ಶರಣರ ವಚನಗಳತ್ತ ಹೊಸ ದೃಷ್ಟಿ ಅಗತ್ಯ: ಡಾ| ಕಿರಣಕುಮಾರ
Team Udayavani, Mar 19, 2019, 8:35 AM IST
ಧಾರವಾಡ: ಜೀವನದ ಅನುಭವದಿಂದ ಸಂದೇಶ, ತತ್ವ, ಆದರ್ಶದ ಮೌಲ್ಯ ನೀಡಿರುವ ಬಸವಾದಿ ಶರಣರ ವಚನಗಳಲ್ಲಿ ಇರುವ ವಿಷಯಗಳನ್ನು ಪೂರ್ವಾಗ್ರಹದಿಂದ ನೋಡದೇ ಹೊಸ ದೃಷ್ಟಿಯಿಂದ ಗಮನಿಸಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಮಾಜಿ ಅಧ್ಯಕ್ಷ ಡಾ|ಎ.ಎಸ್. ಕಿರಣಕುಮಾರ ಹೇಳಿದರು.
ಕವಿವಿ ಆವರಣದ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ “ವಚನಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕತೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮರಸ್ಯ ಹಾಗೂ ಅರ್ಥಪೂರ್ಣ ಜೀವನ ನಡೆಸುವ ಬಗೆಯನ್ನು ಶರಣರು ತಮ್ಮ ವಚನಗಳಲ್ಲಿ ತಿಳಿಸಿದ್ದು, ಅದರಲ್ಲಿ ಅಡಗಿರುವ ಸಮಗ್ರ ಮಾಹಿತಿ ತಿಳಿಯಲು ನಾವು ನಿರಂತರ ಪ್ರಯತ್ನ ಮಾಡಬೇಕು. ಅದರಲ್ಲೂ ಕೆಲ ವಿಷಯವನ್ನು ಮೂಢನಂಬಿಕೆ ಅನ್ನುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಅದರಲ್ಲಿರುವ ಧ್ಯೇಯ, ತತ್ವಗಳನ್ನು ನಾವು ಮರೆತಿದ್ದೇವೆ ಅಷ್ಟೆ. ಹೀಗಾಗಿ ಅದು ನಮಗೆ ಮೂಢನಂಬಿಕೆಯಾಗಿ ಭಾಸವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಹಾಗೂ ಸಾಮಾನ್ಯರು ಮುಕ್ತ ಮನಸ್ಸಿನಿಂದ ವಿಷಯವನ್ನು ನೋಡಿದಾಗ ವೈಜ್ಞಾನಿಕ ರೀತಿಯಲ್ಲಿ ಸತ್ಯ ಹೊರತರಲು ಸಾಧ್ಯವಿದೆ ಎಂದರು.
ದೇಶದಲ್ಲಿ ಜನಸಂಖ್ಯೆ ಏರುತ್ತಾ ಸಾಗಿದಂತೆ ಭೂಮಿಯಲ್ಲಿನ ಹಾಗೂ ಭೂ ಗರ್ಭದಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಮುಗಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಹಾರ ಪೂರೈಕೆ ಕಷ್ಟವಾಗುವ ಸಾಧ್ಯತೆ ಇದೆ. ಜನಸಂಖ್ಯಾ ಹೆಚ್ಚಳದಿಂದ ಜೀವ ವೈವಿಧ್ಯತೆ ನಾಶ ನಡೆದಿದ್ದು, ಇದು ನಾಶಗೊಂಡರೆ ಮನುಕುಲವನ್ನು ವಿನಾಶದಿಂದ ಪಾರು ಮಾಡಲಾಗದು. ಅದಕ್ಕಾಗಿ ಮನುಷ್ಯ ಸ್ವಾರ್ಥ ಬಿಟ್ಟು ನಿಸ್ವಾರ್ಥತೆ ತಾಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ| ವೀರಣ್ಣ ರಾಜೂರ ಪಾಲ್ಗೊಂಡಿದ್ದರು. ನಂತರ ನಡೆದ ವಿವಿಧ ಗೋಷ್ಠಿಗಳಲ್ಲಿ
ಮುಳೇಬಿಹಾಳದ ರುದ್ರೇಶ ಕಿತ್ತೂರ ಅವರು ವಚನಗಳಲ್ಲಿ ಭೂಗೋಳ ವಿಜ್ಞಾನ, ಅಥಣಿಯ ಡಾ| ಬಾಳಾಸಾಹೇಬ ಅವರು ವಚನಗಳಲ್ಲಿ ಖಗೋಳ ವಿಜ್ಞಾನ, ಅನಂತಪುರದ ಡಾ| ಜೆ. ಸದಾನಂದ ಶಾಸ್ತ್ರಿ ಅವರು ವೇಮನ ವಚನಗಳಲ್ಲಿ ಭೌತ ವಿಜ್ಞಾನ ವಿಷಯಗಳ ಕುರಿತು ವಿಷಯ ಮಂಡಿಸಿದರು. ಕೇಂದ್ರದ ನಿರ್ದೇಶಕ ಪೊ| ಕೆ.ಬಿ.ಗುಡಸಿ ಸ್ವಾಗತಿಸಿದರು. ನಯನಾ ಹಾಗೂ ಹರಿಣಿ ನಿರೂಪಿಸಿದರು.
ಮುಂದಿನ ದಿನಗಳಲ್ಲಿ ಅಂತರಿಕ್ಷ ಪ್ರವಾಸೋದ್ಯಮ
ಬರಲಿದ್ದು, ಸಾಮಾನ್ಯ ಜನರು ಬಾಹ್ಯಾಕಾಶದಲ್ಲಿ ಹಲವು
ದಿನಗಳ ಪ್ರವಾಸ ಮಾಡಬಹುದು. ಈ ಕೆಲಸ ಈಗಾಗಲೇ
ನಡೆದಿದ್ದು, ಯಶಸ್ವಿಯಾಗುವ ಸಾಧ್ಯತೆ ಇದೆ. ಇದರಿಂದ ಭಾರತ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಗೆ ಬರಲಿದೆ.
ಡಾ| ಎ.ಎಸ್. ಕಿರಣಕುಮಾರ, ಇಸ್ರೋ ಮಾಜಿ ಅಧ್ಯಕ
ಶರಣರು, ಸಂತರು, ವಚನಕಾರರು ನಮ್ಮ ಸಂಸ್ಕೃತಿಯ ತಳಹದಿ. ಮುನುಷ್ಯನ ಆಯುಷ್ಯದಂತೆ ಭೂಮಿಗೆ ಸಹ ಆಯುಷ್ಯವಿದ್ದು, ಈಗಾಗಲೇ ಅರ್ಧ ಕಳೆದಿದೆ. ಹಿರಿಯರ ಮಾರ್ಗದರ್ಶನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ತಳಹದಿಯ ಮೇಲೆ ಸಾಮರಸ್ಯದ ಸಮಾಜ ನಿರ್ಮಿಸಬೇಕು.
ಡಾ| ಎಚ್. ಹೊನ್ಮೇಗೌಡ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.