10 ದಿನದಲ್ಲಿ 110 ಕೇಸ್, 20 ಮಂದಿ ಸೆರೆ
Team Udayavani, Mar 21, 2019, 11:00 AM IST
ಹುಣಸೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ 10 ದಿನಗಳಲ್ಲಿ ಹುಣಸೂರು ಉಪವಿಭಾಗದ
ತಾಲೂಕುಗಳಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಣೆ ಮಾಡುವವರ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು 110 ಪ್ರಕರಣ ದಾಖಲಿಸಿ, 8.37 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ 13 ವಾಹನಗಳನ್ನು ವಶಕ್ಕೆ ಪಡೆದು 20 ಮಂದಿಯನ್ನು ನ್ಯಾಯಾಂಗ ಬಂಧನ ಕ್ಕೊಪ್ಪಿಸಿದ್ದಾರೆ.
ಉಪ ವಿಭಾಗ ವ್ಯಾಪ್ತಿಯ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾ ಪಟ್ಟಣ ಮತ್ತು ಕೆ.ಆರ್.ನಗರ ತಾಲೂಕು ಗಳಿಂದ ಒಟ್ಟು 50 ಪ್ರಕರಣಗಳಲ್ಲಿ 20 ಘೋರ ಪ್ರಕರಣ ದಾಖಲಾಗಿದ್ದು, ಒಟ್ಟು 8.37 ಲಕ್ಷ ರೂ. ಬೆಲೆಯ ಮದ್ಯ ವಶಕ್ಕೆ ಪಡೆಯಲಾಗಿದೆ. ಈ ಪೈಕಿ 240.82 ಲೀಟರ್, ಮದ್ಯ, 70 ಲೀ. ಸೇಂದಿ, 33 ಲೀ. ವೈನ್, 1.650 ಲೀ. ಬಿಯರ್ ಹಾಗೂ ಒಂದು ಕಾರು ಸೇರಿದಂತೆ 12 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
20 ಘೋರ ಪ್ರಕರಣಗಳು, 36 ಸಾರ್ವಜನಿಕ ಪ್ರದೇಶದಲ್ಲಿ ಮದ್ಯಸೇವನೆ, ಲೈಸನ್ಸ್ ಹೊಂದಿರುವ ಮದ್ಯದಂಗಡಿ ಗಳಲ್ಲಿ ಕಾನೂನು ಉಲ್ಲಂಘಿಸಿರುವ 13 ಪ್ರಕರಣಗಳಾಗಿವೆ. ಈವರೆಗೆ ನಡೆಸಿರುವ 110 ದಾಳಿಗಳಲ್ಲಿ 345 ಲೀಟರ್ ಮದ್ಯ ವಶಪಡಿಸಿಕೊಂಡು 50 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 20 ಮಂದಿಯನ್ನು ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ.
ವಿವಿಧೆಡೆ ದಾಳಿ 11 ಮಂದಿ ಬಂಧನ: ಕಳೆದ 10 ದಿನಗಳಿಂದೆ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ದಾಳಿ ನಡೆಸಿ, 29
ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಮೂರು ಘೋರ, ಆರು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಹಾಗೂ ಮೂರು ಮದ್ಯದ ಅಂಗಡಿಗಳಲ್ಲಿ ಕಾನೂನು ಉಲ್ಲಂಘಿಸಿರುವ ಪ್ರಕರಣ ಪತ್ತೆಯಾಗಿದ್ದು, 11 ಮಂದಿಯನ್ನು ಬಂಧಿಸಲಾಗಿದೆ. ಒಂದು ಕಾರು ಹಾಗೂ ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕಿರಿಜಾಜಿ ರಸ್ತೆಯ ಶಬ್ಬೀರ್ ನಗರದ ಬಳಿ ತಮಿಳುನಾಡು ಮೂಲದ ವಾಸು ಎಂಬಾತ ದ್ವಿಚಕ್ರ ವಾಹನದಲ್ಲಿ 70 ಲೀ.ನಷ್ಟು ಸೇಂದಿ ಸಾಗಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದರೆ, ಮನುಗನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ವಿರಾಜ ಪೇಟೆ ತಾಲೂಕಿನ ಹುದುಕೇರಿಯ ಪರಮೇಶ್ ಎಂಬಾತ ಸೇನೆ ಕ್ಯಾಂಟೀನ್‌ನಿಂದ ಕಾರಿನಲ್ಲಿ ಸಾಗಿಸುತ್ತಿದ್ದ 18 ಮದ್ಯದ ಬಾಟಲಿಗಳ ಪೈಕಿ 8ಕ್ಕೆ ಮಾತ್ರ ದಾಖಲೆ ಇದ್ದುದ್ದರಿಂದ ಪ್ರಕರಣ ದಾಖಲಿಸಿ ಕಾರು ಮತ್ತು ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೂಂದು ಪ್ರಕರಣದಲ್ಲಿ ನಗರದ ಕಲ್ಕುಣಿಕೆ ವೃತ್ತದಲ್ಲಿ ಎಚ್.ಡಿ.ಕೋಟೆ ತಾಲೂಕಿನ ಬಸವಮಂಟಿಹಾಡಿಯ ಬಸವ ಎಂಬಾತ 90 ಎಂ.ಎಲ್.ನ 110 ಮದ್ಯದ ಸ್ಯಾಚೆಟ್ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. 115 ಲೀ. ಮದ್ಯವಶಕ್ಕೆ ಪಡೆಯಲಾಗಿದೆ ಎಂದು ಹುಣಸೂರು ಅಬಕಾರಿ ನಿರೀಕ್ಷಕ ಸಿದ್ದನಾಯಕ ತಿಳಿಸಿದ್ದಾರೆ.
ಅಕ್ರಮ ತಡೆಗೆ ಕರೆ ಮಾಡಿ ದಿನದ 24ಗಂಟೆ ನಿರಂತರವಾಗಿ ಪಾಳಿಯಲ್ಲಿ ಡಿವೈಎಸ್ಪಿ ಕಚೇರಿ ಹಾಗೂ ಹುಣಸೂರು ಕಚೇರಿ
ವತಿಯಿಂದ ತಲಾ 2 ರಂತೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಉಪ ವಿಭಾಗ ವ್ಯಾಪ್ತಿಯ ನಾಲ್ಕು ತಾಲೂಕುಗಳಲ್ಲಿ ಎಲ್ಲೇ ಅಕ್ರಮ ಮದ್ಯ ಚಟುವಟಿಕೆಗಳ ಕಂಡುಬಂದಲ್ಲಿ ಹುಣಸೂರು-ಮೊ. 9844404677, ಎಚ್.ಡಿ.ಕೋಟೆ- 9449597185, ಕೆ.ಆರ್.ನಗರ- 73535 49061, ಪಿರಿಯಾಪಟ್ಟಣ- 99642 61036 ಮತ್ತು ಹುಣಸೂರು- 9449597184ಗೆ ಕರೆಮಾಡಿಮಾಹಿತಿ ನೀಡಿದಲ್ಲಿ ಕ್ರಮ ವಹಿಸಲಾಗುವುದೆಂದು ಡಿವೈಎಸ್ಪಿ ಮಂಜೇಗೌಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.