ದಿಢೀರ್‌ ಬಂದ ಮಂಡ್ಯ ಗೌಡ್ತಿ, ಕಳವಳ ಆಗೈತಿ


Team Udayavani, Mar 20, 2019, 1:19 AM IST

sumalata.jpg

ಮಂಡ್ಯ: ಜೆಡಿಎಸ್‌ ಭದ್ರ ಕೋಟೆ ಎನಿಸಿರುವ ಮಂಡ್ಯ ಜಿಲ್ಲೆಗೆ ಸುಮಲತಾ ಅವರ ಅನಿರೀಕ್ಷಿತ ಪ್ರವೇಶ ಕ್ಷೇತ್ರದ ಚುನಾವಣೆಗೆ, ಜಿಲ್ಲಾ ರಾಜಕಾರಣಕ್ಕೆ ಹೊಸ ತಿರುವನ್ನು ತಂದುಕೊಟ್ಟಿದೆ. ಅಲ್ಲದೆ ದೇವೇಗೌಡರ ಮೊಮ್ಮಗ ನಿಖೀಲ್‌ ಸ್ಪರ್ಧೆಯಿಂದ ಕುಟುಂಬ ರಾಜಕಾರಣದ ಜತೆಗೆ ಸ್ಥಳೀಯ ನಾಯಕತ್ವ ಹೆಚ್ಚು ಮಹತ್ವ ಪಡೆದು ಕೊಂಡಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆ, ಅಭಿ ವೃದ್ಧಿ ವಿಚಾರ ಗೌಣವಾಗಿದ್ದು, ಸುಮಲತಾ ಸ್ಪರ್ಧೆ ಪ್ರಮುಖ ವಿಷಯ. ಜತೆಗೆ ಮೈತ್ರಿ ಸರಕಾರದ ನಾಯಕರಿಗೆ ಇರಿಸು ಮುರುಸನ್ನೂ ಉಂಟು ಮಾಡಿದೆ.

ಸಮಸ್ಯೆಗಳು ಗೌಣ
ಜಿಲ್ಲೆಯ ರೈತರನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಕುಡಿಯಲು, ನೀರಾವರಿಗೆ ನೀರಿನ ಸಮಸ್ಯೆ ಇದ್ದದ್ದೇ. ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಗಂಭೀರ ಪ್ರಯತ್ನ ನಡೆದಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ. ಕೆಆರ್‌ಎಸ್‌ ಪಕ್ಕದಲ್ಲೇ ಗಣಿಗಾರಿಕೆ ನಡೆದಿದ್ದರೂ ತಡೆಯುವ ಕೆಲಸವಾಗುತ್ತಿಲ್ಲ. ಈ ಮಧ್ಯೆ, ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌ನಲ್ಲಿ ಮನೋರಂಜನ ಪಾರ್ಕ್‌ ನಿರ್ಮಿಸಲು ರಾಜ್ಯ ಸರಕಾರ ಮುಂದಾ ಗಿದ್ದು, ಇದು ಸ್ಥಳೀಯರ ಪ್ರತಿಭಟನೆಗೂ ಕಾರಣವಾಗಿದೆ.

ಅನಿರೀಕ್ಷಿತ ಪ್ರವೇಶದ ಆತಂಕ
ಸುಮಲತಾ ರಾಜ ಕೀಯ ಪ್ರವೇಶವನ್ನು ಯಾರೂ ನಿರೀಕ್ಷಿಸಿರ ಲಿಲ್ಲ. ಅವರ ಆಗಮನ ದಿಂದ ಜೆಡಿಎಸ್‌ಗೆ
ಸುಲಭ ತುತ್ತಾಗುತ್ತಿದ್ದ ಕ್ಷೇತ್ರ ಈಗ ಬಿಸಿತುಪ್ಪವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಈಗಾಗಲೇ ಜಿಲ್ಲಾದ್ಯಂತ ಸಂಚರಿಸುತ್ತಾ, ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಪುತ್ರ ನಿಖೀಲ್‌ರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿ ಪೂರ್ವತಯಾರಿ ಆರಂಭಿಸಿದ್ದ ಸಂದರ್ಭದಲ್ಲೇ ಸುಮಲತಾ ಸ್ಪರ್ಧೆಗೆ ಆಸಕ್ತಿ ವಹಿಸಿದ್ದು ಜೆಡಿಎಸ್‌ ನಾಯಕ ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಬಿಜೆಪಿ ಅಸ್ತ್ರ
ಬಿಜೆಪಿ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆಯೋ ಇಲ್ಲ ಸುಮಲತಾರನ್ನು ಬೆಂಬಲಿಸುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಒಗ್ಗೂಡಿ ಜೆಡಿಎಸ್‌ ಕೈ ಹಿಡಿದಿತ್ತು. ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಚೆಲ್ಲಿದರೂ ಪ್ರಗತಿಯ ಚಿತ್ರಣ ಕಾಣುತ್ತಿಲ್ಲ. ಬಹು ನಿರೀಕ್ಷಿತ ರೈತರ ಸಾಲಮನ್ನಾದಲ್ಲೂ ಸ್ಪಷ್ಟತೆ ದೊರಕಿಲ್ಲ. 9 ತಿಂಗಳಿನಿಂದ ಮಂಡ್ಯ ರಸ್ತೆಗಳ ಸ್ಥಿತಿಯೂ ಬದಲಾಗಿಲ್ಲ. ಇದೆಲ್ಲವೂ ಬಿಜೆಪಿಗೆ ಚುನಾವಣಾ ಅಸ್ತ್ರ. 

ಸುಮಲತಾ ಅಸ್ತ್ರ
ಮಂಡ್ಯದ ಸೊಸೆ ಎಂಬ ಅಭಿಮಾನ, ಸ್ಥಳೀಯ ಕಾಂಗ್ರೆಸ್‌ ನಾಯಕರ ಪರೋಕ್ಷ ಬೆಂಬಲ, ಚಿತ್ರರಂಗದ ಒಕ್ಕೊರಲ ಬೆಂಬಲ, ಅಂಬರೀಶ್‌ ಅಭಿಮಾನಿ ಬಳಗ, ಪ್ರಬುದ್ಧ ಮಾತು, ನಡೆ ಸುಮಲತಾರ ಪ್ಲಸ್‌ ಪಾಯಿಂಟ್‌.

ಜೆಡಿಎಸ್‌ ಚುನಾವಣ ಅಸ್ತ್ರ
ಒಕ್ಕಲಿಗ ಸಮುದಾಯ ಪಕ್ಷದ ಹಿಂದಿರುವುದು, ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಶಾಸಕರಿರುವುದು, ರಾಜ್ಯದಲ್ಲಿ ಅಧಿಕಾರ, ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಕೋಟ್ಯಂತರ ರೂ. ಚೆಲ್ಲಿರುವುದು, ಪ್ರಬಲ ಸಂಘಟನೆ, ದೇವೇಗೌಡರ ವರ್ಚಸ್ಸು ಜೆಡಿಎಸ್‌ಪ್ಲಸ್‌ ಪಾಯಿಂಟ್‌.

ಮಂಡ್ಯ ಮಂಜುನಾಥ್‌

ಟಾಪ್ ನ್ಯೂಸ್

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

sensex

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

hk-patil

Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

1-russia

Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

1-INS

Indian Navy; ಪಾಕ್,ಚೀನಾದ ಮೂಲೆ ಮೂಲೆಗೂ ತಲುಪುವ ಕ್ಷಿಪಣಿ ಪರೀಕ್ಷೆ

1-JPC

JPC ಅವಧಿ ವಿಸ್ತರಣೆ: ವಕ್ಫ್ ಮಸೂದೆ ಮಂಡನೆ ಮುಂದಿನ ವರ್ಷಕ್ಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.