ಪದವಿ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ
Team Udayavani, Mar 22, 2019, 7:35 AM IST
ಹುಳಿಯಾರು: ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕಡ್ಡಾಯ ಮತದಾನ ಜಾಗೃತಿ ಜಾಥಾ ಗುರುವಾರ ಆಯೋಜಿಸಲಾಗಿತ್ತು.
ಕಾಲೇಜಿನ ಬಳಿ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಮತದಾನ ಮಾಡುವುದು ಪವಿತ್ರ ಕಾರ್ಯ.ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ತರಲು ನೀವು ಚಲಾಯಿಸುವ ಮತವೇ ಮುಖ್ಯ ಎಂದು ಹೇಳಿದರು.
ಹುಳಿಯಾರು ಬಸ್ ನಿಲ್ದಾಣದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನ ಮಾಡುವುದರಿಂದ ಆಗುವ ಅನುಕೂಲ ಹಾಗೂ ಮಾಡದಿದ್ದರೆ ಆಗುವ ಅನಾನುಕೂಲಗಳ ಬಗ್ಗೆ ಘೋಷಣೆ ಕೂಗಲಾಯಿತು.
ನಂತರ ಸಂತೆ ಬೀದಿ, ರಾಮಗೋಪಾಲ್ ಸರ್ಕಲ್, ಆಸ್ಪತ್ರೆ ರಸ್ತೆ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು “ಮತದಾನ ಮಾಡದೇ ಇದ್ದಲ್ಲಿ ಮುಂದೆ ಅನುಭವಿಸುವೆವು ಕಷ್ಟ’, “ಪ್ರತಿಯೊಂದು ಮತ ಪ್ರಜಾಪ್ರಭುತ್ವದ ಹಿತ’ ಎಂದು ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.
ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಾದ ಡಾ.ಲೋಕೇಶ್ ನಾಯ್ಕ ಉಪನ್ಯಾಸಕರಾದ ಪೊ›.ಎಂ.ಬಿ.ಮೋಹನ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಆರ್.ಶಿವಯ್ಯ ಮತ್ತಿತರರಿದ್ದರು.
ಈ ಚುನಾವಣೆಯಲ್ಲಿ ಭ್ರಷ್ಟಾಚಾರ ಯುವ ಜನತೆ ಕಿತ್ತೂಗೆಯುವ ನಿಟ್ಟಿನಲ್ಲಿ ನನ್ನ ಮತ ಮಾರಾಟಕ್ಕಿಲ್ಲ ಎಂದು ರಾಜಕಾರಣಿಗಳಿಗೆ ಖಡಕ್ಕಾಗಿ ಹೇಳಬೇಕಿದೆ. ಹಣ ಕೊಡಲು ಬಂದವರಿಗೆ ಗೆದ್ದ ಮೇಲೆ ನಮ್ಮ ಊರಿಗೆ ಒಂದಿಷ್ಟು ಕೆಲಸ ಮಾಡಿ ಎಂದು ಹೇಳಬೇಕು.
-ಬಿ.ಜಿ.ನಾಗರಾಜು, ಬಸ್‌ಸ್ಟಾಂಡ್ ಹೋಟೆಲ್, ಹುಳಿಯಾರು
ಬಜೆಟ್‌ನಲ್ಲಿ ಘೋಷಿಸಿದ ಅದೆಷ್ಟೋ ಯೋಜನೆಗಳು ಜನಸಾಮಾನ್ಯರ ಕೈಗೆಟುಕದಿರುವುದು ನನ್ನಂತ ಹೊಸ ಮತದಾರರಿಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕಿದೆ ಎಂದು ಪ್ರಶ್ನೆ ಮೂಡುತ್ತಿದೆ. ಆದರೂ ಮುಂದಾದರೂ ಒಳ್ಳೆಯದಾಗಬಹುದೆಂದು ಭರವಸೆಯಿಂದ ಮತ ಹಾಕುತ್ತಿದ್ದೇನೆ.
-ಎಚ್.ಬಿ.ಬಾಲಾಜಿ, ಪದವಿ ವಿದ್ಯಾರ್ಥಿ, ಹುಳಿಯಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.