HOT ಅಟ್ಯಾಕ್
Team Udayavani, Mar 20, 2019, 12:30 AM IST
ಬಿಸಿಲು, ಆಯಾಸ, ದಾಹ, ನಿಶ್ಶಕ್ತಿ, ಊಟ ಸೇರದಿರುವುದು… ಇವು ಬೇಸಿಗೆಯ ಲಕ್ಷಣಗಳು. ಮುಂದಿನ ಎರಡೂ¾ರು ತಿಂಗಳು ಇವೆಲ್ಲವೂ ನಮ್ಮನ್ನು ಕಾಡುತ್ತವೆ. ಆದರೆ, ಋತುಮಾನಕ್ಕೆ ತಕ್ಕಂತೆ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಯಾವ ಸಮಸ್ಯೆಯೂ ಬರುವುದಿಲ್ಲ. ಬೇಸಿಗೆ ಬಂದಾಗ ಫ್ಯಾಷನ್ ಟ್ರೆಂಡ್ ಅಷ್ಟೇ ಅಲ್ಲ, ಲೈಫ್ಸ್ಟೈಲ್ ಅನ್ನೂ ಬದಲಿಸಿಕೊಳ್ಳಬೇಕು.
1. ಚಪಾತಿ, ರೊಟ್ಟಿ, ಪೂರಿ, ದೋಸೆಯಂಥ ಘನ ಪದಾರ್ಥಗಳನ್ನು ಬೆಳಗ್ಗಿನ ತಿಂಡಿಯಾಗಿ ಸೇವಿಸಬೇಡಿ. ಬೆಳಗ್ಗಿನ ಆಹಾರ ಹಿತ-ಮಿತವಾಗಿರಲಿ. ಇಲ್ಲವಾದರೆ, ದಿನವಿಡೀ ದಾಹ, ಆಯಾಸ ಕಾಡುತ್ತದೆ.
2. ಬೇಸಿಗೆಯಲ್ಲಿ ಶರ್ಕರಪಿಷ್ಠ ಅಧಿಕವಾಗಿರುವ ಅಕ್ಕಿ, ಗೋಧಿ ಪದಾರ್ಥಗಳ ಸೇವನೆ ಸಲ್ಲ.
3. ಮೊಸರು, ಯೋಗರ್ಟ್ ಬದಲು ಮಜ್ಜಿಗೆ ಕುಡಿಯಿರಿ. ಸುಲಭವಾಗಿ ಜೀರ್ಣವಾಗುವ ಮತ್ತು ದ್ರವರೂಪದ ಆಹಾರವನ್ನು ಹೆಚ್ಚಾಗಿ ಸೇವಿಸಿ.
4. ತಂಪುಪಾನೀಯಗಳ ಸೇವನೆ ಜೀರ್ಣಕ್ರಿಯೆ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಅದರ ಬದಲು ತಾಜಾ ಹಣ್ಣಿನ ರಸ, ಎಳನೀರು ಕುಡಿಯಿರಿ.
5. ಖಾರ ಹಾಗೂ ಮಸಾಲ ಪದಾರ್ಥಗಳು ದೇಹದ ಉಷ್ಣವನ್ನು ಹೆಚ್ಚಿಸುತ್ತವೆ. ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಕಾಳುಮೆಣಸು, ಟೊಮೇಟೊ ಕಡಿಮೆ ಬಳಸಿ.
6. ನೀವು ಸೇವಿಸುವ ಸಕ್ಕರೆ ಪ್ರಮಾಣದ ಕಡೆ ಗಮನ ಕೊಡಿ. ಬಾಯಿಯನ್ನು ತಣ್ಣಗೆ ಮಾಡುವ ಐಸ್‌ಕ್ರೀಂ, ಐಸ್‌ಕ್ಯಾಂಡಿಯನ್ನು ದಿನಾ ತಿನ್ನಬೇಡಿ.
7. ಆಹಾರದಲ್ಲಿ ಹಣ್ಣು-ಹಸಿ ತರಕಾರಿ ಹೆಚ್ಚಾಗಿರಲಿ.
8. ಒಂದೇ ಬಾರಿಗೆ ಹೊಟ್ಟೆ ಬಿರಿಯುವಂತೆ ತಿನ್ನುವ ಬದಲು, ಹಣ್ಣು, ಡ್ರೈ ಫ್ರೂಟ್ಸ್, ಜ್ಯೂಸ್, ಮಜ್ಜಿಗೆಯನ್ನು ಆಗಾಗ್ಗೆ ಸೇವಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.