ಹಳ್ಳಿ ಕಸುಬುಗಳ ಮೇಲೆ ಬೆಳಕು ಚೆಲ್ಲಿದ ವಿಲೇಜ್‌ ಲೈಫ್ 


Team Udayavani, Mar 22, 2019, 12:30 AM IST

art.jpg

ಮಣಿಪಾಲದ ತ್ರಿವರ್ಣ ಆರ್ಟ್‌ ಸೆಂಟರ್‌ನ ಹರೀಶ್‌ ಸಾಗಾ ಇತ್ತೀಚೆಗೆ ಮಣಿಪಾಲದ ಗೀತಾ ಮಂದಿರದಲ್ಲಿ ವಿಲೇಜ್‌ ಲೈಫ್ ಕಲಾಪ್ರದರ್ಶನ ನಡೆಸಿ ಮನಗೆದ್ದಿದ್ದಾರೆ. ಹಳ್ಳಿಯ ಸೆಟ್ಟಿಂಗಿನೊಂದಿಗೆ ಕಲಾಪ್ರದರ್ಶನ ನಡೆಸಿದ್ದು ವಿಶೇಷವಾಗಿತ್ತು. ಗೀತಾ ಮಂದಿರದೊಳಗೆ ಬಿದಿರಿನ ಕಂಬಗಳ ಮೇಲೆ ಬೈಹುಲ್ಲಿನ ಚಪ್ಪರದ ಮೇಲ್ಛಾವಣಿ, ಅದಕ್ಕೆ ಕಟ್ಟಿರುವ ಮಾವಿನ ಎಲೆಯ ತೋರಣದ ಗುಡಿಸಲೊಳಗೆ ಕಂಗೊಳಿಸುವ ಗ್ರಾಮೀಣ ಬದುಕಿನ ಜೀವಂತ ಕಲಾಕೃತಿಗಳು. 

ಮಂದಿರದೊಳಗೆ ಎಲ್ಲಾ ಲೈಟ್‌ಗಳನ್ನು ಆರಿಸಿ ಕಲಾಕೃತಿ ಮಾತ್ರ ಪ್ರಕಾಶಮಾನವಾಗಿ ಕಾಣಲು ಬಿಟ್ಟಿರುವ ಹಳದಿ ಫೋಕಸ್‌ ಲೈಟ್‌. ಒಟ್ಟಾರೆ ಹಳ್ಳಿಗೆ ಹೋಗಿ ಕಲಾಪ್ರದರ್ಶನ ಕಂಡಂತೆ ಭಾಸವಾಗುತ್ತಿತ್ತು. ಹಾಗಾಗಿ ಮೂರು ದಿನವೂ ಮಂದಿರದೊಳಗೆ ಜನಜಂಗುಳಿಯಿತ್ತು. ಕೆಲವು ಕಲಾಕೃತಿಗಳು ದಾಖಲೆ ಬೆಲೆಗೆ ಮಾರಾಟವೂ ಆಯ್ತು.
 
ಕಲಾಪ್ರದರ್ಶನದಲ್ಲಿ 19 ವರ್ಷದಿಂದ 75 ವರ್ಷ ವಯಸ್ಸಿನ 24 ಮಂದಿ ಕಲಾವಿದರ ಐವತ್ತಕ್ಕೂ ಮೀರಿ ವೈವಿಧ್ಯಮಯ ಕಲಾಕೃತಿಗಳು ಪ್ರದರ್ಶನಗೊಡಿವೆ. ಕ್ಯಾನ್ವಾಸ್‌ ಮೇಲೆ ಆಕ್ರಿಲಿಕ್‌ ಬಣ್ಣದ ಕಲಾಕೃತಿಗಳು ಹಾಗೂ ಕಾಗದದ ಮೇಲೆ ಚಾರ್ಕೋಲ್‌ ಚಿತ್ರಗಳು ಅಂದಚೆಂದದ ಚೌಕಟ್ಟಿನೊಂದಿಗೆ ಆಕರ್ಷಕವಾಗಿದ್ದವು. 

ಮಣಿಪಾಲದ ಡಾ. ಜಿ. ಶಿವಪ್ರಕಾಶ್‌, ಜಯಾ ಎಸ್‌. ಕುಡ್ವ, ಪ್ರಸಾದ್‌ ಆರ್‌., ಪೆರ್ಡೂರಿನ ಡಾ| ಜಿ.ಎಸ್‌.ಕೆ.ಭಟ್‌., ಜಿ.ಯಶ, ಕುಂದಾಪುರದ ಆಶಾ ತೋಳಾರ್‌, ಜೈ ನೇರಳೆಕಟ್ಟೆ, ಬಿ.ಸಚಿನ್‌ ರಾವ್‌, ಮುಂಬಯಿಯ ನಿರ್ಮಲಾ ಸಿ.ಚೆಟ್ಟಿ, ಮಾಧವಿ ಮುನ್ನಾಲುರಿ, ಸುಷ್ಮಾ ಎಸ್‌., ವೈಷ್ಣವಿ, ಮಹಾಲಕ್ಷ್ಮೀ ಹೆಬ್ಟಾರ್‌, ಉಡುಪಿಯ ಶಹನಾಝ್ ಎಚ್‌., ಶಿವಮೊಗ್ಗದ ಪವಿತ್ರ ಸಿ., ಆತ್ರಾಡಿಯ ಗುರುಪ್ರಸಾದ್‌ ಯು., ಹಾಲಾಡಿಯ ಪಲ್ಲವಿ ಜೆ.ಅಡಿಗ, ಹಿರಿಯಡ್ಕದ ಅಭಿನಯಾ ಎನ್‌. ಮುಂತಾದವರ ಕಲಾಕೃತಿಗಳು ಕಲಾಪ್ರದರ್ಶನದಲ್ಲಿದ್ದವು. ಮುಖ್ಯವಾಗಿ ಮಣಿಪಾಲದ ಡಿ.ವಿ.ಶೆಟ್ಟಿಗಾರರ ಆಕ್ರಿಲಿಕ್‌ ಕಲಾಕೃತಿ ಅಕ್ಕಿಮುಡಿ ಕಟ್ಟುತ್ತಿರುವ ಅನ್ನದಾತನ ಚಿತ್ರ, ಪರ್ಕಳದ ಅನುಷ ಆಚಾರ್ಯರ ಅಭ್ಯಂಗ (ಮಗುವಿಗೆ ಎಣ್ಣೆಸ್ನಾನ ಮಾಡಿಸುತ್ತಿರುವ ಅಜ್ಜಿ), ಮಾಬುಕಳದ ನಯನ ಬಿ. ಯವರ ಮಡಲು ಹೆಣೆಯುತ್ತಿರುವ ಮಹಿಳೆ, ಚಿಕ್ಕಮಗಳೂರಿನ ಸುನಿಧಿ ಶೆಟ್ಟಿಯವರ ಭೂತದ ಕೋಲ, ಕುಂದಾಪುರದ ಹೃತಿಕ್‌ ಎಸ್‌. ಶೆಟ್ಟಿಯವರ ಮನೆಗೆ ಹೊಸತೆನೆತರುವ ದೃಶ್ಯ, ಕೋಟೇಶ್ವರದ ಸುಮಾ ಪುತ್ರನರ ಚಾರ್ಕೋಲ್‌ ಚಿತ್ರಗಳಾದ ಒಲೆಗೆ ಗಾಳಿಯೂದುತ್ತಿರುವವಳು, ಸುಷ್ಮಾರ ಲಗೋರಿ ಆಟ, ಜೈ ನೇರಳೆಕಟ್ಟೆಯವರ ಐಸ್‌ ಕ್ರೀಂ ಮಾರುವವ, ಉಡುಪಿಯ ಕೆರೊಳಿನ್‌ರವರ ಚಿಮಣಿ ದೀಪದೆದುರು ಓದುವ ಬಾಲಕ, ಮುಂಬಯಿಯ ಮಾಧವಿ ಮುನ್ನಾಲುರಿಯವರ ಬಂಡಿಬಿಡುತ್ತಿರುವ ಪೋರ ಚಿತ್ರಗಳು ಆಕರ್ಷಕವಾಗಿದ್ದವು. ಚಿತ್ರಗಳು ನೈಜತೆಗೆ ಒತ್ತುಕೊಟ್ಟು ರಚಿಸಿದ್ದಾದರೂ ರೇಖೆ ಮತ್ತು ಬಣ್ಣಗಾರಿಕೆಯಲ್ಲಿ ಕಲಾವಿದರ ಸ್ವಂತಿಕೆ ಎದ್ದುಕಾಣುತ್ತಿತ್ತು. ಫೊಟೊಗ್ರಫಿ ವಿಧಾನದಿಂದ ಮಾಡಲಾಗದ್ದನ್ನು ಕಲಾವಿದ ಕಲಾಕೃತಿಯೊಳಗೆ ಹೆಣೆದಿದ್ದಾನೆ ಎಂದರೆ ತಪ್ಪಾಗಲಾರದು. 

– ಉಪಾಧ್ಯಾಯ ಮೂಡುಬೆಳ್ಳೆ 

ಟಾಪ್ ನ್ಯೂಸ್

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.