ ಹೇಳಿ ತಪ್ಪಿಸಿಕೊಂಡಿದ್ರಿ? ಖಂಡಿತಾ ನೆನಪಿರಲು ಸಾಧ್ಯವಿಲ್ಲ. ನೆನಪಿದ್ದರೂ, ಅವೆಲ್ಲ ನೆನೆದು ನಿಮಗೇ ನಗು ಉಕ್ಕುತ್ತಿರಬಹುದು.
ಆದರೆ, ಈ ಫೋಟದಲ್ಲಿರುವ ಯುವಕನಿಗೆ ಇದನ್ನು ಕೇಳಿ… ಆತ ತನ್ನ ಬ್ಯಾಗ್‌ನಿಂದ ಒಂದಿಷ್ಟು ಸರ್ಟಿಫಿಕೇಟ್‌ಗಳನ್ನು ತೋರಿಸಿ, ತಾನೆಷ್ಟು ಪ್ರಾಮಾಣಿಕ ಅನ್ನೋದನ್ನು ಸಾಬೀತು ಮಾಡಿ ತೋರಿಸ್ತಾನೆ. ಏಕೆ ಗೊತ್ತಾ? ಚೆನ್ನೈನ ವಿನೋದ್ ಕುಮಾರ್ ಎನ್ನುವ ಈ ಹುಡುಗ, ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಒಂದೂ ದಿನವೂ ಕ್ಲಾಸ್‌ಗೆ ಚಕ್ಕರ್ ಹೊಡೆದಿಲ್ಲ! ಕಳೆದ 17 ವರ್ಷಗಳಿಂದ ಒಂದೂ ಬಂಕ್ ಹೊಡೆಯದೇ, ಪ್ರತಿ ಕ್ಲಾಸ್‌ನಿಂದಲೂ ಅತ್ಯುತ್ತಮ ಹಾಜರಾತಿಗೆ ಸರ್ಟಿಫಿಕೇಟ್ ಪಡೆಯುತ್ತಲೇ, ಗುರುಗಳಿಂದ ಗೌರವಪೂರ್ವಕ ಬೀಳ್ಕೊಡುಗೆ ಪಡೆಯುತ್ತಿದ್ದಾನೆ.
ತನ್ನ ಮನೆಯಿದ್ದ ರೋಯಾಪುರಂನಿಂದ ಪಾಡೂರುಗೆ ನಿತ್ಯವೂ ಎರಡೂವರೆ ತಾಸು ಪಯಣಿಸಿ, ಓದಲೆಂದು ಬರುತ್ತಿದ್ದ ವಿನೋದ್, ಆರೋಗ್ಯವನ್ನು ಬಹಳ ಜೋಪಾನದಿಂದ ಕಾಪಾಡಿಕೊಂಡಿದ್ದಾನೆ. ಎರಡು ವರ್ಷದ ಕೆಳಗೆ ಜ್ವರ ಬಂದು, 102 ಡಿಗ್ರಿ ತಾಪದಿಂದ ಮೈ ಕುದಿಯುತ್ತಿತ್ತಂತೆ. ಆದರೂ, ಆತ ತರಗತಿಗೆ ಬಂದಿದ್ದ. ಒಮ್ಮೆ ಜೋರು ಮಳೆ ಬಂದು, ಪ್ರವಾಹ ಎದುರಾದಾಗಲೂ ಈತ ತರಗತಿಗೆ ಬಂದಿದ್ದ. ಇಂಥ ವಿದ್ಯಾರ್ಥಿಗಳಿದ್ರೆ, ಅಟೆಂಡೆನ್ಸೇ ಬೇಡ ಅಲ್ವಾ?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.