ಪಾಕ್ ಫೈರಿಂಗ್‌ಗೆ ಯೋಧ ಹುತಾತ್ಮ
Team Udayavani, Mar 19, 2019, 12:30 AM IST
ಶ್ರೀನಗರ/ದುಬಾೖ: ಗಡಿಯಾಚೆಯಿಂದ ಪಾಕಿಸ್ಥಾನ ಸೇನೆ ಸೋಮವಾರ ಕೂಡ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿದೆ. ಇದರಿಂದಾಗಿ ಒಬ್ಬ ಸೇನಾ ಯೋಧ ಹುತಾತ್ಮರಾಗಿದ್ದಾರೆ. ಜತೆಗೆ ನಾಲ್ವರು ಗಾಯಗೊಂಡಿದ್ದಾರೆ. ರಜೌರಿ ಜಿಲ್ಲೆಯ ಸುಂದರ್ ಬನಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ 5.30ರ ಸುಮಾರಿಗೆ ಕದನ ವಿರಾಮ ಉಲ್ಲಂ ದ ಘಟನೆ ನಡೆದಿದೆ. ಪಾಕಿಸ್ಥಾನ ಸೇನೆ ನಡೆಸಿದ ದುಸ್ಸಾಹಸಕ್ಕೆ ಭಾರತದ ಸೇನೆಗೆ ತಕ್ಕ ಪ್ರತ್ಯುತ್ತರ ನೀಡಿ ಗುಂಡಿನ ದಾಳಿ ನಡೆಸಿದವರನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಸೇನಾ ವಕ್ತಾರರು ಜಮ್ಮುವಿನಲ್ಲಿ ತಿಳಿಸಿದ್ದಾರೆ. ರವಿವಾರಕೂಡ ಪಾಕ್ ಸೇನೆ ಎಲ್‌ಒಸಿ ಕಡೆಯಿಂದ ಗುಂಡು ಹಾರಿಸಿತ್ತು. ಪುಲ್ವಾಮಾ ಜಿಲ್ಲೆಯಲ್ಲಿ 25 ವರ್ಷದ ಯುವಕನನ್ನು ಉಗ್ರರು ಸೋಮವಾರ ಗುಂಡು ಹಾರಿಸಿ ಕೊಂದಿದ್ದಾರೆ. ಇದೇ ವೇಳೆ ಪಾಕಿಸ್ಥಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಸೋಮವಾರದಿಂದ ಚೀನ ಪ್ರವಾಸ ಕೈಗೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಮಾತನಾಡಿದ ಚೀನ ವಿದೇಶಾಂಗ ಇಲಾಖೆ ವಕ್ತಾರ ಮಾತುಕತೆ ವೇಳೆ ಭಾರತ ಮತ್ತು ಪಾಕಿಸ್ಥಾನ ನಡುವಿನ ಉದ್ವಿಗ್ನ ವಾತಾವರಣ ವಿಚಾರ ಪ್ರಸ್ತಾಪವಾಗಲಿದೆ ಎಂದಿದ್ದಾರೆ.
ಪ್ರಮುಖ ಭೂಮಿಕೆ: ಭಾರತ ಮತ್ತು ಪಾಕಿಸ್ಥಾನ ನಡುವಿನ ಬಿಗುವಿನ ವಾತಾವರಣ ತಗ್ಗಿಸುವಲ್ಲಿ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಪ್ರಮುಖ ಪಾತ್ರ ವಹಿಸಿದೆ ಎಂದು ಭಾರತದಲ್ಲಿನ ಯುಎಇ ರಾಯಭಾರಿ ಅಹ್ಮದ್ ಅಲ್ ಬನ್ನಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದೊರೆ ಮೊಹಮ್ಮದ್ ಬಿನ್ ಝಯೇದ್ ಅಲ್-ನಹ್ಯಾನ್‌ರ ಫೋನ್ ಸಂಭಾಷಣೆ ಪ್ರಸ್ತಾಪಿಸಿ ಅವರು ಈ ಅಂಶ ಉಲ್ಲೇಖೀಸಿದ್ದಾರೆ.
ಮುಂಬಯಿ ದಾಳಿ ಹೀನ ಘಟನೆ
2008ರಲ್ಲಿ ಪಾಕಿಸ್ಥಾನ ಪ್ರೇರಿತ ಉಗ್ರರು ಮುಂಬಯಿನಲ್ಲಿ ನಡೆಸಿದ್ದ ದಾಳಿ ಅತ್ಯಂತ ಹೇಯ ಘಟನೆ ಎಂದು ಚೀನ ಬಣ್ಣಿಸಿದೆ. ಕ್ಸಿಯಾನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಗ್ರರನ್ನು ಮಟ್ಟ ಹಾಕಿದ ಬಗ್ಗೆ ಹೊರಡಿಸಲಾದ ಶ್ವೇತಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. “ದ ಫೈಟ್ ಎಗೈನೆಸ್ಟ್ ಟೆರರಿಸಂ ಆ್ಯಂಡ್ ಎಕ್ಸ್‌ಟ್ರೀಮಿಸಂ ಆ್ಯಂಡ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಇನ್ ಕ್ಸಿನ್‌ಜಿಯಾಂಗ್’ ಎಂಬ ಶಿರೋನಾಮೆಯ ಶ್ವೇತಪತ್ರದಲ್ಲಿ ಮೊದಲ ಬಾರಿಗೆ ಪಾಕಿಸ್ಥಾನ ಪ್ರೇರಿತ ಲಷ್ಕರ್-ಎ-ತೊಯ್ಬಾ ಸಂಘಟನೆ ನಡೆಸಿದ ಕುಕೃತ್ಯ ಖಂಡಿಸಲಾಗಿದೆ. ಪಾಕ್ ವಿದೇಶಾಂಗ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.