ಐಪಿಎಲ್‌ನಿಂದ ಹಣದ ಹೊಳೆ ಹರಿಯುವುದು ಬಿಸಿಸಿಐಗೆ ಮಾತ್ರ?
Team Udayavani, Mar 22, 2019, 4:15 AM IST
ಮೊದಲ 10 ವರ್ಷಗಳ ಅವಧಿಗೆ ಸೋನಿ ಸಿಕ್ಸ್ 8,200 ಕೋಟಿ ರೂ. ನೀಡಿ ನೇರಪ್ರಸಾರ ಹಕ್ಕನ್ನು ಖರೀದಿಸಿತ್ತು. 2018ರಿಂದ 2022ರವರೆಗಿನ ನೇರಪ್ರಸಾರದ ಹಕ್ಕನ್ನು 16,347 ಕೋಟಿ ರೂ. ನೀಡಿ ಸ್ಟಾರ್‌ನ್ಪೋರ್ಟ್ಸ್ ಖರೀದಿಸಿತು. ಅಂದರೆ ಆರಂಭದಲ್ಲಿ 10 ವರ್ಷಕ್ಕೆ 8,200 ಕೋಟಿ ರೂ. ಗಳಿಸಿದ್ದ ಬಿಸಿಸಿಐ, ಮುಂದಿನ ಐದು ವರ್ಷಕ್ಕೆ ಇದರ ದುಪ್ಪಟ್ಟು ಹಣ ಗಳಿಸಿತು! ಅಷ್ಟು ಮಾತ್ರವಲ್ಲ ಶೀರ್ಷಿಕೆ ಪ್ರಾಯೋಜಕತ್ವದಿಂದ 2199 ಕೋಟಿ ರೂ. ಗಳಿಸಿತು. ಇನ್ನು ಫ್ರಾಂಚೈಸಿ ಶುಲ್ಕವಾಗಿ ಪ್ರತೀ ವರ್ಷ ಸಾವಿರಾರು ಕೋಟಿ ರೂ. ಗಳಿಸುತ್ತದೆ. ಅದು ಕಳೆದುಕೊಳ್ಳುವುದು ಶೇ.30ರಷ್ಟು ಹಣ ಮಾತ್ರ!
2018ರಿಂದ 2022ರವರೆಗೆ ಈಗಾಗಲೇ ಬಿಸಿಸಿಐ ಗಳಿಸಿರುವ ಲಾಭ 18,500 ಕೋಟಿ ರೂ.
ಪ್ರತೀವರ್ಷ ಏಪ್ರಿಲ್-ಮೇನಲ್ಲಿ ಐಪಿಎಲ್ ನಡೆಯುತ್ತದೆ. 48 ದಿನಗಳ ಬೃಹತ್ ಕೂಟ. 60 ಪಂದ್ಯಗಳು ನಡೆಯುತ್ತವೆ. ವಿಶ್ವದ ಖ್ಯಾತನಾಮ ಆಟಗಾರರು ಆಡುವ, ವಿಶ್ವದ ಅಭಿಮಾನಿಗಳು ವೀಕ್ಷಿಸುವ ಇಂತಹ ಕೂಟದ ಹಣಕಾಸು ಲೆಕ್ಕಾಚಾರ ಬಹಳ ಸಂಕೀರ್ಣ, ಅಗಾಧ! ಹೇಗೆಯೇ ನೋಡಿದರೂ ಐಪಿಎಲ್‌ನಿಂದ ಭರ್ಜರಿ ಲಾಭ ಮಾಡುವುದು ಬಿಸಿಸಿಐ ಮಾತ್ರ. ನೇರಪ್ರಸಾರ ಮಾಡುವ ಟೀವಿ ವಾಹಿನಿ, ಸಾವಿರಾರು ಕೋಟಿ ರೂ. ಹೂಡುವ ಫ್ರಾಂಚೈಸಿಗಳು ಗಳಿಸಿದ್ದನ್ನು ವಾಪಸ್ ಪಡೆಯುವುದು ಹೇಗೆ ಎನ್ನುವುದು ಬಹಳ ಕುತೂಹಲಕರ.
ಟೀವಿ ವಾಹಿನಿಗೇನು ಲಾಭ?
ಸಾವಿರಾರು ಕೋಟಿ ರೂ. ಖರ್ಚು ಮಾಡುವ ಟೀವಿ ವಾಹಿನಿ ಅದನ್ನು ವಾಪಸ್ ಪಡೆಯಲು ಜಾಹೀರಾತುದಾರರನ್ನು ಅವಲಂಬಿಸುತ್ತದೆ. 2019ರ ಆವೃತ್ತಿಗೆ 9 ಪ್ರಾಯೋಜಕರು 750 ಕೋಟಿ ರೂ.ಗಳನ್ನು ಸ್ಟಾರ್‌ಗೆ ನೀಡಿದ್ದಾರೆ. ಇನ್ನು ಜಾಹೀರಾತು ಲೆಕ್ಕಾಚಾರ. ಐಪಿಎಲ್ ವೇಳೆ ಪ್ರತೀ ಹತ್ತು ಸೆಕೆಂಡ್‌ಗೆ 10 ಲಕ್ಷ ರೂ.ವನ್ನು ಜಾಹೀರಾತುದಾರರು ನೀಡಬೇಕು. 1 ವರ್ಷ ಜಾಹೀರಾತಿನಿಂದ ಸರಾಸರಿ 2000 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಒಟ್ಟಾರೆ 5 ವರ್ಷಕ್ಕೆ ಸ್ಟಾರ್17,500 ಕೋಟಿ ರೂ. ಗಳಿಸುತ್ತದೆ. ಇದು ಖರ್ಚಿಗಿಂತ ಕೇವಲ 2,500 ಕೋಟಿ ರೂ. ಹೆಚ್ಚು. ಇದೆಲ್ಲ ನೋಡಿದರೆ ಯಾವ ಲೆಕ್ಕಾಚಾರದಲ್ಲಿ ಸ್ಟಾರ್ ಈ ಮಟ್ಟದಲ್ಲಿ ಹಣ ಹೂಡುತ್ತಿದೆ ಎಂಬ ಪ್ರಶ್ನೆ ಏಳುತ್ತದೆ.
ಫ್ರಾಂಚೈಸಿಗಳಿಗೇನು ಲಾಭ?
ಫ್ರಾಂಚೈಸಿಗಳು ಟಿಕೆಟ್ ಮಾರಾಟದ ಮೇಲೆ ಕಣ್ಣಿಟ್ಟಿರುತ್ತವೆ. ಅದರಿಂದ ದೊಡ್ಡ ಮೊತ್ತವೇ ಬರುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವೊಂದರ ಕನಿಷ್ಠ ದರ 800 ರೂ.ನಿಂದ ಶುರುವಾಗುತ್ತದೆ, ಗರಿಷ್ಠ ದರ 35,000 ರೂ. ಚಿನ್ನಸ್ವಾಮಿ ಮೈದಾನದ ಪ್ರೇಕ್ಷಕ ಸಾಮರ್ಥ್ಯ 35,000. ಬಹುತೇಕ ಪಂದ್ಯಗಳಲ್ಲಿ ಮೈದಾನ ತುಂಬಿರುತ್ತದೆ. ಫ್ರಾಂಚೈಸಿಗಳು ಪ್ರಾಯೋಜಕರನ್ನು ಹುಡುಕಿಕೊಳ್ಳುತ್ತವೆ. ಅವರ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತವೆ. ಇದರಿಂದ ಅವರ ಹಣ ವಾಪಸ್ ಬರುತ್ತದೆ. ಜನಪ್ರಿಯ ತಂಡಕ್ಕೆ, ತಾರೆಯರಿರುವ ತಂಡಕ್ಕೆ ಲಾಭ ಜಾಸ್ತಿ. ಜೊತೆಗೆ ಫ್ರಾಂಚೈಸಿಗಳ ಬ್ರ್ಯಾಂಡ್ ಮೌಲ್ಯ ಏರುತ್ತದೆ. ಅವು ಜಗತ್ತಿಗೆ ಪರಿಚಯವಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.