ಯಾವುದೇ ಗೊಂದಲ ಇಲ್ಲ,ನಮ್ಮ ಸಲಹೆಯಂತೆ ಅಭ್ಯರ್ಥಿಗಳ ಹೆಸರು ಪ್ರಕಟ
Team Udayavani, Mar 21, 2019, 3:21 PM IST
ಬೆಂಗಳೂರು: ರಾಜ್ಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ.
ಗುರುವಾರ ಸಂಜೆ 21 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆದರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಮ್ಮ ಸಲಹೆಯಂತೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ’ ಎಂದರು.
ಚಿಕ್ಕೋಡಿ, ರಾಯಚೂರು ,ಕೋಲಾರ, ಮಂಡ್ಯ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಹಾಲಿ ಸಂಸದ (ಸಂಗಣ್ಣ ಕರಡಿ )ಇರುವ ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಆಗಿಲ್ಲ ಎಂದು ತಿಳಿಸಿದರು.
ಕೊನೆಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಕೆಟ್ ಪಡೆದಿದ್ದಾರೆ.
ಕೊಪ್ಪಳ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಂಗಣ್ಣ ಕರಡಿ ಹೊರತು ಪಡಿಸಿ ಹಾಲಿ ಸಂಸದರೆಲ್ಲರಿಗೂ ಟಿಕೆಟ್ ನೀಡಲಾಗಿದೆ.
ಬಳ್ಳಾರಿಯಿಂದ ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ತುಮಕೂರಿನ ಟಿಕೆಟ್ ಬಸವರಾಜ್ ಅವರಿಗೆ ನೀಡಲಾಗಿದೆ. ಚಿತ್ರದುರ್ಗದಿಂದ ಎ.ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಬೆಳಗಾವಿ ಹಾಲಿ ಸಂಸದ ಸುರೇಶ್ ಅಂಗಡಿ, ಬಾಗಲಕೋಟೆ ಹಾಲಿ ಸಂಸದ ಗದ್ದಿಗೌಡರ್ , ವಿಜಯಪುರ ಹಾಲಿ ಸಂಸದ, ಸಚಿವ ರಮೇಶ್ ಜಿಗಜಿಣಗಿ, ಬೀದರ್ ಹಾಲಿ ಸಂಸದ ಭಗವಂತ್ ಖೂಬಾ, ಹಾವೇರಿ ಹಾಲಿ ಸಂಸದ ಶಿವಕುಮಾರ್ ಉದಾಸಿ, ಉತ್ತರ ಕನ್ನಡ ಹಾಲಿ ಸಂಸದ, ಸಚಿವ ಅನಂತ್ ಕುಮಾರ್ ಹೆಗಡೆ, ಶಿವಮೊಗ್ಗ ಹಾಲಿ ಸಂಸದ ಬಿ.ವೈ .ರಾಘವೇಂದ್ರ, ದಾವಣಗೆರೆ ಹಾಲಿ ಸಂಸದ ಸಿದ್ದೇಶ್ವರ್ , ಮೈಸೂರು ಕೊಡಗು ಕ್ಷೇತ್ರಕ್ಕೆ ಹಾಲಿ ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಉತ್ತರ ಹಾಲಿ ಸಂಸದ , ಸಚಿವ ಡಿ.ವಿ.ಸದಾನಂದ ಗೌಡ, ಬೆಂಗಳೂರು ಕೇಂದ್ರ ಹಾಲಿ ಸಂಸದ ಪಿ.ಸಿ.ಮೋಹನ್, ಧಾರವಾಡ ಹಾಲಿ ಸಂಸದ ಪ್ರಹ್ಲಾದ್ ಜೋಷಿ ಅವರು ಟಿಕೆಟ್ ಪಡೆದಿದ್ದಾರೆ.
ಹಾಸನಕ್ಕೆ ಕಾಂಗ್ರೆಸ್‌ನಿಂದ ಬಂದಿರುವ ಎ.ಮಂಜು ಅವರು ನಿರೀಕ್ಷೆಯಂತೆ ಟಿಕೆಟ್ ಪಡೆದಿದ್ದಾರೆ. ಕಲಬುರಗಿ ಡಾ ಉಮೇಶ್ ಜಾಧವ್, ಚಿಕ್ಕಬಳ್ಳಾಪುರ-ಬಿ.ಎನ್.ಬಚ್ಚೇಗಡ, ಚಾಮರಾಜನಗರ ಕ್ಷೇತ್ರದಿಂದ ವಿ.ಶ್ರೀನಿವಾಸ್ ಪ್ರಸಾದ್, ಚಿತ್ರದುರ್ಗ ಕ್ಷೇತ್ರದಿಂದ ನಾರಾಯಣ ಸ್ವಾಮಿ ಅವರು ಟಿಕೆಟ್ ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.