ನೂತನ ಗೋವಾ ಸಿಎಂ ಪ್ರಮೋದ್ ಸಾವಂತ್‌ಗೆ ಬುಧವಾರ ಸದನ ಬಲ ಪರೀಕ್ಷೆ
Team Udayavani, Mar 19, 2019, 10:10 AM IST
ಪಣಜಿ : ಇಂದು ಮಂಗಳವಾರ ನಸುಕಿನ ವೇಳೆ ಗೋವೆಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿ ಶಾಸಕ ಪ್ರಮೋದ್ ಸಾವಂತ್ ಅವರು ಇಂದು ಮಧ್ಯಾಹ್ನ ಮುಖ್ಯಮಂತ್ರಿಯಾಗಿ ತನ್ನ ಪದಭಾರವನ್ನು ವಹಿಸಿಕೊಂಡರು.
40 ಸದಸ್ಯರ ಗೋವಾ ಸದನದ ಪ್ರಕೃತ ಸದಸ್ಯ ಬಲ 36 ಆಗಿದ್ದು ಸಾವಂತ್ ಅವರು ನಾಳೆ ಬುಧವಾರ ಸದನದಲ್ಲಿ ತನ್ನ ಬಹುಮತ ಸಾಬೀತು ಪಡಿಸಬೇಕಾಗಿದೆ. 14 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಅತೀ ದೊಡ್ಡ ಏಕ ಪಕ್ಷವಾಗಿದೆ. ಆ ಬಳಿಕದಲ್ಲಿ ಬಿಜೆಪಿ 12 ಸದಸ್ಯರನ್ನು ಹೊಂದಿದೆ. ಬಿಜೆಪಿ ಮಿತ್ರ ಪಕ್ಷವಾಗಿರುವ ಎಂಜಿಪಿ ಮತ್ತು ಜಿಎಫ್ಪಿ ತಲಾ ಮೂವರು ಶಾಸರಕನ್ನು ಹೊಂದಿದ್ದು ಮೂವರು ಪಕ್ಷೇತರರು ಬಿಜೆಪಿಯ ಬೆಂಬಲಕ್ಕಿದ್ದಾರೆ. ಇದಲ್ಲದೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಓರ್ವ ಶಾಸಕರೂ ಸದನದಲ್ಲಿದ್ದಾರೆ.
ಸಾವಂತ್ ಅವರ ಸಚಿವ ಸಂಪುಟದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಿದ್ದಾರೆ. ಅವರೆಂದರೆ ವಿಜಯ್ ಸರ್ದೇಸಾಯ್ ಮತ್ತು ಸುದಿನ್ ಧವಳೀಕರ್.
ಮನೋಹರ್ ಪಾರೀಕರ್ ಅವರ ನಿಧನಕ್ಕಾಗಿ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ಇರುವುದರಿಂದ ಯಾರೂ ನನ್ನನ್ನು ನೂತನ ಮುಖ್ಯಮಂತ್ರಿ ಎಂದು ಹೂಗುಚ್ಚ, ಹೂಮಾಲೆಯೊಂದಿಗೆ ಅಭಿನಂದಿಸಬಾರದು ಎಂದು ಸಾವಂತ್ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
India: ಹಿರಿಯ ನಾಗರಿಕರ ಭದ್ರತೆಗೆ ಶೀಘ್ರ ಹೊಸ ನೀತಿ: ಕೇಂದ್ರ
MUST WATCH
ಹೊಸ ಸೇರ್ಪಡೆ
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.