ಉಚ್ಚಿಲ ಮುಳ್ಳುಗುಡ್ಡೆ: ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆ
Team Udayavani, Mar 22, 2019, 1:00 AM IST
ಕಾಪು: ಖ್ವಾಜಾ ಗರೀಬ್ ನವಾಙ… ಫ್ರೆಂಡ್ಸ್ ಸರ್ಕಲ್ ಉಚ್ಚಿಲ ಇವರ ವತಿಯಿಂದ ಉಚ್ಚಿಲ ಮುಳ್ಳಗುಡ್ಡೆ ಜನಪ್ರಿಯ ಮಿಲ್ ಮುಂಭಾಗದ ಮೈದಾನದಲ್ಲಿ ಜರಗಿದ ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆಯನ್ನು ಸೆ„ಯ್ಯದ್ ಅರಬೀ ಜುಮ್ಮಾ ಮಸೀದಿಯ ಧರ್ಮಗುರು ಇಸಾಕ್ ಫೆ„ಝಿ ಉದ್ಘಾಟಿಸಿದರು.
ಮೂಳೂರು ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರೆಹಮಾನ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ದಾರುಲ್ ಅಮಾನ್ ವಿದ್ಯಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಲೀಮ್ ಮದನಿ ಕುತ್ತಾರ್ ದುವಾ ಆಶೀರ್ವಚನಗೆ„ದರು. ಶೆ„ಖುನಾ ಕುಂಜಾಲಕಟ್ಟೆ ಉಸ್ತಾದ್ ದುವಾದೊಂದಿಗೆ ಶುಭ ಹಾರೈಸಿದರು.
ಮಣಿಪುರ ತಂಡಕ್ಕೆ ಪ್ರಥಮ ಪ್ರಶಸ್ತಿ
ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಕಟಪಾಡಿ – ಮಣಿಪುರ ಕಲಂದರ್ ಷಾ ದಫ್ ಕಮಿಟಿಯು ಪ್ರಥಮ ಸ್ಥಾನ ಹಾಗೂ ಬಿ.ಸಿ.ರೋಡ್ ರಿಫಾಯಿ ದಫ್ ಕಮಿಟಿ ದ್ವಿತೀಯ ಹಾಗೂ ಪಂಜಿಮೊಗರು ರಫಾಯಿ ದಫ್ ಕಮಿಟಿ ತೃತೀಯ ಸ್ಥಾನ ಗಳಿಸಿದೆ. ದಫ್ ಹಾಡುಗಾರಿಕೆಯಲ್ಲಿ ಬಶೀರ್ ಉಸ್ತಾದ್ ಮಜೂರು, ಹಂಝ ಉಸ್ತಾದ್ ಮಣಿಪುರ ಹಾಗೂ ಬದ್ರಿಯಾ ಮಲ್ಲಾರ್ ಇವರು ವೈಯಕ್ತಿಕ ಪ್ರಶಸ್ತಿ ಗಳಿಸಿದ್ದಾರೆ.
ಸಮಾರೋಪ ಸಮಾರಂಭವು ಮನ್ಶರ್
ಮಹಿಳಾ ಶರಿಯತ್ ಕಾಲೇಜಿನ ಪ್ರಾಂಶುಪಾಲ ನಝೀರ್ ಅಹ್ಸಾನಿ ಪರಪ್ಪು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ರಾಜ್ಯ ಅಲ್ಪಸಂಖ್ಯಾಕರ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ಉದ್ಯಮಿ ಸುರೇಶ್ ಪಿ. ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ಮುಸ್ಲಿಂ ಕಮಿಟಿ ಉಪಾಧ್ಯಕ್ಷ ಗುಲಾಂ ಮಹಮ್ಮದ್, ತಾ.ಪಂ. ಸದಸ್ಯ ಶೇಖಬ್ಬ, ಬಡಾ ಗ್ರಾ.ಪಂ. ಸದಸ್ಯ ರಫೀಕ್ ದೀವ್, ಮೂಳೂರು ಅಲ್ ಇಹ್ಸಾನ್ ವಿದ್ಯಾಸಂಸ್ಥೆಯ ಮ್ಯಾನೇಜರ್ ಯು.ಕೆ. ಮುಸ್ತಾಪ ಸಅದಿ, ಉಚ್ಚಿಲ ಸೆ„ಯದ್ ಅರಬಿ ಜುಮ್ಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ತವಕ್ಕಲ್, ಪೊಲ್ಯ ಹಿಮಾಯಿತುಲ್ ಇಸ್ಲಾಂ ಮದ್ರಸದ ಅಧ್ಯಕ್ಷ ಮೈಯದ್ದಿ, ಎಸ್ಸೆಸ್ಸೆಫ್ ಕೋಶಾಧಿಕಾರಿ ಪಿ.ಪಿ. ಅಬ್ದುಲ್ ಕರೀಂ ಪೊಲ್ಯ, ಹನೀಫ್ ಮೂಳೂರು, ರಜಾಕ್ ಬಗ್ಗತೋಟ, ರಫೀಕ್ ಸುಲೇಮಾನ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನೆಯ ಕಾರ್ಯದರ್ಶಿ
ಜುನೇದ್ ಉಚ್ಚಿಲ ಸ್ವಾಗತಿಸಿದರು. ಎರ್ಮಾಳು ಜುಮ್ಮಾ ಮಸೀದಿಯ ಖತೀಬ ಶಬ್ಬೀರ್ ಫೆ„ಝೀ ಪ್ರಸ್ತಾವನೆಗೈದರು. ತನ್ವೀರ್ ಪೊಲ್ಯ ವಂದಿಸಿದರು. ಸದಸ್ಯ ಅತೀಫ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ