ದೇಶದ ಟಾಪ್ 5 ಡ್ಯಾಂ ಗಳು
Team Udayavani, Mar 22, 2019, 7:16 AM IST
1.ತೇಹ್ರಿ ಡ್ಯಾಮ್
ಉತ್ತರಾ ಖಂಡದ ಭಗೀರಥಿ ನದಿಗೆ ಕಟ್ಟಲಾಗಿರುವ ತೇಹ್ರಿ ಅಣೆಕಟ್ಟು ಭಾರತದ ಅತೀ ದೊಡ್ಡ ಡ್ಯಾಂ ಆಗಿದೆ. ವಿಶ್ವದ 8ನೇ ಅತೀ ಎತ್ತರದ ಡ್ಯಾಂ ಎಂದು ಗುರುತಿಸಿಕೊಂಡಿದೆ. ಎತ್ತರ: 261 ಮೀ. ಉದ್ದ: 575 ಮೀ. ನಿರ್ಮಾಣ: ಕಲ್ಲು ಮತ್ತು ಮಣ್ಣು ಸಂಗ್ರಹಣೆ ಸಾಮರ್ಥ್ಯ: 2,100,000 ಎಕ್ರೆ ಪೀಟ್ ವಿದ್ಯುತ್ ಸಂಗ್ರಹ: 1000 ಮೆ.ವ್ಯಾ.
2. ಭಾಕ್ರಾ ನಂಗಲ್ ಡ್ಯಾಂ
ಹಿಮಾಚಲ ಪ್ರದೇಶದ ಸಟ್ಲೇಜ್ ನದಿಗೆ ಕಟ್ಟಲಾಗಿರುವ ಭಾಂಕ್ರಾ ನಂಗಲ್ ಅಣೆಕಟ್ಟು ದೇಶದ ಅತೀ ದೊಡ್ಡ, ಏಷ್ಯಾದ 2ನೇ ಅತೀ ದೊಡ್ಡ ಡ್ಯಾಂ. ಎತ್ತರ: 226 ಮೀ. ಉದ್ದ: 520 ಮೀ. ನಿರ್ಮಾಣ: ಕಾಂಕ್ರೀಟ್ ಸಂಗ್ರಹಣೆ ಸಾಮರ್ಥ್ಯ: 7,501,775 ಎಕ್ರೆ ಫೀಟ್
ವಿದ್ಯುತ್ ಸಂಗ್ರಹ: 1325 ಮೆ.ವ್ಯಾ.
3. ಸರ್ದಾರ್ ಸರೋವರಂ ಡ್ಯಾಂ
ಗುಜರಾತ್‌ನ ನರ್ಮದಾ ನದಿಗೆ ನಿರ್ಮಿಸಿರುವ ಸರ್ದಾರ್ ಸರೋವರಂ ಡ್ಯಾಂ 4 ರಾಜ್ಯಗಳಿಗೆ ನೀರುಣಿಸುತ್ತಿದೆ. ಈ ಡ್ಯಾಂನ ಎತ್ತರವನ್ನು ಈಗಿರುವ 163 ಮೀ. ನಿಂದ 121.9 ಮೀ. ಹೆಚ್ಚಿಸಲು ಸರಕಾರ ಉದೇಶಿಸಿದೆ. ಇದರಿಂದ ವಿಶ್ವ ಎರಡನೇ ಅತೀ ಎತ್ತರದ ಡ್ಯಾಂ ಎಂಬ ಕೀರ್ತಿಗೆ ಹೆಸರಾಗಲಿದೆ. ಅಮೆರಿಕಾದ ಗ್ರ್ಯಾಂಡ್ ಕೌಲಿ ಮೊದಲ ಸ್ಥಾನದಲ್ಲಿದೆ. ಎತ್ತರ: 163 ಮೀ.
ಉದ್ದ: 1,210 ಮೀ. ವಿಶೇಷತೆ: ಗ್ರಾವಿಟಿ ಡ್ಯಾಂ ಸಂಗ್ರಹಣೆ ಸಾಮರ್ಥ್ಯ: 7,701,775ಎಕ್ರೆ ಫೀಟ್, ವಿದ್ಯುತ್ ಸಾಮರ್ಥ್ಯ: 1,450 ಮೆ.ವ್ಯಾ.
4. ಹಿರಾಕುಡ್ ಡ್ಯಾಂ
ಟ್ರೈಬಲ್ ಸ್ಟೇಟ್ ಎಂದೇ ಹೆಸರಾಗಿರುವ ಒಡಿಶಾದ ಮಹಂದಿ ನದಿಗೆ ನಿರ್ಮಿಸಿದ ಡ್ಯಾಂ ಹಿರಾಕುಡ್. ಇದು ವಿಶ್ವದ ಅತೀ ಉದ್ದನೆಯ ಡ್ಯಾಂ ಆಗಿದೆ. ಎತ್ತರ: 60.96 ಮೀ. ಉದ್ದ: 25.8 ಕೀ. ಮೀ. ಸಂಗ್ರಹಣೆ ಸಾಮರ್ಥ್ಯ: 4,779,965 ಎಕ್ರೆ ಫೀಟ್
ವಿದ್ಯುತ್ ಸಾಮರ್ಥ್ಯ: 307.5 ಮೆ.ವ್ಯಾ.
5. ನಾಗಾರ್ಜುನ ಸಾಗರ ಡ್ಯಾಂ
ತೆಲಂಗಾಣದ ಪ್ರವಾಸೋದ್ಯಮದ ಮೊದಲ ಆಯ್ಕೆಯಾಗಿ ನಾಗಾರ್ಜುನ ಸಾಗರ ಡ್ಯಾಂ ಅನ್ನು ಜನ ನೋಡಿ ಕಣ್ತುಂಬಿಕೊಳ್ಳುತ್ತಾರೆ. ರಾಜ್ಯದ ಕೃಷ್ಣಾ ನದಿಗೆ ನಿರ್ಮಸಿರುವ ಈ ಡ್ಯಾಂ ವಿಶ್ವದ ಅತೀ ಆಕರ್ಷಣೀಯ ಕೇಂದ್ರವಾಗಿದೆ. ವಿಶೇಷ ಎಂದರೆ ನಾಗಾರ್ಜುನ ಸಾಗರ ಡ್ಯಾಂ 26 ಗೇಟ್‌ಗಳನ್ನು ಹೊಂದಿದೆ. ಕಲ್ಲು ಮತ್ತು ಇಟ್ಟಿಗೆಗಳಿಂದ ಜನರೇ ನಿರ್ಮಿಸಿದ ಡ್ಯಾಂ ಇದು. ಎತ್ತರ: 124 ಮೀ. ಉದ್ದ: 1,450 ಮೀ. ಸಂಗ್ರಹಣೆ ಸಾಮರ್ಥ್ಯ: 9,371,845 ಎಕ್ರೆ ಫೀಟ್ ವಿದ್ಯುತ್ ಸಾಮರ್ಥ್ಯ: 816 ಮೆ.ವ್ಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.