ಮದುವೆ ಹೆಣ್ಣು -ವಾಸ್ತವ ಮತ್ತು ಭ್ರಮೆಯ ನಡುವಿನ ಮುಖಾಮುಖೀ 

Team Udayavani, Mar 22, 2019, 12:30 AM IST

madhuve-hennu-2.jpg

ನಮ್ಮ ಸಮಾಜದಲ್ಲಿ ಧರ್ಮ ಸಂಸ್ಕೃತಿಗೆ ಅನುಗುಣವಾಗಿ ಒಂದೊಂದು ಕಟ್ಟುಪಾಡುಗಳು ಗತಕಾಲದಿಂದಲೂ ನಂಬಿಕೆಯ ನೆಲೆಯಲ್ಲಿ ಬೆಳೆದುಬಂದಿದೆ. ಅದರಂತೆ ಬುಡಕಟ್ಟು ಜನಾಂಗದ ಹಿರೇಕನ ಮಗ ಮದುವೆ ಗಂಡು(ರಾಜೇಶ್‌ ಆಲೂರು) ಇಡೀ ಮದುವೆ ಹೆಣ್ಣು ನಾಟಕದ ಜೀವಾಳ. ಬುಡಕಟ್ಟು ಜನಾಂಗದ ಗತಕಾಲದ ಪರಂಪರೆಯಂತೆ ಹಬ್ಬದಲ್ಲಿ ಹೆಣ್ಣನ್ನು ಆರಿಸಿಕೊಂಡು ಮದುವೆಗೆ ನಿಂತಾಗ , ಕುಲದ ನಿಯಮದ ಆಚರಣೆಯೊಂದು ಮದುವೆ ಗಂಡು ಎದುರು ನಿಂತಾಗ ಅವನೊಂದಿಗೆ ಆಟವಾಡುವ ವಿಧಿ, ಘೋರ ಪಾಪಕ್ಕೂ ಕ್ಷಮೆ- ಮುಕ್ತಿ ಕೊಡುವ ಮಹಾಕರುಣೆ ಇದು ನಾಟಕದ ವಸ್ತುಸಾರ.

ಮಾ.17 ರಂದು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕುವೆಂಪು ಬಯಲು ರಂಗಮಂದಿರದಲ್ಲಿ ಯಕ್ಷದೀಪ ಕಲಾ ಟ್ರಸ್ಟ್‌ (ರಿ.) ಮಲ್ಯಾಡಿ ಹಾಗೂ ಯಶಸ್ವಿ ಕಲಾವೃಂದದ ಸಹಕಾರದೊಂದಿಗೆ ನಡೆದ ರಂಗೋತ್ಸವ 2019 ಎರಡು ದಿನಗಳ ನಾಟಕೋತ್ಸವದಲ್ಲಿ ಎಚ್‌.ಎಸ್‌.ಶಿವಪ್ರಕಾಶ್‌ ರಚನೆಯ, ರೋಹಿತ್‌ ಎಸ್‌.ಬೈಕಾಡಿ ನಿರ್ದೇಶನದಲ್ಲಿ ಕೈಲಾಸ ಕಲಾಕ್ಷೇತ್ರ ರಂಗ ತಂಡದಿಂದ ಅಭಿವ್ಯಕ್ತಗೊಂಡ ನಾಟಕ “ಮದುವೆ ಹೆಣ್ಣು ‘ ಗ್ರಾಮೀಣ ಭಾಗದ ಪ್ರೇಕ್ಷರನ್ನು ತನ್ನೆಡೆಗೆ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಸಾರಾಂಶ : ಬುಡಕಟ್ಟು ಜನಾಂಗದ ಹಿರೇಕನ ಮಗ ಕಾಡಿನಲ್ಲಿ ಇಪ್ಪತ್ತು ದಿವಸ ಒಬ್ಬಂಟಿಯಾಗಿ ಬಾಳಿದ ನಂತರ ಇಪ್ಪತ್ತೂಂದನೆಯ ದಿನ ಒಬ್ಬ ಕಟ್ಟುಮಸ್ತಾದ ಆರೋಗ್ಯವಂತ ತರುಣನನ್ನು ಬೇಟೆಯಾಡಿ ಅವನ ತಲೆ ಬುರುಡೆಯನ್ನು ಮದುವೆಯ ಹೆಣ್ಣಿನ ತಂದೆಗೆ ತಂದೊಪ್ಪಿಸಬೇಕು. ಕುಲದ ನಿಯಮವನ್ನು ಮೀರಿದರೆ ಆಕೆಯ ತಂದೆ ತಾಯಿ ಅವನಿಗೆ ಹೆಣ್ಣು ಕೊಡುವಂತಿಲ್ಲ ಎನ್ನುವ ಭಯದ ನಡುವೆ ತೊಳಲಾಡುವ ದೃಶ್ಯ ಪ್ರೇಕ್ಷಕರನ್ನು ವಿಭಿನ್ನ ಕಲ್ಪನಾ ಸ್ತರದೆಡೆಗೆ ಕೊಂಡೊÂಯಿತು. 

ಈ ವಿಧಿಯನ್ನು ನೆರವೇರಿಸಲು ಹೊರಡುವ ಪರಾಕ್ರಮಿ ಗಂಡಿಗೆ ಕುಲದೇವತೆಯ ಭವಿಷ್ಯವಾಣಿಯ ಭಯ ಆತಂಕ ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಈತನ ಮದುವೆಯ ದಿನ ಘೋರ ಅಪಾಯ ಭೀತಿ ಇವೆರಡರ ನಡುವೆ ಪಂಥಾಹ್ವಾನದಂತೆ ನೆರವೇರಿಸಲು ಹೋರಾಡುವ ಸಂಘರ್ಷದ ಓಟ ಇಡೀ ನಾಟಕದುದ್ದಕ್ಕೂ ನಡೆಯುತ್ತದೆ. 

ಆಸೆ ಅಧಿಕಾರ ದಾಹದಿಂದ ತಾನು ಮದುವೆಯಾಗುವ ಹೆಣ್ಣನ್ನು ಅರಿಯದೆ ತಾನೆ ಕೊಂದು , ತನ್ನ ಕುಲದಿಂದ ದುರಂತ ಅಂತ್ಯ ಕಾಣುವ ವಿಶಿಷ್ಟ ದೃಶ್ಯ ಘಟಿಸುತ್ತದೆ.

ಮದುವೆ ಗಂಡಿನಿಂದ ಕೊಲೆಯಾದ ಹೆಣ್ಣು ಪುನರ್ಜನ್ಮ ಪಡೆದು ಸಮಣೆಯಾಗಿ(ಸುಪ್ರೀತಾ ವೈದ್ಯ) ಕಾಡಿಗೆ ಬಂದಾಗ ಕಾಡಿನಂಚಿನಲ್ಲಿ ವಿಹರಿಸುವ ಗಂಡಿನ ಆತ್ಮ ಸಮಾಲೋಚಿಸಿ, ಮಹಾಕರುಣೆಯ ಹಾದಿಯಲ್ಲಿ ನಡೆಯುತ್ತಿರುವ ಸಮಣಿಯಿಂದ ಗಂಡಿನ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ. ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿ , ಅಪರಾಧಿಗಳಾಗಿ ನರಳುತ್ತಿರುವ ಜಗದ ಎಲ್ಲಾ ನೊಂದ ಮನಗಳಿಗೆ ಬುದ್ಧನ ಮಹಾಕರುಣೆ, ಶಾಂತಿ ಲಭಿಸಲಿ ಎನ್ನುವುದೇ ನಾಟಕದ ಮೂಲ ಆಶಯ.

ಕೈಲಾಸ ಕಲಾಕ್ಷೇತ್ರ ರಂಗ ತಂಡ ಪ್ರಸ್ತುತಿ
ಮಹಾಕರುಣೆಯ ಹಾದಿಯಲ್ಲಿ  ನಡೆಯುತ್ತಿರುವ ಸಮಣಿಯಿಂದ ಗಂಡಿನ ಆತ್ಮಕ್ಕೆ ಮುಕ್ತಿ ದೊರೆಯುತ್ತದೆ. ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿ , ಅಪರಾಧಿಗಳಾಗಿ ನರಳುತ್ತಿರುವ ಜಗದ  ಎಲ್ಲಾ ನೊಂದ  ಮನಗಳಿಗೆ ಬುದ್ಧನ ಮಹಾಕರುಣೆ,  ಶಾಂತಿ ಲಭಿಸಲಿ  ಎನ್ನುವುದೇ  ನಾಟಕದ  ಮೂಲ  ಆಶಯ.

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ 

ಟಾಪ್ ನ್ಯೂಸ್

Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ

Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ

Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ

Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್

Kunigal: ಕಾರು ಪಲ್ಟಿ ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು

Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು

Delhi-Stamp2

Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!

Bantwala-Narsha-Case

Robbery Case: ಅಸಲಿ ಪೊಲೀಸ್‌ನ ನಕಲಿ ಆಟವನ್ನು ಭೇದಿಸಿದರು!

US-Deportesr

Indian Deportees: ಭಾರತೀಯರಿಗೆ ಮತ್ತೆ ಕೋಳ ತೊಡಿಸಿ ಗಡೀಪಾರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ

Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ

Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ

Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್

Kunigal: ಕಾರು ಪಲ್ಟಿ ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು

Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು

Delhi-Stamp2

Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.