ಭಿನ್ನ ಕಥೆಗೆ ಖಡಕ್ ವಿಲನ್ ಖುಷ್ ಸದ್ಗುಣ ಶಂಕರ
Team Udayavani, Mar 22, 2019, 12:30 AM IST
ಸದ್ಗುಣ ಸಂಪನ್ನ ಚಿತ್ರ, ಚಿತ್ರೀಕರಣಕ್ಕೆ ಅಣಿಯಾಗಿದೆ. ಪ್ರೀತಂ ಶೆಟ್ಟಿ ನಿರ್ದೇಶಕರು. ಕಥೆ, ಚಿತ್ರಕಥೆ ಜವಾಬ್ದಾರಿ ಇವರದೇ. ಇನ್ನು, ಪೂಜಾರಾಜ್ ಮತ್ತು ಭಾ.ಮ.ಗಿರೀಶ್ ಚಿತ್ರದ ನಿರ್ಮಾಪಕರು. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಏಪ್ರಿಲ್‌ನಲ್ಲಿ ಚಿತ್ರೀಕರಣ ಶುರುವಾಗಲಿದೆ.
ರವಿಶಂಕರ್ ಮತ್ತು ಸುಮನ್ ಇಲ್ಲಿ ಹೈಲೈಟ್. ರವಿಶಂಕರ್ ಪ್ರಕಾರ, ಇದು ವಿಶೇಷ ಕಥೆಯಂತೆ. ಪ್ರತಿಯೊಂದು ದೃಶ್ಯ ಕೂಡ ವಿಶೇಷವಾಗಿದ್ದು, ಆರಂಭದಿಂದ ಅಂತ್ಯದವರೆಗೂ ಚಿತ್ರ ಮನರಂಜನೆ ಜೊತೆಗೆ ಒಂದಷ್ಟು ಸಂದೇಶ ಕೊಡುತ್ತಾ ಸಾಗುತ್ತದೆ ಎಂಬುದು ಅವರ ಮಾತು. ಬಾಲ್ಯದ ಗೆಳೆಯರ ಬದುಕಿನ ಪಯಣ ಹೇಗೆಲ್ಲಾ ಇರುತ್ತೆ ಎಂಬ ಕಥೆ ಇಲ್ಲಿದ್ದು, ಒಬ್ಬನು ಏನೂ ಇಲ್ಲದವನು. ಇನ್ನೊಬ್ಬ ಎಲ್ಲಾ ಇರುವವನು. ಕೊನೆಯಲ್ಲಿ ಅವರ ನಡುವೆ ಆಗುವ ವ್ಯತ್ಯಾಸಗಳು ಏನು ಅನ್ನೋದು ಸಸ್ಪೆನ್ಸ್’ ಎಂದರು ರವಿಶಂಕರ್.
ನಿರ್ದೇಶಕ ಪ್ರೀತಂಶೆಟ್ಟಿ, “ದೇವರನ್ನು ನಂಬುವ ವ್ಯಕ್ತಿಯೊಬ್ಬ ಭಕ್ತಿ ಪರವಶನಾದರೆ ಏನೂ ಆಗಲ್ಲ ಎಂಬುದನ್ನು ಅರಿತು, ಕೊನೆಗೆ ಗೌರವ ಕೊಡದೆ, ಹೆತ್ತವರನ್ನೂ ಕಡೆಗಣಿಸಿ, ಬೇರೇನೋ ಮಾಡಬೇಕು ಎಂದು ಯೋಚಿಸುವ ವೇಳೆ, ಬದುಕಿನಲ್ಲಿ ಒಂದಷ್ಟು ಹೊಸ ಬದಲಾವಣೆಗಳು ಆಗುತ್ತವೆ. ಆಗ ಅವನು ಸದ್ಗುಣ ಸಂಪನ್ನ ಆಗುತ್ತಾನಾ ಇಲ್ಲವಾ ಎಂಬುದನ್ನು ಹಾಸ್ಯ ಮೂಲಕ ಹೇಳಲಾಗುತ್ತಿದೆ’ ಎಂದರು ಅವರು. ನಟ ಸುಮನ್ ಅವರಿಲ್ಲಿ ಗೆಳೆಯನ ಪಾತ್ರ ಮಾಡುತ್ತಿದ್ದು, ಅವರಿಗೆ ಪವಿತ್ರಾ ಲೋಕೇಶ್ ಪತ್ನಿಯಾಗಿ, ಅನಿತಾಭಟ್ ಪ್ರೇಯಸಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಕರಿಸುಬ್ಬು, ಚಂದ್ರಕಲಾ ಮೋಹನ್, ವಿಜಯಲಕ್ಷೀ, ರಾಧಾ ರಾಮಚಂದ್ರ, ಶಿಲ್ಪಾ ಶ್ರೀನಿವಾಸ್, ಭವಾನಿಪ್ರಕಾಶ್ ನಟಿಸುತ್ತಿದ್ದಾರೆ. ಜಲದಂಕ ಸುಧಾಕರ್ ಸಂಭಾಷಣೆ ಬರೆದಿದ್ದಾರೆ. ಪಳನಿರಾಜ್ ಐದು ಗೀತೆಗಳಿಗೆ ಸಂಗೀತ ನೀಡುತ್ತಿದ್ದಾರೆ. ಹೊಸ ಪ್ರತಿಭೆಗಳಾದ ಮೇಘನಾಕುಲಕರ್ಣಿ, ಚೇತನ್‌ನಾಯಕ್ ಅವರಿಗೆ ಹಾಡಲು ಅವಕಾಶ ಕೊಡಲಾಗಿದೆ.
ಚಿತ್ರದಲ್ಲಿ ರಾಧಿಕಾ ರಾವ್, ವಿ.ಮನೋಹರ್, ಹರ್ಷನ್ ಗೌಡ, ದೇವ್‌ನಾಗ್, ಬಿ.ಜಯಮ್ಮ, ಯಮುನಾ ಶ್ರೀನಿಧಿ, ಅನಿಲ್ ನೀನಾಸಂ, ಮಾ. ಆಯುಷ್‌ರಾಜ್, ಆರ್ಣವ್‌ರಾಜ್ ನಟಿಸುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಪವನ್‌ಕುಮಾರ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.