15ದಿನಗಳಲ್ಲಿ 4 ಪ್ರಕರಣ ಪತ್ತೆ; 20ಕ್ಕೂ ಅಧಿಕ ಆರೋಪಿಗಳ ಬಂಧನ


Team Udayavani, Mar 23, 2019, 12:30 AM IST

2203kota6e.jpg

ವಿಶೇಷ ವರದಿ- ಕೋಟ:  ಅಕ್ರಮ ಮರಳುಗಾರಿಕೆ, ಕಲ್ಲುಗಣಿಗಾರಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸ್ಥಳೀಯರ ದೂರಿನ ಮೇರೆಗೆ ಪೊಲೀಸರು ಇಂತಹ ಅಡ್ಡೆಗಳಿಗೆ  ದಾಳಿ ನಡೆಸುತ್ತಿದ್ದಾರೆ. 

ಕಳೆದ 15ದಿನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಪ್ರಕರಣಗಳು ನಡೆದಿದ್ದು, 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಇನ್ನೂ ಹಲವಾರು ಕಡೆಗಳಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದ್ದು ಸಾಲು-ಸಾಲು ಪ್ರಕರಣಗಳು ಮಾ. 20ರಂದು ಬೆಳಗಿನ ಜಾವ ಬಾಳುRದ್ರು ಗ್ರಾಮದ ಹಂಗಾರಕಟ್ಟೆ ಸೀತಾನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ  ದಕ್ಕೆಗೆ ಕೋಟ ಪೊಲೀಸರು ಕಂದಾಯ ಇಲಾಖೆಯ ಅಧಿಕಾರಿಗಳ ಜತೆಗೆ  ದಾಳಿ ನಡೆಸಿ ಟೆಂಪೋ ಹಾಗೂ ಮರಳು, ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದರು.ಆದರೆ ಆರೋಪಿ ಮಂಜು ಠಾಣೆಯಲ್ಲೇ ಪೊಲೀಸರ ಕೈತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಇನ್ನೊಂದು ಪ್ರಕರಣದಲ್ಲಿ ಮಾ. 3ರಂದು ಪೋಲಿಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಸ್ಥಳೀಯರ ಮಾಹಿತಿಯಾಧರಿಸಿ ಕಾರ್ಕಳದ ಎಎಸ್‌ಪಿ ಕೃಷ್ಣಕಾಂತ್‌ ನೇತƒತ್ವದಲ್ಲಿ ವಿಶೇಷ ತಂಡದ ಮೂಲಕ ಮೊಳಹಳ್ಳಿ ಕೈಲ್ಕೆರೆ ಅಕ್ರಮ ಮರಳುಗಾರಿಕೆ  ದಕ್ಕೆಗೆ ತಡರಾತ್ರಿ ದಾಳಿ ನಡೆಸಿದ್ದು,  ಈ ಸಂದರ್ಭ 10 ದೋಣಿ,1 ಲಾರಿ, 2 ಕಾರುಗಳನ್ನು ವಶಕ್ಕೆ ಪಡೆದು ಮರಳು ತೆಗೆಯುವ ಕಾರ್ಮಿಕರು ಸೇರಿದಂತೆ 20ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು.

ಮಾ. 13ರಂದು ಬಿಲ್ಲಾಡಿ ಸಮೀಪ ಬನ್ನೇರಳಕಟ್ಟೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಮರಳು ದಕ್ಕೆಗೆ ಪೊಲೀಸರು ದಾಳಿ ನಡೆಸಿ ಮರಳು ಹಾಗೂ ಸಾಗಾಟಕ್ಕೆ ಬಳಸಿದ ಟೆಂಪೋವನ್ನು ವಶಕ್ಕೆ ಪಡೆದಿದ್ದರು ಹಾಗೂ ಪೊಲೀಸರನ್ನು ನೋಡಿ ಚಾಲಕ ಮತ್ತು ಕೆಲಸಗಾರರು ಸ್ಥಳಿದಿಂದ ಪರಾರಿಯಾಗಿದ್ದರು.

ಮಾ. 22ರಂದು ನೈಲಾಡಿಯಲ್ಲಿ ಕಪ್ಪುಕಲ್ಲು ಕೋರೆಯ ಮೇಲೆ ದಾಳಿ ನಡೆದಿದ್ದು, ಲಾರಿ, ಕಂಪ್ರೇಷರ್‌ ಹಾಗೂ ಗಣಿಗಾರಿಕೆಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.

ಮರುಕಳಿಸುತ್ತಿರುವ ಪ್ರಕರಣಗಳು
ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಭಾಗದಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 2017ರಿಂದ ಇಲ್ಲಿಯ ತನಕ ಸುಮಾರು 10ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದೆ ಹಾಗೂ 23ಕ್ಕೂ ಹೆಚ್ಚು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ್ದು,
ಇದೀಗ ಕೋಟ ಠಾಣೆಯ ಆವರಣದಲ್ಲಿ ದೋಣಿಗಳ ರಾಶಿ ಕಾಣಸಿಗುತ್ತದೆ. ಜತೆಗೆ ಇನ್ನೂ ಹಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆಯ ಮೇಲೆ ದಾಳಿ ನಡೆದಿದೆ. ಆದರೆ ಅಕ್ರಮ ಚಟುವಟಿಕೆಗಳು ಮಾತ್ರ ನಿಂತಿಲ್ಲ.

ಗ್ರಾಮಾಂತರ ಭಾಗದಲ್ಲಿ ಇಂತಹ ಚಟುವಟಿಕೆಗಳು ಹೆಚ್ಚು-ಹೆಚ್ಚು ನಡೆಯುತ್ತಿದ್ದು, ಕೆಲವೊಂದು ಗ್ರಾಮಗಳು ಠಾಣೆಯಿಂದ  ಸಾಕಷ್ಟು  ದೂರದಲ್ಲಿದರಿಂದ ಇಂತಹ ಚಟುವಟಿಕೆಗಳನ್ನು ಮಟ್ಟಹಾಕಲು ಕಷ್ಟ ಸಾಧ್ಯವಾಗುತ್ತಿದೆ ಎನ್ನಲಾಗಿದೆ.

ದೂರು ನೀಡಿ;  ಕ್ರಮಕೈಗೊಳ್ಳುತ್ತೇವೆ
ಅಕ್ರಮ ಚಟುವಟಿಕೆಗಳನ್ನು ತಡೆಯಲು ಇಲಾಖೆ ಎಲ್ಲಾ  ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳೀಯರು ತಮ್ಮ ಪರಿಸರದಲ್ಲಿ ನಡೆಯುವ ಅಕ್ರಮದ ಕುರಿತು ಗಣಿಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ಥಳೀಯ ಮಟ್ಟದ ಅಧಿಕಾರಿಗಳು ಅಕ್ರಮ ತಡೆಗಟ್ಟುವಲ್ಲಿ ವಿಫಲರಾದರೆ ಜಿಲ್ಲಾ ಮಟ್ಟದಿಂದ ಸೂಕ್ತ ತಂಡವನ್ನು ನಿಯೋಜಿಸಿ ಕ್ರಮಕೈಗೊಳ್ಳುತ್ತೇವೆ ಎನ್ನುವುದು ಪೊಲೀಸ್‌ ಹಾಗೂ ಗಣಿ ಇಲಾಖೆಯ ಉನ್ನತ ಅಧಿಕಾರಿಗಳ ಭರವಸೆಯ ಮಾತುಗಳಾಗಿದೆ.

ಟಾಪ್ ನ್ಯೂಸ್

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.