ಬಿರು ಬೇಸಿಗೆಯಲ್ಲಿ ಕಾಡುತಿದೆ ನೀರಿನ ಕೊರತೆ
Team Udayavani, Mar 22, 2019, 7:35 AM IST
ಮಾಲೂರು: ಬೇಸಿಗೆಯ ಬಿರು ಬಿಸಿಲು ಏರಿಕೆಯಾಗುತ್ತಿರುವಂತೆ ಕೊಳವೆ ಬಾವಿಗಳ ಬತ್ತಿಹೋಗುತ್ತಾ ಗ್ರಾಮೀಣ ಭಾಗವೂ ಸೇರಿದಂತೆ ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ಅಧಿಕವಾಗುತ್ತಿದೆ.
ಕಳೆದ ವರ್ಷಗಳಿಗೆ ಹೋಲಿಸಿದರೆ ಬೇಸಿಗೆಯ ಬಿರು ಬಿಸಿಲು ಹೆಚ್ಚಾಗುತ್ತಿದ್ದು ಹಳ್ಳಿಗಾಡು ಪ್ರದೇಶವು ಸೇರಿದಂತೆ ಮಾಲೂರು ಪಟ್ಟಣದ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗುತ್ತಿದೆ. ತಾಲೂಕಿನ ಗ್ರಾಪಂ ಪಿಡಿಒಗಳು ತಾಪಂ ಅಡಳಿತಕ್ಕೆ ನೀಡಿರುವ ಪ್ರಸ್ಥಾವನೆಯಂತೆ ತಾಲೂಕಿನ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಬವಣೆ ಇದ್ದು, ಕೆಲ ಗ್ರಾಮಗಳಲ್ಲಿ ಕೊಳವೆ ಬಾವಿಯನ್ನು ಕೊರೆದರೂ ನೀರಿಲ್ಲದ ಕಾರಣ ಖಾಸಗಿ ಕಳವೆ ಬಾವಿಗಳಿಂದ ನೀರು ಖರೀದಿ ಮಾಡಲಾಗುತ್ತಿದ್ದು, ಕೆಲವು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ.
ಕಳೆದ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟಕಾರಣದಿಂದಾಗಿ ತಾಲೂಕಿನ ಬಹುತೇಕ ಕೆರೆಗಳ ಬತ್ತಿಹೋಗಿದ್ದು, ಜಾನುವಾರುಗಳ ಕುಡಿಯುವ ನೀರಿನ ಜೊತೆಗೆ ಮೇವಿನ ಕೊರತೆಯೂ ಕಾಡುತ್ತಿದೆ. ತಾಲೂಕಿನ 35 ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಆರಂಭಗೊಂಡಿದ್ದು, ಅ ಪೈಕಿ 15 ಗ್ರಾಮಗಳಲ್ಲಿ ಗಂಬೀರ ಸಮಸ್ಯೆ ಇದೆ. ತಾಲೂಕಿನ 3 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ, 6 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಮತ್ತು 17ಗ್ರಾಮಗಳಲ್ಲಿ ಸಮಸ್ಯೆಯನ್ನು ಗುರುತಿಸಲಾಗಿದ್ದು, ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ. ಇದರ ಜತೆಗೆ 10-15 ಹಳ್ಳಿಗಳಲ್ಲಿ ಕುಡಿಯುವ ಕೊರತೆ ತಲೆದೋರುವ ಸಾಧ್ಯತೆಗಳಿವೆ.
ಆವರಿಸಿದ ನೀರಿನಬರ: ಮಾಲೂರು ಪಟ್ಟಣದಲ್ಲಿ ಸಮೃದ್ಧವಾದ ನೀರಿದ್ದು ವಿತರಣೆಯಲ್ಲಿನ ದೋಶಗಳಲ್ಲಿ ಅರ್ದಶನಗರ, ಮಾರುತಿ ಬಡಾವಣೆ ಮತ್ತಿತರ ಕಡೆಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಕಳೆದ ಸಾಲಿನ ಎಸ್‌ಎಪ್‌ಸಿ ಅನುದಾನವಾಗಿ ಕುಡಿಯುವ ನೀರಿಗಾಗಿ ಬಿಡುಗಡೆಯಾಗಿದ್ದ 6.25 ಕೋಟಿ ರೂ.ಗಳ ಅನುದಾನದ ಪೈಕಿ 1.25 ಕೋಟಿ ರೂ. ಗಳನ್ನು ಅರಳೇರಿ ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿಕೊಂಡಿರುವ ಪುರಸಭೆಯು ಉಳಿದ ಅನುದಾನದಲ್ಲಿ ಪಟ್ಟಣದ ಹೊರವಲಯದಲ್ಲಿನ
-ಅರೋಹಳ್ಳಿ ಕೆರೆಯಲ್ಲಿ 19 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು ಇದುವರೆಗೂ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಬಹುಪಾಲು ಜನರು ವಾರದಲ್ಲಿ ಕನಿಷ್ಟ ಎರಡು ಮೂರು ಟ್ಯಾಂಕರ್ ನೀರು ಖರೀದಿ ಮಾಡಿ ಜೀವನ ಸಾಗಿಸುವಂತಾಗಿದೆ. ಪಟ್ಟಣದಲ್ಲಿ ನೀರಿನ ಸಮಸ್ಯೆ ತಲೆ ದೂರಿರುವ ಕಾರಣ ಅನೇಕ ಬಾಡಿಗೆದಾರರು ಮನೆಗಳನ್ನು ಖಾಲಿ ಮಾಡಿರುವ ಕಾರಣ ಪಟ್ಟಣದಲ್ಲಿ ಸರಿಸುಮಾರು 1000 ಅಧಿಕ ಬಾಡಿಗೆ ಮನೆಗಳು ಖಾಲಿ ಬಿದ್ದಿರುವುದರಿಂದ ಅಭಿವೃದ್ಧಿಯ ಪ್ರಮಾಣ ಕುಂಟಿತವಾಗುತ್ತಿದೆ.
ಕಾಡುತಿದೆ ವಿದ್ಯುತ್‌ಸಮಸ್ಯೆ: ತಾಲೂಕಿನ ಕೆಲ ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದ ನೀರು ಹರಿಸುವುದು ಕಷ್ಟಕರವಾಗುತ್ತಿದೆ ಕೆಲವು ಹಳ್ಳಿಗಳಿಗೆ ದಿನದಲ್ಲಿ ಐದಾರು ತಾಸುಗಳು ಮಾತ್ರ ವಿದ್ಯುತ್ ನೀಡುವುದರಿಂದ ಕುಡಿಯುವ ನೀರಿನ ಪಂಪ್‌ಸೆಟ್‌ಗಳ ಚಾಲನೆಗೆ ಅಡಚಣೆಯಾಗುತ್ತಿದೆ. ಮಾಲೂರು ತಾಲೂಕಿನ ಬಹುತೇಕ ಹಳ್ಳಿಗಳು ನಿರಂತರ ಜ್ಯೋತಿಯ ಕಾರ್ಯಕ್ರಮದ ಅಡಿಯಲ್ಲಿ ದಿನದ 24ತಾಸುಗಳ ವಿದ್ಯುತ್ ಪೂರೈಕೆಯ ಕಾರ್ಯಕ್ರಮ ಅಡಿಯಲ್ಲಿದ್ದರೂ ಕೊಳವೆ ಬಾವಿಗಳಿಗೆ ಈ ಸೌಲಭ್ಯ ಕಲ್ಪಿಸಿಲ್ಲ.
ನೀರಿಲ್ಲದೆ ರೈತರು ಕಂಗಾಲು: ತಾಲೂಕಿನಲ್ಲಿ ಬಹುತೇಕ ರೈತರು ನದಿನಾಲೆಗಳ ನೀರಿಲ್ಲದ ಪರಿಸ್ಥಿತಿಯಲ್ಲಿ ಹಾಳದ ಕೊಳವೆ ಬಾವಿಗಳಿಂದ ನೀರು ತೆಗೆದು ಹನಿ ನೀರಾವರಿ ಪದ್ಧತಿಗಳ ಮೂಲಕ ಇರುವ ನೀರಿನಲ್ಲಿಯೇ ಉತ್ತಮ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬೇಸಿಗೆಯಲ್ಲಿ ರೈತರ ಕೊಳವೆ ಬಾವಿಯಲಿ ರಾತ್ರಿ ಬಂದ ನೀರು ಬೆಳಗಾಗುವ ವೇಳೆಗೆ ಬತ್ತಿ ಹೋಗುತ್ತಿರುವ ಕಾರಣ ತೋಟಗಳಲ್ಲಿ ಬೆಳೆಗೆ ನೀರು ಒದಗಿಸಲು ಸಾಧ್ಯವಾಗದ ಪರಿಸ್ಥಿತಿಯಲಿ ರೈತರು ಕಂಗಾಲಾಗಿದ್ದಾರೆ.
ಮೊದಲೇ 1600-1900ಅಡಿಗಳ ವರೆಗೂ ಕಳವೆ ಬಾವಿಗಳನ್ನು ಕೊರೆದು ಕೈಸುಟ್ಟುಕೊಂಡಿರುವ ರೈತರು ಏಕಾಏಕಿ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗುತ್ತಿರುವ ಕಾರಣ ಸಂಕಷ್ಟಕ್ಕೆ ಸಲುಕಿದ್ದಾರೆ. ಹೊಸಕೊಳವೆ ಬಾವಿಯನ್ನು ಕೊರೆಯಲು ಕನಿಷ್ಠ 6- 7 ಲಕ್ಷಗಳ ಅಗತ್ಯವಿದ್ದು, ನೀರು ಸಿಗುವ ವಿಶ್ವಾಸವಿಲ್ಲ. ಇಂತಹ ಪರಿಸ್ಥಿತಿಯಲ್ಲಿನ ರೈತರ ಕೈಗೆ ಬಂದ ಬೆಳೆಯನ್ನು ಉಳಿಸಿಕೊಳ್ಳಲು ಸಾದ್ಯವಾಗದ ಪರಿಸ್ಥಿತಿಯಲ್ಲಿದ್ದಾನೆ.
ಬರಪರಿಹಾರ ನಿರೀಕ್ಷೆ: ಪ್ರಸ್ತುತ ವರ್ಷದಲ್ಲಿ ರಾಜ್ಯವಾಪ್ತಿ ಬರಪರಿಸ್ಥಿತಿ ನಿರ್ಮಾಣವಾಗಿರುವ ಕಾರಣಗಳಿಂದ ತಾಲೂಕನ್ನು ಸಹ ಪರಪೀಡಿತ ತಾಲೂಕಿನ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಅದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬರಪರಿಹಾರ ನಿಧಿ ಇದುವರೆಗೂ ಬಂದಿಲ್ಲ. ಉನ್ನತ ಅಧಿಕಾರಿಗಳ ಮಾಹಿತಿಯಂತೆ ತಾಲೂಕಿನಲ್ಲಿ ಹೈನುಗಾರಿಕೆಯ ರಾಸುಗಳು ಹೆಚ್ಚಾಗಿದ್ದು, ಪಶು ಅಹಾರ ಮತ್ತು ಹಸಿರು ಹುಲ್ಲಿನ ಕೊರತೆಯಾಗುವ ಸಾಧ್ಯತೆಗಳಿದ್ದು ಪ್ರಸ್ತುತ ರೈತನ ಬಳಿಯಲ್ಲಿ ಮುಂದಿನ 22ದಿನಗಳಿಗೆ ಮಾತ್ರ ಸಾಕಾಗುವಷ್ಟು ಹಸಿರು ಮೇವು ದಾಸ್ತುನು ಇದೆ ಮುಂದಿನ ದಿನಗಳಲ್ಲಿ ರಾಸುಗಳ ಮೇಲಿನ ಕೊರತೆಯಾಗುವ ಸಾದ್ಯತೆಗಳಿವೆ.
ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಕಂಡಕೂಡಲೇ ಅಧಿಕಾರಿಗಳು ಮತ್ತು ಗ್ರಾಪಂ ಪಿಡಿಒಗಳಿಂದ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತಾಲೂಕಿನಾದ್ಯಂತ ವಿವಿದ ಮೂಲಕಗಳಿಂದ 154 ನೀರು ಶುದ್ಧಿಕರಿಸುವ ಅರ್.ಒ. ಪ್ಲಾಂಟ್‌ಗಳನ್ನು ನಿರ್ಮಿಸಿದ್ದು ಅ ಪೈಕಿ 6 ಘಟಕಗಳು ದುರಸ್ತಿಯಾಗಬೇಕಾಗಿದೆ ಇನ್ನೂ 183 ಹಳ್ಳಿಗಳಿಗೆ ಶುದ್ಧೀಕರಣ ಘಟಕಗಳ ಅಗತ್ಯವಿದೆ.
-ಆನಂದ್, ತಾಪಂ ಕಾರ್ಯನಿರ್ವಹಣಾಕಾರಿ
* ಎಂ.ರವಿಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.