ಲಕ್ಷ ಲಕ್ಷ ಭಕ್ತರ ಸಮ್ಮುಖ ಶ್ರೀಕಂಠೇಶ್ವರ ರಥೋತ್ಸವ


Team Udayavani, Mar 20, 2019, 7:23 AM IST

m4-laksha.jpg

ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರೀಕಂಠೇಶ್ವರ ಪಂಚ ಮಹಾರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿ, ವೈಭವಯುತವಾಗಿ ಜರುಗಿತು. 

ಚೈತ್ರ ಮಾಸ ಮಂಗಳವಾರ ಬೆಳಗ್ಗೆ ಮೀನ ಲಗ್ನದಲ್ಲಿ ನಂಜುಂಡೇಶ್ವರನನ್ನು ಲಲಿತಾ ಚಂದ್ರಶೇಖರ ನಾಮಧೇಯದೊಂದಿಗೆ ರಥಾರೂಢನಾಗಿಸಿದ ಭಕ್ತರು 110 ಟನ್‌ ಭಾರದ 76 ಅಡಿ ಎತ್ತರದ ಭವ್ಯ ರಥವನ್ನು ಸಾವಧಾನವಾಗಿ ಎಳೆದು ರಥದಲ್ಲಿ ಪವಡಿಸಿದ ಭವರೋಗ ವೈದ್ಯನಿಗೆ ಹಣ್ಣು-ಜವನ ಎಸೆದು ಭಕ್ತಿ ಮೆರೆದರು.

ಚತುರ್ಮುಖ ಬ್ರಹ್ಮನನ್ನೇ ಸಾರಥಿಯನ್ನಾಗಿಸಿದ ರಥದ ಹಗ್ಗ ಹಿಡಿದು ಜಯಘೋಷದ ನಡುವೆ ಎಳೆದಾಗ ಆರಾಧ್ಯ ದೈವ ರಚ್ಚೆ ಹಿಡಿದಂತಾಗಿ ರಥ ಎಷ್ಟು ಎಳೆದರೂ ಮುಂದೆ ಸಾಗದೆ ಭಕ್ತರೆಲ್ಲ ಚಿಂತಾಕ್ತಾಂತರಾಗಿದ್ದರು.

ತುಂಡಾದ ಹಗ್ಗ: ಶ್ರೀಕಂಠಪ್ಪ ಪವಡಿಸಿದ ರಥವನ್ನು ಭಕ್ತರು ರಭಸದಿಂದ ಎಳೆದಾಗ ತೇರಿಗೆ ಕಟ್ಟದ ಭಾರಿ ಗಾತ್ರದ ಹಗ್ಗವೇ ತುಂಡಾಗಿ ಎಳೆಯುತ್ತಿದ್ದ ಭಕ್ತರು ಒಬ್ಬರ ಮೇಲೊಬ್ಬರು ಉರುಳಿ ಬಿದ್ದರು.

ರಥ ಏನಾಯಿತು ಎಂದು ನೋಡಿದವರಿಗೆ ಹಗ್ಗ ತುಂಡಾಗಿರುವುದು ಗೊತ್ತಾಗಿ ನಕ್ಕು ಸಂಭ್ರಮಿಸಿದರು. ದೇವಾಲಯದ ಅರ್ಚಕವೈಂದವರಲ್ಲೊಬ್ಬರಾದ ಮಂಜು ಹಾಗೂ ದೇವಾಲಯದ ಅಧಿಕಾರಿ ಗಂಗಯ್ಯ ಅವರಿಗೆ ತುಂಡಾದ ಹಗ್ಗವೇ ಮುಖಕ್ಕೆ ಹೊಡೆದು ಗಾಯಗೊಂಡರು.

2 ಗಂಟೆಗಳ ಕಾಲ ರಥ ಸ್ತಬ್ಧ: ಹಗ್ಗ ತುಂಡಾದಾಗ ಹೊಸ ಹಗ್ಗ ಕಟ್ಟಲು ಶ್ರಮ ಪಡಬೇಕಾಯಿತು. ಅಂತು ಹಗ್ಗ ಕಟ್ಟಿ ಎಳೆದಾಗ ಅದೂ ತುಂಡಾಯಿತು. ಹಗ್ಗ ಕಟ್ಟುವುದು ಅದು ತುಂಡಾಗುವುದು ಪದೇ ಪದೆ ನಡೆದು ಇತ್ತು ಏಳು ಗಂಟೆಗೆರಥ ಏರಿದ ಶ್ರೀಕಂಠೇಶ್ವರ ಕೊನೆಗೆ ಅಲ್ಲಿಂದ ಚಲಿಸಿದ್ದು 9.45 ಕ್ಕೆ ನಂತರ ದೇವಾಲಯದ ಬಲಭಾಗಕ್ಕೆ ಬಂದ ರಥ ಮತ್ತೆ ಮೊಂಡಾಟ ನಡೆಸಿ ಮುಂದೆ ಸಾಗಿ  11.5 ಕ್ಕೆ ಸರಿಯಾಗಿ ದೇವಾಲಯದ ಎಡಭಾಗದ ಸ್ವಸ್ಥಾನ ಸೇರಿತು.

ಬೆಳಗ್ಗೆ 6.45 ಗಂಟೆಗೆ ಆಗಮಿಕ ನಾಗಚಂದ್ರ ದೀಕ್ಷಿತರು ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸರ ನೇತೃತ್ವದಲ್ಲಿ ನಡೆದ ವೇದಘೋಷ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ರಥಾರೂಢನಾಗಿರುವ ಶ್ರೀಕಂಠೇಶ್ವರನ ಗೌತಮ ರಥಕ್ಕೆ  ಉಪವಿಭಾಗಾಧಿಕಾರಿ ಶಿವೇಗೌಡ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಹಾಗೂ ಗಂಗಯ್ಯನವರ ನೇತೃತ್ವದಲ್ಲಿ  ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಹರ್ಷವರ್ಧನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಬಾರಿ ಅರವಟ್ಟಿಗೆ ಹಾಗೂ ಪ್ರಸಾದ ವಿತರಣೆಗೆ ಜಿಲ್ಲಾಡಳಿತ ಸಾಕಷ್ಟು ನಿಬಂಧನೆಗಳನ್ನು ವಿಧಿಸಿದ್ದರೂ ಭಕ್ತರು ಅದನ್ನು ಗಣನೆಗೆ ತೆಗೆದುಕೊಳ್ಳದೇ ಮಾರು ಮಾರಿಗೆ ನೀರು, ಮಜ್ಜಿಗೆ, ಉಪಾಹಾರ, ಹಣ್ಣು ಹಂಪಲುಗಳ ಸಮೇತ  ಪ್ರಸಾದ ವಿತರಿಸಿದರು.

ಜೆಸಿಬಿ, ಕ್ರೇನ್‌ ನೆರವು: ರಥ ಮೇಲೇಳದೆ ಮೊಡಾಟ ಮಾಡಿದಾಗ ಗೌತುಮ ರಥವನ್ನು ಮೇಲೆತ್ತಲು ಜೆಸಿಬಿ ಹಾಗೂ ಕ್ರೇನ್‌ ಬಳಸಿದಾಗ ರಥ ಮೇಲೇಳುವ ಬದಲು ರಥದ ಒಂದು ಭಾಗಗಕ್ಕೆ ಜೆಸಿಬಿ ಯಿಂದ ಸ್ವಲ್ಪ ಹಾನಿಯೂ ಆದ ಘಟನೆಯೂ ನಡೆಯಿತು. ಬಿಸಿಲೇರುವ ಮೊದಲೇ ಗಣಪತಿ ರಥ ಹೊರಟು ಕೆಲವೇ ನಿಮಷಗಳಲ್ಲಿ ಸ್ವಸ್ಥಾನಕ್ಕೆ ಬಂದರೂ ಅಪ್ಪ ನಂಜುಂಡಪ್ಪ‌ ಮಾತ್ರ ಸ್ಥಳ ಕದಲಲೇ ಇತರಲಿಲ್ಲ.

ಕಡೆಗೂ ಗೌತಮ ರಥದ ಚಲನೆ ಆರಂಭಗೊಂಡ ನಂತರ ಒಂದೊಂದಗಾಗಿ ಚಂಡಿಕೇಶ್ವರ, ಷಣ್ಮುಖ, ಪಾರ್ವತಿಯರು ಪವಡಿಸಿದ ಐದೂ ರಥಗಳನ್ನು ಲಕ್ಷಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ  ಎಳೆದ ಭಕ್ತರು ಪುನೀತರಾದರು. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌, ಡಿವೈಎಸ್ಪಿ ಜಯವಂತ , ಎಸ್‌ಐಗಳಾದ ಆನಂದ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್ ಆಯೋಜಿಸಲಾಗಿತ್ತು.

ಸಂಘಟನೆಗಳಿಂದ ಪ್ರಸಾದ ವ್ಯವಸ್ಥೆ: ಶ್ರೀಕಂಠೇಶ್ವರ ಸೇವಾ ಸಂಘ ಬೆಂಗಳೂರು, ನಂಜುಂಡೇಶ್ವರ ಸೇವಾ ಸಂಘ ದೊಡ್ಡಬಳ್ಳಾಪುರ, ಓಂ ಯುವಕರ ಸಂಘ ಬೆಂಗಳೂರು,  ಶ್ರೀಕಂಠೇಶ್ವರ ಟೀವಿ  ಸೆಂಟರ್‌ ನಂಜನಗೂಡು. ನೇಸ್ಲೆ ಗೆಳಯರ ಬಳಗ , ನಂಜನಗೂಡು, ಗ್ರಾಮಲೆಕ್ಕಾಧಿಕಾರಿಗಳ ಸಂಘ, ಬ್ರಾಹ್ಮಣ ಯುವಕರ ಸಂಘ, ವೀರಶೈವ ಯುವಕರ ಸಂಘ, ಆರ್ಯವೈಶ್ಯ ಯುವಕರ ಸಂಘ, ಜೈನ ಸಂಘ ಸೇರಿದಂತೆ ನೂರಾರು ಸಂಘ ಸಂಸ್ಥೆಗಳು ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಪುಳಿಯೋಗರೆ, ಚಿತ್ರಾನ್ನ, ಮೊಸರನ್ನದ ಪ್ರಸಾದ ವಿತರಿಸಿದರು.

ಬೆಂಗಳೂರಿನ ರಾಂಕುಮಾರ ಎಂಬುವವರು 25 ಲೀಟರ್‌ನ 2.500 ಕ್ಯಾನ್‌ ಶುದ್ಧ ಕುಡಿಯುವ ನೀರನ್ನು  ವಿತರಿಸಿದರೆ, ಬೆಂಗಳೂರಿನ ಶ್ರೀಕಂಠೇಶ್ವರ ಸೇವಾ ಸಂಸ್ಥೆಯವರು ಶುದ್ಧ ತುಪ್ಪದಿಂದ ತಯಾರಿಸಲಾದ ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಭಕ್ತರಿಗೆ ನೀಡಿದರು. ಬೆಂಗಳೂರಿನ ಅಣಂತಸ್ವಾಮಿ ಅವರು ಶ್ರೀಕಂಠೇಶ್ವರನ ರಥದ ಹೂವಿನ ಪೂರ್ಣ ಅಂಲಕಾರದ ಸೇವೆ ಸಲ್ಲಿಸಿದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.