ಸೂಪರ್ ಮೂನ್: ಬೀಚ್‌ಗಳಲ್ಲಿ ಅಲೆಗಳ ಅಬ್ಬರ
Team Udayavani, Mar 22, 2019, 1:00 AM IST
ಮಂಗಳೂರು/ಉಡುಪಿ: ವರ್ಷದ ಮೂರನೇ ಸೂಪರ್ ಮೂನ್ ಗುರುವಾರ ಗೋಚರಿಸಿದ್ದು, ಹುಣ್ಣಿಮೆ ಚಂದಿರ ಅತ್ಯಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಿತ್ತು.
ಈ ವರ್ಷದ ಮೊದಲ ಸೂಪರ್ ಮೂನ್ ಜ. 21ರಂದು ಗೋಚರಿಸಿದ್ದು, 2ನೇ ಸೂಪರ್ ಮೂನ್ ಕಳೆದ ತಿಂಗಳು 19ರಂದು ಗೋಚರಿತ್ತು. ಗುರುವಾರದ ಹುಣ್ಣಿಮೆ ಚಂದ್ರ ಸೂಪರ್ ಮೂನ್ ಆಗಿದ್ದು, ಚಂದ್ರ ಸುಮಾರು 14 ಅಂಶ ದೊಡ್ಡದಾಗಿ ಕಂಡು, 25 ಅಂಶ ಹೆಚ್ಚು ಬೆಳದಿಂಗಳ ಪ್ರಭೆಯಲ್ಲಿ ಗೋಚರಿಸುತ್ತಾನೆ. ಅದೇ ರೀತಿ ಗುರುವಾರ ಚಂದ್ರ ಭೂಮಿಯಿಂದ 3,60,772 ಕಿ.ಮೀ. ದೂರದಲ್ಲಿ ಸುತ್ತಿದ್ದು, ಭವ್ಯ ಬೆಳದಿಂಗಳಿತ್ತು.
ಪ್ರವಾಸಿಗರಿಗೆ ನಿರ್ಬಂಧ
ಪಣಂಬೂರು ಬೀಚ್ ಅಬಿವೃದ್ಧಿ ನಿಗಮದ ಸಿಇಒ ಯತೀಶ್ ಬೈಕಂಪಾಡಿ ಪ್ರತಿಕ್ರಿಯಿಸಿ, ಸೂಪರ್‌ಮೂನ್ ಕಾರಣದಿಂದ ಎರಡು ದಿನಗಳಿಂದ ಪಣಂಬೂರು, ತಣ್ಣೀರು ಬಾವಿ ಬೀಚ್‌ಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿತ್ತು. ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ. ಪ್ರವಾಸಿಗರನ್ನು ನೀರಿಗೆ ಇಳಿಯಲು ಬಿಡುತ್ತಿಲ್ಲ ಎಂದಿದ್ದಾರೆ.
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಪ್ರತಿಕ್ರಿ ಯಿಸಿ, “ಸೂಪರ್ ಮೂನ್ ಪರಿಣಾಮ ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಗರಿಷ್ಠ ಉಷ್ಣಾಂಶ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. 2 ದಿನಗಳಲ್ಲಿ ಕರಾವಳಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ.
ಸೂಪರ್ ಮೂನನ್ನು ಎಲ್ಲರೂ ನೋಡಿ ಆನಂದಿಸಿದ್ದಾರೆ. ಇದು ಸಮುದ್ರದ ಅಲೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಚಾಲಕ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.