ಇನ್ನೂ ಏರಲಿದೆ ಸೂರ್ಯನ ತಾಪ
Team Udayavani, Mar 21, 2019, 5:59 AM IST
ದಾವಣಗೆರೆ: ಅಬ್ಟಾ ಇದೇನಪ್ಪಾ ಇಂತಹ ಬಿಸಿಲು…! ಎಂದು ಪರಿತಪಿಸುವ ವಾತವಾರಣ ಈಗಷ್ಟೇ ಆರಂಭವಾಗಿದೆ. ಇನ್ನೂ ಒಂದು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಅಲ್ಲದೆ, ಸೂರ್ಯನ ಪ್ರಖರತೆ ಕಳೆದ ವರ್ಷಕ್ಕಿಂತ ಅಧಿಕವಾಗಲಿದೆ!.
2018ಕ್ಕೆ ಹೋಲಿಸಿದರೆ ಈ ಬಾರಿ ಬೇಸಿಗೆಯಲ್ಲಿ ಸೂರ್ಯನ ತಾಪ ಇನ್ನಷ್ಟು ಏರುವುದು ಖಚಿತ ಎಂಬುದಾಗಿ ಹವಾಮಾನ ಅಂದಾಜು ಮಾಡುವ ವಿವಿಧ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಅಂದಾಜಿನ ಪ್ರಕಾರ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಗರಿಷ್ಠ ಉಷ್ಣಾಂಶ ಸರಾಸರಿ 36 ರಿಂದ 39 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಇರಲಿದೆ. ಕನಿಷ್ಠ ಉಷ್ಣಾಂಶ 18ರಿಂದ 24 ಡಿಗ್ರಿ ಸೆಲ್ಸಿಯಸ್‌ನವರೆಗೆ
ಇರಲಿದೆ.
ಮಾರ್ಚ್ ಆರಂಭದಲ್ಲಿ 36 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಉಷ್ಣಾಂಶ ಮಾ. 18ರ ನಂತರ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದೇ ಉಷ್ಣಾಂಶ 23ರ ವರೆಗೂ ಮುಂದುವರಿಯಲಿದೆ. ಮಾ.23ರ ನಂತರ ಸೂರ್ಯ ತನ್ನ ಪ್ರಖರತೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾನೆ. 26ರ ನಂತರ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಮಾ. 29ರಂದು 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಲಿದೆ. ಮಾರ್ಚ್ ಕೊನೆಯಲ್ಲಿ ಸೂರ್ಯ ತನ್ನ ಪ್ರತಾಪ ಪ್ರದರ್ಶಿಸಲಿದ್ದಾನೆ.
ಮಾರ್ಚ್ 28ರ ನಂತರ ಮೋಡ ಕವಿದ ವಾತಾವರಣವಿದ್ದರೂ ಬಿಸಿಲು ಮಾತ್ರ ಎಂದಿನಂತೆ ಇರಲಿದೆ. ಏಪ್ರಿಲ್‌ನಲ್ಲೂ
ಬಿಸಿಲಿನ ತಾಪ ಮತ್ತಷ್ಟು ಏರಲಿದೆ. ಸದ್ಯ 35 ಡಿಗ್ರಿ ಸೆಲ್ಸಿಯಸ್‌ನಿಂದ 37ರ ವರೆಗೆ ತಾಪಮಾನ ಇದೆ. ತಾಪಮಾನದಲ್ಲಿ ಇಳಿಕೆಗಿಂತ ಏರಿಕೆಯೇ ಕಾಣುತ್ತಿದೆ. ಕಳೆದ ವರ್ಷ ಇದೇ ವೇಳೆ ತಾಪಮಾನ 35-36 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು. ಈ ಬಾರಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ನಾಗಕರಿಕರು ಹೆಚ್ಚು ತಾಪಮಾನ ಅನುಭವಿಸಬೇಕಿದೆ.
ತಾಪಮಾನ ಹೆಚ್ಚಳಕ್ಕೆ ಕೇವಲ ಸೂರ್ಯ ಮಾತ್ರ ಕಾರಣನಲ್ಲ. ನಗರ ಪ್ರದೇಶದಲ್ಲಿನ ಮರಗಳ ಕಡಿತ, ವಾಹನಗಳ ಹೆಚ್ಚಳ ಸಹ ಕಾರಣವಾಗಿದೆ. ಸೂರ್ಯನ ಕಿರಣಗಳು ಮರ, ಗಿಡಗಳ ಮೇಲೆ ಬೀಳುತ್ತಿದ್ದುದರಿಂದ ತಾಪಮಾನ ಹೆಚ್ಚಾಗುತ್ತಿರಲಿಲ್ಲ. ಆದರೆ, ಮರಗಳ ನಾಶ ಮತ್ತು ಕಟ್ಟಡಗಳ ಹೆಚ್ಚಳದಿಂದಾಗಿ ತಾಪಮಾನ ಸೂರ್ಯನ ಶಾಖಕ್ಕಿಂತ ಹೆಚ್ಚಾಗುತ್ತದೆ.
ಬಿಸಿಯಿಂದಾಗಿ ಜನರು ಇಂದು ಹೊರಬೀಳಲು ಹಿಂದೇಟು ಹಾಕುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯ ವೇಳೆಗಾಗಲೇ ಬಿಸಿಲು ಮೈ ಸುಡುವಷ್ಟು ಮಟ್ಟಿಗಿದೆ. ಸೂರ್ಯ ನೆತ್ತಿಯ ಮೇಲೆ ಬರುವ ವೇಳೆಗಂತೂ ಬೀದಿಗಳಲ್ಲಿ ಜನರ ಓಡಾಟವೇ ಕಡಿಮೆಯಾಗುತ್ತಿದೆ. ಬಿಸಿಲ ಬೇಗೆ ತಣಿಸಿಕೊಳ್ಳಲು ಮಂದಿ ಹಣ್ಣಿನ ರಸ ಸೇರಿದಂತೆ ಇತರೆ ತಂಪು ಪಾನೀಯಗಳ ಮೊರೆಹೋಗುತ್ತಿದ್ದಾರೆ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.