ಟ್ಯಾಂಕರ್ ನೀರಿನ ನಿರೀಕ್ಷೆಯಲ್ಲಿ ಯಡ್ತಾಡಿ ಗ್ರಾಮಸ್ಥರು
Team Udayavani, Mar 21, 2019, 1:00 AM IST
ಕೋಟ: ಕೋಟ ಹೋಬಳಿಯ ಯಡ್ತಾಡಿ, ವಡ್ಡರ್ಸೆ ಗ್ರಾ.ಪಂ. ಹಾಗೂ ಸಾಲಿಗ್ರಾಮ ಪ.ಪಂ.ವ್ಯಾಪ್ತಿಯ ಹಲವು ಕಡೆಗಳಲ್ಲಿ ಒಂದು ತಿಂಗಳಿಂದ ನೀರಿನ ಸಮಸ್ಯೆ ಇದೆ. ಪ್ರಸ್ತುತ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆ ಅದೇ ರೀತಿ ಮುಂದುವರಿದಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಗ್ರಾ.ಪಂ. ಮುಂದಾಗಿದೆ. ಇತ್ತ ಸಾಲಿಗ್ರಾಮ ಪ.ಪಂ. ತನ್ನ ನೀರಿನ ಮೂಲಗಳಾದ ಬಾವಿಗಳನ್ನು ರಿಪೇರಿ ಮಾಡುವ ಮೂಲಕ ಸಮಸ್ಯೆ ಬಹುತೇಕ ಪರಿಹರಿಸಿಕೊಳ್ಳಲು ಮುಂದಾಗಿದೆ ಹಾಗೂ ವಡ್ಡರ್ಸೆ ಗ್ರಾ.ಪಂ.ನ ಒಂದು ವಾರ್ಡ್‌ನ ಸಮಸ್ಯೆ ಬಗೆಹರಿದಿದೆ.
ಯಡ್ತಾಡಿ ಗ್ರಾ.ಪಂ.
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಸಾೖಬ್ರಕಟ್ಟೆ, ಜನತಾ ಕಾಲನಿ ಸೇರಿದಂತೆ ಕಾಜ್ರಲ್ಲಿ, ಅಲ್ತಾರು ಕ್ಯಾದಿಕೆರೆ, ಬಳೆಗಾರ್‌ಬೆಟ್ಟು, ಗರಿಕೆಮಠ ಮುಂತಾದ ಕಡೆಗಳ ಸುಮಾರು 350 ಅಧಿಕ ಮನೆಗಳಲ್ಲಿ ಕಳೆದ ಒಂದು ತಿಂಗಳಿಂದ ನೀರಿನ ಸಮಸ್ಯೆ ಇದ್ದು, ಈವರೆಗೆ ಪರಿಹಾರ ಸಿಕ್ಕಿಲ್ಲ. ತತ್‌ಕ್ಷಣ ನೀರು ಸರಬರಾಜಿಗೆ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ. ಆದರೆ ಸರಕಾರಿ ಬಾವಿ, ಬೋರ್‌ಗಳಲ್ಲಿ ನೀರಿಲ್ಲ. ಇಲ್ಲಿನ ಚಂಡೆ ಬೋರ್‌ವೆಲ್‌ನಲ್ಲಿ ಸ್ವಲ್ಪ ನೀರಿದ್ದರೂ ಟ್ಯಾಂಕ್ ವ್ಯವಸ್ಥೆ ಇÉಲ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ಗ್ರಾ.ಪಂ. ಟ್ಯಾಂಕರ್ ನೀರು ಸರಬರಾಜಿಗೆ ಟೆಂಡರ್ ಕರೆದಿದೆ.
ರಂಗನಕೆರೆ ಭಾಗದ ಸಮಸ್ಯೆ ಪರಿಹಾರ
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ರಂಗನಕೆರೆ ಕಾಲನಿಯ ನೂರಾರು ಮನೆಗಳಿಗೆ ನೀರಿನ ಸಮಸ್ಯೆ ಇತ್ತು. ಇದೀಗ ಈ ಭಾಗದಲ್ಲಿ ಬೋರ್‌ವೆಲ್ ನಿರ್ಮಿಸಿ ನೀರು ದೊರೆತಿದೆ. ಹೀಗಾಗಿ ಇಲ್ಲಿನ ಸಮಸ್ಯೆ ಬಹುತೇಕ ಬಗೆಹರಿದಿದೆ.
ವಡ್ಡರ್ಸೆ 1 ವಾರ್ಡ್ ಸಮಸ್ಯೆಗೆ ಮುಕ್ತಿ
ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ಕಾವಡಿ 1ನೇ ವಾರ್ಡ್‌ನ ಕಲ್ಲುಗದ್ದೆ, ಸಣಗಲ್ಲು ಪ್ರದೇಶದಲ್ಲಿ ಮತ್ತು ಮಧುವನ ಕಾಲನಿಯಲ್ಲಿ ನೀರಿನ ಸಮಸ್ಯೆ ಇತ್ತು. ಇದೀಗ ಇಲ್ಲಿನ ಮಾನಂಬಳ್ಳಿಯಲ್ಲಿ ಬೋರ್‌ವೆಲ್ ನಿರ್ಮಿಸಿದ್ದು ಸಾಕಷ್ಟು ನೀರು ದೊರೆತಿದ್ದು ಸಮಸ್ಯೆ ಬಗೆಹರಿದಿದೆ.
ಸಾಲಿಗ್ರಾಮದ ಸಮಸ್ಯೆಗೆ ಪರಿಹಾರ ಯತ್ನ
ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ 3 ವಾರ್ಡ್‌ಗಳ ಗುಂಡ್ಮಿ, ಯಕ್ಷಿಮಠ, ಅಲಿತೋಟ, ಪಾರಂಪಳ್ಳಿ, ಚುಂಚ್
ಮನೆ, ಹೊಳ್ಳರ ತೋಟ, ಮಧ್ಯಸ್ಥರ ತೋಟ, ಶಾಲಾ ತೋಟ, ಕೆಮ್ಮಣ್ಣುಕೆರೆಗಳಲ್ಲಿ ಈ ಹಿಂದೆ ನೀರಿನ ಸಮಸ್ಯೆ ಎದುರಾಗಿತ್ತು. ಇದೀಗ ಇಲ್ಲಿನ ಕಾರ್ಕಡ, ಹಳೇಕೋಟೆ ಮುಂತಾದ ಕಡೆ ನೀರಿನ ಬಾವಿಯ ಹೂಳೆತ್ತುವ ಮೂಲಕ ದುರಸ್ತಿ ಮಾಡಿದ್ದು ಸಾಕಷ್ಟು ನೀರು ದೊರೆತಿದೆ. ಮುಂದೆ ವಿಷ್ಣುಮೂರ್ತಿ ವಾರ್ಡ್‌ನಲ್ಲಿರುವ ಬಾವಿಯನ್ನು ಕೂಡ ದುರಸ್ತಿಗೆ ನಿರ್ಧರಿಸಿದ್ದು ಎಪ್ರಿಲ್ ಅಂತ್ಯದ ತನಕ ನೀರಿನ ಸಮಸ್ಯೆ ತಲೆದೋರುವುದಿಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಟೆಂಡರ್ ಕರೆದಿದ್ದೇವೆ
ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮಂದಿ ನೀರು ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸುಮಾರು 350ಕ್ಕೂ ಹೆಚ್ಚು ಕುಟುಂಬಗಳಿಗೆ ನೀರಿನ ಸಮಸ್ಯೆ ಇದೆ. ಆದರೆ ಸರಕಾರಿ ಬಾವಿ, ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ಹೀಗಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಟೆಂಡರ್ ಕರೆದಿದ್ದೇವೆ.
-ವಿನೋದ ಕಾಮತ್, ಪಿ.ಡಿ.ಒ. ಯಡ್ತಾಡಿ
ಕಾವಡಿ 1ನೇ ವಾರ್ಡ್‌ನ ಸಮಸ್ಯೆ ಪರಿಹಾರ
ಕಾವಡಿ 1ನೇ ವಾರ್ಡ್‌ನ ಮಾನಂಬಳ್ಳಿಯಲ್ಲಿ ಹೊಸದಾಗಿ ಬೋರ್‌ವೆಲ್ ನಿರ್ಮಿಸಿದ್ದು ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆತಿದೆ. ಹೀಗಾಗಿ ಈ ಹಿಂದೆ ಇಲ್ಲಿನ ಕಲ್ಲುಗದ್ದೆ, ಸಣಗಲ್ಲು, ಮಧುವನ ಕಾಲನಿಯಲ್ಲಿ ಎದುರಾಗಿದ್ದ ನೀರಿನ ಸಮಸ್ಯೆ ಬಹುತೇಕ ಪರಿಹಾರವಾಗಿದೆ.
-ಉಮೇಶ್, ಪಿ.ಡಿ.ಒ. ವಡ್ಡರ್ಸೆ ಗ್ರಾ.ಪಂ.
ಪ.ಪಂ. ವ್ಯಾಪ್ತಿಯ ಸಮಸ್ಯೆ ಬಹುತೇಕ ಬಗೆಹರಿದಿದೆ
ಪ.ಪಂ. ವ್ಯಾಪ್ತಿಯ ಮೂರು ಬಾವಿ ದುರಸ್ತಿ ಮಾಡಿದ್ದರಿಂದ ಸಾಕಷ್ಟು ನೀರು ಸಿಕ್ಕಿದೆ. ಮುಂದೆ ವಿಷ್ಣುಮೂರ್ತಿ ವಾರ್ಡ್ ಮುಂತಾದ ಕಡೆಯ ಬಾವಿಗಳನ್ನು ದುರಸ್ತಿಗೊಳಿಸಲಾಗುವುದು. ಇದರಿಂದ ಎಪ್ರಿಲ್ ಅಂತ್ಯದ ತನಕ ಬಹುತೇಕ ಸಮಸ್ಯೆ ಇಲ್ಲ. ಅನಂತರ ಅಗತ್ಯವಿದ್ದರೆ ಟ್ಯಾಂಕರ್ ನೀರು ಬಳಸಿಕೊಳ್ಳಲಾಗುವುದು.
-ಅರುಣ್ ಕುಮಾರ್, ಮುಖ್ಯಾಧಿಕಾರಿಗಳು ಸಾಲಿಗ್ರಾಮ ಪ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.