ದೊಡ್ಡಪಟ್ಟಣಗೆರೆಯಲ್ಲಿ ರಾಸುಗಳ ಬೃಹತ್ ಜಾತ್ರೆ
Team Udayavani, Mar 22, 2019, 7:43 AM IST
ಕಡೂರು: ಬಯಲು ಸೀಮೆಯ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರೀ ಕಟ್ಟೆಹೊಳೆಯಮ್ಮನವರ ಜಾತ್ರಾ
ಮಹೋತ್ಸವದಿಂದ 30 ದಿನಗಳ ಕಾಲ ದನಗಳ ಜಾತ್ರೆ ನಡೆಯಲಿದೆ. ಸಾವಿರಾರು ರಾಸುಗಳ ಪ್ರದರ್ಶನ ಮಾರಾಟ ನಡೆಯುತ್ತದೆ ಎಂದು ಶ್ರೀ ಕಟ್ಟೆಹೊಳೆಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಬಿ. ಹನುಮಂತಪ್ಪ ತಿಳಿಸಿದರು.
ಅವರು ಪಟ್ಟಣಗೆರೆಯ ಕುರುಬಗೆರೆ ಮೈದಾನದಲ್ಲಿ ದನಗಳ ಜಾತ್ರೆಗೆ ಮಾಡಿರುವ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದರು.
61 ವರ್ಷಗಳಿಂದ ಅಮ್ಮನವರ ರಥೋತ್ಸವ ನಡೆದ ಬಳಿಕ ದನಗಳ ಜಾತ್ರೆಯನ್ನು ಆಯೋಜಿಸುತ್ತಿದೆ. ದೇವಾಲಯ ಸಮಿತಿಗೆ ಒಳಪಡುವ 14 ಗ್ರಾಮಗಳ ರಾಸುಗಳನ್ನು ಜಾತ್ರೆಯಲ್ಲಿ ಮಾರಾಟ ಮಾಡಲಾಗುತ್ತದೆ. ದೂರದ ಹಾಸನ, ಗಂಡಸಿ, ಅಜ್ಜಂಪುರ, ತರೀಕೆರೆ ಭಾಗಗಳ ರೈತರು ತಮ್ಮ ರಾಸುಗಳನ್ನು ಸಹ ಮಾರಾಟ ಮಾಡುತ್ತಾರೆ ಎಂದರು.
ಸುಮಾರು 80 ಸಾವಿರದಿಂದ 1 ಲಕ್ಷದವರೆಗೂ ಒಂದು ಜೊತೆ ಎತ್ತುಗಳಿಗೆ ಬೆಲೆ ನೀಡಿ ಖರೀದಿಸುತ್ತಾರೆ. ದಿನಕ್ಕೆ ಲಕ್ಷಾಂತರ ರೂ. ಗಳ ವ್ಯವಹಾರ ನಡೆಯುತ್ತದೆ. ಬರುವ ರೈತರಿಗೆ ದೇವಾಲಯ ಸಮಿತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದನ-ಕರುಗಳಿಗೆ ನೀರಿನ ತೊಟ್ಟಿಗಳ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿರುತ್ತೇವೆ. ಮೇವು ಮತ್ತು ನೆರಳಿನ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳುತ್ತಾರೆ.
ಕಟ್ಟಹೊಳೆಯಮ್ಮನವರ ದನಗಳ ಜಾತ್ರೆಗೆ ಬಂದು ಒಂದು ದಿನವಾದರೂ ರಾಸುಗಳನ್ನು ಕಟ್ಟಿದರೆ ಯಾವುದೇ ಕಾಯಿಲೆ
ಬರುವುದಿಲ್ಲ ಎಂಬ ಪ್ರತೀತಿ ಮೊದಲಿನಿಂದಲು ನಡೆದುಕೊಂಡು ಬಂದಿದೆ. ಆಕರ್ಷಕವಾದ ಒಂದು ಜೋಡಿಗೆ ಸಮಿತಿಯಿಂದ ಆಕರ್ಷಕ ಬಹುಮಾನವನ್ನು ನೀಡುತ್ತೇವೆ ಎಂದರು.
ಕಟ್ಟೆಹೊಳೆಯಮ್ಮದೇವಿಯವರಿಗೆ ಸೇರಿರುವ ಭೂಮಿಯಲ್ಲಿ ಜಾತ್ರಾ ಮಹೋತ್ಸವ ಮತ್ತು ದನಗಳ ಜಾತ್ರೆ ನಡೆಯುತ್ತಾ ಬಂದಿದೆ. ಇದಕ್ಕೆ 14 ಹಳ್ಳಿಗಳ ಸದಸ್ಯರು, ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಯಾವುದೇ ಸಮಸ್ಯೆಗಳಿಲ್ಲದೆ ಹೊಳೆಯಮ್ಮ ಸುಸೂತ್ರವಾಗಿ ದನಗಳ ಜಾತ್ರೆ ನಡೆಸಿಕೊಂಡು ಬಂದಿದ್ದೇವೆ ಎಂದರು.
ರಥೋತ್ಸವವಾದ ನಂತರ ಪ್ರತಿ ದಿನ 14 ಹಳ್ಳಿಯ ಗ್ರಾಮಸ್ಥರು ರಾತ್ರಿ ಕಟ್ಟೆಹೊಳೆಯಮ್ಮನವರ ಉತ್ಸವ ಮಾಡುವುದು ವಾಡಿಕೆಯಾಗಿದೆ. ಹರಕೆ ತೀರಿಸುವ ಭಕ್ತರು ದೇವಾಲಯಕ್ಕೆ ಬಂದು ಹೋಗುತ್ತಿರುತ್ತಾರೆ ಎಂದರು. ದೇವಾಲಯ ಸಮಿತಿ ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಮರಿಯಪ್ಪ ಮತ್ತು 14 ಹಳ್ಳಿಯ ಸಮಿತಿ ಸದಸ್ಯರು ಇದ್ದರು.
ಸುಮಾರು ಹತ್ತಾರು ಬಾರಿ ನಾನು ನಮ್ಮ ರಾಸುಗಳನ್ನು ತಂದು ಮಾರಾಟ ಮಾಡಿ ಉತ್ತಮ ಬೆಲೆ ಪಡೆದಿದ್ದೇನೆ. ಜೊತೆಯಲ್ಲಿ ದೂರದಿಂದ ಬಂದಿರುವ ರೈತರ ಸಂಪರ್ಕದಿಂದ ಅಲ್ಲಿನ ವ್ಯವಸಾಯ, ಹೈನುಗಾರಿಕೆ ವಿಷಯಗಳ ವಿನಿಮಯ ಮಾಡಿಕೊಳ್ಳುವುದರಿಂದ ನಮ್ಮಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.
ರಮೇಶ್, ಯರೆಹಳ್ಳಿಯ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಕೇರಳದಿಂದ “ಸುರಕ್ಷಿತ’ ಮಲೆನಾಡಿನತ್ತ “ನಕ್ಸಲರು’?
Naxalite: ಮಲೆನಾಡಿಗೆ ನಕ್ಸಲರ ಭೇಟಿ ದೃಢ; 3 ಬಂದೂಕು-ಮದ್ದುಗುಂಡು ವಶ
ಚಿಕಿತ್ಸೆಗೆಂದು ಬಂದಿದ್ದ ರೋಗಿ ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪ
Chikkamagaluru: ಮನೆಯೊಂದರಲ್ಲಿ ಬಂದೂಕು ಪತ್ತೆ; ನಕ್ಸಲ್ ಓಡಾಟ ಶಂಕೆ
Chikkamagaluru: ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು ಪ್ರಕರಣ; ಮೂವರ ಮೇಲೆ ದೂರು ದಾಖಲು
MUST WATCH
ಹೊಸ ಸೇರ್ಪಡೆ
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.