ಶಿಕ್ಷಣ ವ್ಯಾಪಾರೀಕರಣ ಸಲ್ಲದು: ಬೆಲ್ದಾಳ ಶ್ರೀ
Team Udayavani, Mar 22, 2019, 10:42 AM IST
ಬಸವಕಲ್ಯಾಣ: ಶಿಕ್ಷಣದ ವ್ಯಾಪಾರೀಕರಣದಿಂದ ಗ್ರಾಮೀಣ ಭಾಗದ ಶಿಕ್ಷಣದ ಮೇಲೆ ಪರಿಣಾಮ ಬೀಳುತ್ತಿದೆ ಎಂದು ಬಸವ ಮಹಾಮನೆ ಸಂಸ್ಥೆ ಅಧ್ಯಕ್ಷ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು.
ಮುಡಬಿ ಗ್ರಾಮದ ವೆಂಕಟೇಶ್ವರ ಪ್ರಾಥಮಿಕ ಶಾಲೆಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಡಜನರ ಪರವಾಗಿ ರೈತರ ಪರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆಯವರು ಮುಂದಾಗಿರುವುದು ಉತ್ತಮ ಕಾರ್ಯ ಎಂದರು.
ಹುಲಸೂರಿನ ಡಾ| ಶಿವಾನಂದ ಸ್ವಾಮೀಜಿ ಮಾತನಾಡಿ, ಇಂದು ಮಹಿಳೆಯರು ಏನು ಬೇಕಾದರು ಮಾಡಬಹುದು. ಅವರಲ್ಲಿ ದೊಡ್ಡ ಶಕ್ತಿಯಿದೆ. ಬುದ್ಧ, ಬಸವ, ಅಂಬೇಡ್ಕರ್ ಹೇಳಿದ ಹಾಗೆ ಮಕ್ಕಳಿಗೆ ಕಷ್ಟ ಪಟ್ಟು ಗುಣಮಟ್ಟದ ಶಿಕ್ಷಣ ಕಲಿಸಬೇಕು ಎಂದು ಹೇಳಿದರು. ಮುಡಬಿ ಪೊಲೀಸ್ ಠಾಣೆ ಪಿಎಸ್‌ಐ ವಸೀಮ್ ಪಟೇಲ್ ಮಾತನಾಡಿ, ಗುರಿ ಸಾಧಿ ಸಲು ಮನುಷ್ಯನಲ್ಲಿ ಛಲವಿರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.
ಸಂಸ್ಥೆ ಅಧ್ಯಕ್ಷೆ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ಭಾಲ್ಕಿ ಸೂರ್ಯೋದಯ ಪಬ್ಲಿಕ್ ಶಾಲೆ ಸಂಸ್ಥಾಪಕಿ ಉಷಾ ಖಂಡ್ರೆ, ಮುಡಬಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಹಳ್ಳದ, ನ್ಯಾಯವಾದಿ ಶ್ರೀನಿವಾಸರಾವ್, ಮುಡಬಿ ಸಿಆರ್‌ಪಿ ಹಣಮಂತ ಆರ್.ಬಿ, ವಸಾಪ ತಾಲೂಕು ಅಧ್ಯಕ್ಷ ಕಲ್ಯಾಣರಾವ್ ಮದರಗಾಂವಕರ್, ವೀರೇಶ ಪಂಚಾಳ, ಸಿವಿಲ್ ಇಂಜಿನಿಯರ ಸಯ್ಯದ್ ಅಲ್ತಾಫ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.