ಉಪ್ಪು ಒಪ್ಪು
Team Udayavani, Mar 20, 2019, 12:30 AM IST
ಅಡುಗೆ ಮನೆಯಲ್ಲಿ ಯಾವ ಪದಾರ್ಥ ಖಾಲಿಯಾದರೂ, ಉಪ್ಪು ಮಾತ್ರ ಇದ್ದೇ ಇರುತ್ತದೆ. ಉಪ್ಪಿನ ಉಪಯೋಗ ಕೇವಲ ಅಡುಗೆಗೆ ಸೀಮಿತವಾಗಿಲ್ಲ. ಮನೆಯ ಸ್ವಚ್ಛತೆಯಲ್ಲೂ ಉಪ್ಪನ್ನು ಬಳಸಬಹುದು ಅಂತ ನಿಮಗ್ಗೊತ್ತಾ?
– ಚೈನಾವೇರ್/ ಪಿಂಗಾಣಿ ಪಾತ್ರೆಯನ್ನು ಉಪ್ಪು ಹಾಕಿ ಒರೆಸಿದರೆ, ಅದರ ಮೇಲಿನ ಅಡುಗೆ ಕಲೆ ಹೋಗುತ್ತದೆ.
– ಬೆಳ್ಳಿ ಪಾತ್ರೆಗಳನ್ನು ಉಪ್ಪು ಹಾಕಿ ಉಜ್ಜಿದರೆ ಥಳಥಳ ಹೊಳೆಯುತ್ತವೆ
– ಬಾಣಲೆ ಸೀದು ಹೋದಾಗ, ಉಪ್ಪು ಹಾಗೂ ವಿನಿಗರ್‌ಅನ್ನು ಸಮಪ್ರಮಾಣದಲ್ಲಿ ಸೇರಿಸಿ ಬಿಸಿ ನೀರಿನಲ್ಲಿ ತೊಳೆದರೆ ಕಲೆ ಮಾಯ
– ಈರುಳ್ಳಿ, ಬೆಳ್ಳುಳ್ಳಿ ಹೆಚ್ಚುವಾಗ ಕೈ ವಾಸನೆ ಆಗಿದ್ದರೆ ಉಪ್ಪು ನೀರಿನಲ್ಲಿ ಕೈ ತೊಳೆಯಿರಿ
– ಬಟ್ಟೆ ಮೇಲೆ ರಕ್ತದ ಕಲೆ ಆಗಿದ್ದರೆ ಉಪ್ಪಿನ ದ್ರಾವಣದಿಂದ ಒರೆಸಿ
– ಹೊದ್ದು ಕೊಳ್ಳುವ ಕಂಬಳಿ ಮೇಲೆ ಉಪ್ಪು ಸಿಂಪಡಿಸಿದರೆ ಕ್ರಿಮಿ-ಕೀಟಗಳು ನಾಶವಾಗುತ್ತವೆ
– ಹೊಸ ಸೀರೆ, ಬಟ್ಟೆಗಳನ್ನು ಮೊದಲನೆಯ ಬಾರಿ ನೀರಿಗೆ ಹಾಕುವಾಗ ಉಪ್ಪು ಹಾಗೂ ಒಂದು ಚಮಚ ಸೀಮೆ ಎಣ್ಣೆ ಹಾಕಿದರೆ ಬಣ್ಣ ಹೋಗುವುದಿಲ್ಲ
– ಬಟ್ಟೆಯ ಮೇಲಿನ ಬೆವರಿನ ಕಲೆ ಹೋಗಿಸಲು ಬಟ್ಟೆಯನ್ನು ಸ್ವಲ್ಪ ಹೊತ್ತು ಉಪ್ಪು ನೀರಿನಲ್ಲಿ ನೆನೆಸಿಡಿ
– ತಾಮ್ರ ಹಾಗೂ ಹಿತ್ತಾಳೆ ಪಾತ್ರೆ ತೊಳೆಯುವಾಗ ಉಪ್ಪಿನ ಜೊತೆ ಹುಣಸೆಹಣ್ಣು ಸೇರಿಸಿ
– ಅಡುಗೆಮನೆಯಲ್ಲಿ ಇರುವೆಗಳ ಕಾಟ ಹೆಚ್ಚಿದ್ದರೆ, ಇರುವೆಗೂಡಿಗೆ ಉಪ್ಪು ಸಿಂಪಡಿಸಿ
ಹೀರಾ ರಮಾನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.