ಇವತ್ತು ಸುಮಲತಾ ಕಣ್ಣಲ್ಲಿ ಯಶ್‌ ಕಣ್ಣೀರು ಕಂಡಿದ್ಯಾಕೆ?


Team Udayavani, Mar 20, 2019, 1:06 PM IST

sum-nomination-20-3.jpg

ಮಂಡ್ಯ: ಸುಮಲತಾ ಅಂಬರೀಷ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದರೊಂದಿಗೆ ರಾಜ್ಯದ ‘ಹೈ ವೋಲ್ಟೇಜ್‌’ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯ ಹಣಾಹಣಿಗೆ ವೇದಿಕೆ ಸಿದ್ಧವಾದಂತಾಗಿದೆ. ಒಂದೆಡೆ ‘ಕೈ-ತೆನೆ’ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರದ ಜೆಡಿಎಸ್‌ ಶಾಸಕರ ಬಲವಿದ್ದರೆ, ಸುಮಲತಾ ಅಂಬರೀಷ್‌ ಅವರ ಪರ ದರ್ಶನ್‌, ಯಶ್‌ ಸಹಿತ ಕನ್ನಡ ಚಿತ್ರರಂಗದ ಬೆಂಬಲವಿದೆ ಮಾತ್ರವಲ್ಲದೇ ಮಂಡ್ಯದ ಗಂಡು ಅಂಬರೀಷ್‌ ಅವರ ಪರವಾದ ಅನುಕಂಪದ ಅಲೆಯೂ ಸಾಥ್‌ ನೀಡುವ ನಿರೀಕ್ಷೆಯಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸುಮಲತಾ ಅವರು ಇಂದು ಮಂಡ್ಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದ ಬಳಿಕ ಸಿಲ್ವರ್‌ ಜ್ಯುಬಿಲಿ ಮೈದಾನದಲ್ಲಿ ನಡೆಸಿದ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸಮೂಹವೇ ಸಾಕ್ಷಿಯಾಗಿತ್ತು. ಬೃಹತ್‌ ಜನಸಮೂಹವನ್ನುದ್ದೇಶಿಸಿ ಸುಮಲತಾ ಅಂಬರೀಶ್‌ ಅವರು ಭಾವನಾತ್ಮಕ ಭಾಷಣ ಮಾಡಿದರೆ, ಅಭಿಷೇಕ್‌, ದರ್ಶನ್‌ ಮತ್ತು ಯಶ್‌ ಅವರು ಮಂಡ್ಯ ಜನರ ಸ್ವಾಭಿಮಾನವನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದರು.

ತಮಗೆ ಸಿಕ್ಕ ಅವಕಾಶದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಬಹಳ ಸೂಕ್ಷ್ಮವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಮುಖ್ಯವಾಗಿ ತಮ್ಮ ಹಾಗೂ ದರ್ಶನ್‌ ವಿರುದ್ಧ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಅಪಪ್ರಚಾರದ ಬಗ್ಗೆ ರಾಕಿಂಗ್‌ ಸ್ಟಾರ್‌ ಇವತ್ತು ಸೂಕ್ತ ಪ್ರತ್ಯುತ್ತರವನ್ನೇ ನೀಡಿದರು. ತಮ್ಮಿಬ್ಬರ ಕುರಿತಾಗಿ ವಿರೋಧಿ ಪಾಳಯದ ಕೆಲವರು ಕೀಳಾಗಿ ಮಾತನಾಡುತ್ತಿರುವ ಕಾರಣ ಸುಮಲತಾ ಅವರು ತುಂಬಾ ನೊಂದುಕೊಂಡಿದ್ದರೆಂತೆ ಮಾತ್ರವಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಕಣ್ಣೀರು ಸಹ ಹಾಕಿದ್ದರಂತೆ. ಆದರೆ ಇದನ್ನು ಗಮನಿಸಿದ ಯಶ್‌ ಅವರು ಸುಮಲತಾ ಅವರನ್ನು ಸಮಾಧಾನಪಡಿಸಿದ್ದಾರೆ. ‘ನಾವೇನೂ ತಪ್ಪು ಮಾಡುತ್ತಿಲ್ಲ, ಆಧಿಕಾರದ ಆಸೆಗೋ ಅಥವಾ ಬೇರಿನ್ಯಾವುದಕ್ಕೋ ನಾವಿದನ್ನು ಮಾಡ್ತಾ ಇಲ್ಲ. ಅಷ್ಟಾಗಿಯೂ ನಾವು ಮಾಡುತ್ತಿರುವುದು ತಪ್ಪೇ ಎಂದು ಅವರೆಲ್ಲ ಅಂದುಕೊಂಡಿದ್ರೆ ಈ ತಪ್ಪನ್ನು ನಾವು ಸಾವಿರ ಬಾರಿ ಮಾಡುತ್ತೇವೆ’ ಎಂದು ಭರ್ಜರಿ ಚಪ್ಪಾಳೆಯ ನಡುವೆ ಯಶ್‌ ನುಡಿದರು.

‘ಅಂಬರೀಷ್‌ ಅವರು ನಮಗೆ ಅಷ್ಟೆಲ್ಲಾ ಮಾಡಿದ್ದಾರೆ. ಸುಮ್ನೆ ನಾಟಕ, ತೋರಿಕೆಗೆ ನಾವಿಲ್ಲಿ ಬಂದಿಲ್ಲ. ಸಿನೇಮಾದವರೇನು ಅಂಟಾರ್ಟಿಕಾ ಅಥವಾ ಪಾಕಿಸ್ಥಾನದಿಂದ ಬಂದವರಲ್ಲ. ನಾವೂ ಇಲ್ಲಿಯವರೆ, ಇಲ್ಲಿನ ಕಬ್ಬಿನ ಹಾಲು ಕುಡಿದೇ ಬೆಳೆದವರು ಈ ಊರಿನ ಕೆರೆಗಳಲ್ಲಿ ಈಜಾಡಿದವರು. ಇವತ್ತೇನೋ ನಮ್ಮ ನಮ್ಮ ಬದುಕು ಕಟ್ಟಿಕೊಳ್ಳುವುದಕ್ಕೆ ಮಹಾನಗರಕ್ಕೆ ಹೋಗಿದ್ದೇವೆ, ನಾವು ಅನುಕೂಲಕ್ಕೆ ಹಗಲು-ರಾತ್ರಿ ಚೇಂಜ್‌ ಆಗುವವರಲ್ಲ. ಅದೆಲ್ಲಾ ರಾಜಕೀಯದಲ್ಲಿ ಮಾತ್ರ, ಸಿನೇಮಾದಲ್ಲಿ ಅದಿಲ್ಲ. ದಯವಿಟ್ಟು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಇಡೀ ಕರ್ನಾಟಕದ ಋಣ ನಮ್ಮ ಮೇಲಿದೆ, ಅದರಲ್ಲಿ ಮಂಡ್ಯದ ಜನರ ಋಣ ಸ್ವಲ್ಪ ಜಾಸ್ತಿನೇ ಇದೆ’ ಎಂದು ತಮ್ಮ ಮತ್ತು ದರ್ಶನ್‌ ಸಂಬಂಧದ ಕುರಿತಾಗಿ ಯಶ್‌ ಮಾರ್ಮಿಕವಾಗಿ ನುಡಿದರು. ಈ ನಾಡಿನ ಜನತೆ ಸುಮ್‌ ಸುಮ್ನೆ ಯಾರನ್ನೂ ತಲೆ ಮೇಲೆ ಇಟ್ಟುಕೊಂಡು ಮೆರೆಸೋರಲ್ಲ. ಕೋಟಿ ಜನರ ಮಧ್ಯೆ ನಮ್ಮನ್ನು ಇಷ್ಟಪಡ್ತಾರೆ ಅಂದ್ರೆ ನಮ್ಮಲ್ಲೇನೋ ಯೋಗ್ಯತೆಯನ್ನು ಅವರು ಕಂಡಿದ್ದಾರೆ ಎಂದೇ ಅರ್ಥ ಎಂದು ಯಶ್‌ ಇದೇ ಸಂದರ್ಭದಲ್ಲಿ ಹೇಳಿದರು.

‘ನೀವು ಧೈರ್ಯವಾಗಿರಿ, ಇವತ್ತು ಇಲ್ಲಿ ಬಂದಿರೋರು ಯಾರೂ ದುಡ್ಡಿಗೋ ಬಲವಂತಕ್ಕೋ ಅಥವಾ ತೋರಿಕೆಗೋ ಬಂದಿರೋರಲ್ಲ. ಅಥವಾ ನನ್ನನಾಗ್ಲಿ ದರ್ಶನ್‌ ಅವರನ್ನಾಗಲಿ ನೋಡ್ಲಿಕ್ಕೆ ಬಂದಿರೋರೂ ಅಲ್ಲ ಇವರೆಲ್ಲಾ ಬಂದಿರೋದು ಅಂಬರೀಷ್‌ ಮತ್ತು ನಿಮ್ಮ ಮೇಲಿನ ಪ್ರೀತಿಯಿಂದ. ನಮ್ಮ ಕಣ್ಣಿಗೆ ಕಾಣುವಷ್ಟು ದೂರ ನಿಂತಿದ್ದ ಈ ಜನಸಾಗರ ಅಣ್ಣನ ಮೇಲಿನ ಪ್ರೀತಿಯಿಂದ ಬಂದಿರೋದು. ಇದನ್ನು ಎಲ್ರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮಂಡ್ಯದ ಜನರನ್ನು ಯಾವತ್ತೂ ಯಾರೂ ಹಗುರವಾಗಿ ತಗೋಬೇಡಿ. ಸ್ವಾಭಿಮಾನದ ಪ್ರಶ್ನೆ ಬಂದಾಗ ಮನೆ ಮಠ ಕಳ್ಕೊಂಡ್ರೂ ಸರಿ ಸ್ವಾಭಿಮಾನ ಪಡ್ಕೊಂಡು ನಿಂತ್ಕೊಳ್ಳೋರು ಮಂಡ್ಯದ ಜನ. ಅಂತದ್ರಲ್ಲಿ ಮನೆ ಮಗಳು ಬಂದು ನಿಂತ್ಕೊಂಡಾಗ ಅವರನ್ನ ಸೋಲಿಸೋದು ಉಂಟಾ?’ ಎಂದು ಮಂಡ್ಯದ ಮತದಾರರನ್ನು ಭಾವನಾತ್ಮಕವಾಗಿ ತಟ್ಟುವ ಕೆಲಸವನ್ನು ರಾಕಿಂಗ್‌ ಸ್ಟಾರ್‌ ಮಾಡಿದರು.

ದಯವಿಟ್ಟು ನೀವೆಲ್ರೂ ಒಳ್ಳೇತನಕ್ಕೆ ಬೆಲೆ ಕೊಡಿ. ನಿಮ್ಮ ಮನಸ್ಸಿಗೆ ಏನು ಸರಿ ಅನ್ಸುತ್ತೋ ಅದನ್ನು ಮಾಡಿ. ಜನ ಬದಲಾಗ್ಬಹುದು ಆದ್ರೆ ಭಾವನೆಗಳು ಬದಲಾಗೋದಿಲ್ಲ. ಅಕ್ಕನ ಕಡೆ ಪ್ರೀತಿ ತೋರ್ಸಿ. ಅವರು ಸುಮ್ನೆ ಬಂದು ಹೋಗೋರಲ್ಲ, ಸೋತ್ರೂ ಗೆದ್ರೂ ಅವರು ಮಂಡ್ಯದಲ್ಲೇ ಇರ್ತಾರೆ ಇಲ್ಲೇ ಇದ್ದು ನಿಮ್ಮ ಪ್ರೀತಿನ ಬೆಳೆಸಿಕೊಂಡು ಹೋಗ್ತಾರೆ. ನೀವು ಅವರನ್ನು ಗೆಲ್ಸಿದ್ರೆ ಮಂಡ್ಯ ನೆಲದ ಸೊಗಡನ್ನು ದೂರದ ಡೆಲ್ಲಿವರೆಗೂ ಒಯ್ತಾರೆ ಅಕ್ಕನ ಮೇಲೆ ನಿಮ್ಮ ಮನೆ ಮಗಳ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರ್ಲಿ ಎಂದು ಹೇಳುವ ಮೂಲಕ ಯಶ್‌ ತಮ್ಮ ಮಾತನ್ನು ಮುಗಿಸಿದರು.

ಟಾಪ್ ನ್ಯೂಸ್

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.