ಹಿಂದುಳಿದ ವರ್ಗದ ಮತ ನಿರ್ಣಾಯಕ
Team Udayavani, Mar 19, 2019, 6:29 AM IST
ಕ್ಷೇತ್ರದ ವಸ್ತುಸ್ಥಿತಿ: 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಯಲಹಂಕ ಮತಕ್ಷೇತ್ರ ವಿಭಾಗಿಸಿದ ಬಳಿಕ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಸತತವಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲ್ಲುವು ಸಾಧಿಸುತ್ತಿದ್ದು, ಕೈನ ಭದ್ರಕೋಟೆ ಎನಿಸಿದೆ. ಆದರೆ, ಲೋಕಸಭಾ ಚುನಾವಣೆ ಬಂದಾಗ ಈ ಪರಿಸ್ಥಿತಿಯಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿರುವುದನ್ನು ಅಂಕಿ-ಅಂಶಗಳು ಹೇಳುತ್ತವೆ.
2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ.54.5 ಮತದಾರರು ಬಿಜೆಪಿಯತ್ತ ಒಲವು ತೋರಿದ್ದರು. ಒಟ್ಟಾರೆ 2,16,035 ಮತಗಳ ಪೈಕಿ 1,08,327 ಮತಗಳು ಬಿಜೆಪಿ ಅಭ್ಯರ್ಥಿ ಸದಾನಂದಗೌಡ ಅವರ ಪರ ಚಲಾವಣೆಯಾಗಿದ್ದವು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಿ.ನಾರಾಯಣಸ್ವಾಮಿ ಅವರಿಗೆ 81,818 ಮತಗಳು ಲಭಿಸಿದ್ದವು. ಹಾಗೇ ಜೆಡಿಎಸ್‌ನ ಅಬ್ದುಲ್ ಅಜೀಂ 8,661 ಮತಗಳನ್ನು ಪಡೆದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಣಕ್ಕಿಯುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಭಾರೀ ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ.
ಸದ್ಯಕ್ಕೆ ಕ್ಷೇತ್ರದ ಮೇಲೆ ಕಾಂಗ್ರೆಸ್ ಬಿಗಿಹಿಡತ ಸಾಧಿಸಿದೆ. ಪಾಲಿಕೆ ವಿಚಾರಕ್ಕೆ ಬಂದಾಗ ಕಾಂಗ್ರೆಸ್ 4 ಮತ್ತು ಬಿಜೆಪಿ 3ರಲ್ಲಿ ಪ್ರಾಬಲ್ಯ ಮೆರೆದಿವೆ. ಆದರೆ ತೆನೆಹೊತ್ತ ಮಹಿಳೆ ಚಿಹ್ನೆ ಪಾಲಿಕೆ ಚುನಾವಣೆಯಲ್ಲಿ ಖಾತೆ ತೆರೆದಿಲ್ಲ. ಈ ಕ್ಷೇತ್ರದಲ್ಲಿ ಒಕ್ಕಲಿಗ, ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಂ ಸಮುದಾಯದವರೇ ನಿರ್ಣಾಯಕರು. ಜತೆಗೆ ವಲಸಿಗರು ಕೂಡ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.
ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಬೆಟ್ಟಹಲಸೂರು ಬಳಿ ನಿರ್ಮಿಸಿದ ಮೇಲ್ಸೇತುವೆ ಕಳೆಗೆ ರಸ್ತೆ ನಿರ್ಮಾಣ
-ಬಿಲ್ಲಮಾರನಹಳ್ಳಿ, ಕೊಡಿಗೇಹಳ್ಳಿಯಲ್ಲಿ ಶುದ್ಧ ನೀರಿನ ಘಟಕ
-ಅಗ್ರಹಾರ ಲೇಔಟ್‌ನಲ್ಲಿ ಬಸ್ ತಂಗುದಾಣ
ನಿರೀಕ್ಷೆಗಳು
-ಕೊಡಿಗೇಹಳ್ಳಿ ರೈಲ್ವೆ ಕೆಳರಸ್ತೆ ಹಾಗೂ ಜಕ್ಕೂರು ರೈಲ್ವೆ ಮೇಲುರಸ್ತೆ ನಿರ್ಮಾಣ
-ಏರ್‌ಪೋರ್ಟ್ ರಸ್ತೆಯ ವ್ಯಾಪ್ತಿ ಹಳ್ಳಿಗಳ ರಸ್ತೆ ನಿರ್ಮಾಣಕ್ಕೆ ಅನುದಾನ
-ವಾರ್ಡ್‌ಗಳು- 7
-ಬಿಜೆಪಿ -3
-ಕಾಂಗ್ರೆಸ್ – 4
-ಜೆಡಿಎಸ್ -0
-ಜನಸಂಖ್ಯೆ -6,6,433
-ಮತದಾರರ ಸಂಖ್ಯೆ -4,3,804
-ಪುರುಷರು -2,26,341
-ಮಹಿಳೆಯರು-2,07,463
2014ರ ಚುನಾವಣೆಯಲ್ಲಿ
-ಚಲಾವಣೆಯಾದ ಮತಗಳು 2,16,035 (59.18%)
-ಬಿಜೆಪಿ ಪಡೆದ ಮತಗಳು 117,795 (54.5%)
-ಕಾಂಗ್ರೆಸ್ ಪಡೆದ ಮತಗಳು 81,818 (37.9%)
-ಜೆಡಿಎಸ್ ಪಡೆದ ಮತಗಳು 8,661(4.0%)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಶಾಸಕ- ಕೃಷ್ಣಬೈರೇಗೌಡ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು-4
-ಕಾಂಗ್ರೆಸ್ ಸದಸ್ಯರು-2
-ಇತರರು-1
ಮಾಹಿತಿ: ದೇವೇಶ್ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.