ಹೆಸ್ಕಾತ್ತೂರು:ಗ್ರಾಮಕ್ಕೆ ಹರಿದು ಬಂತು ವಾರಾಹಿ ಕಾಲುವೆ ನೀರು
Team Udayavani, Mar 23, 2019, 12:30 AM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲೂ ಈಗ ವಾರಾಹಿ ಕಾಲುವೆ ನೀರು ಹರಿದಿದೆ. ಇದರಿಂದ ಹೆಸ್ಕಾತ್ತೂರು ಹಾಗೂ ಮೂಡು ಕೊರ್ಗಿಗೆ ಹೊಂದಿಕೊಂಡು ಇರುವ ಹೊಳೆ ಸಾಲಿನಲ್ಲಿ ಅಂತಜರ್ಲಲ ಮಟ್ಟ ಏರಿದ್ದು,ಕೃಷಿಕರಿಗೆ ಪ್ರಯೋಜನವಾಗಿದೆ.
ಕಿಂಡಿ ಅಣೆಕಟ್ಟಿಗೆ ಗ್ರಾಮಸ್ಥರಿಂದ ಹಲಗೆ
ಗ್ರಾಮಕ್ಕೆ ಎದುರಾಗುವ ನೀರಿನ ಸಮಸ್ಯೆಯನ್ನು ಅರಿತು, ಇತ್ತೀಚೆಗೆ ವಾರಾಹಿ ಎಡದಂಡೆ ಕಾಲುವೆ ನೀರು ಹಾಯಿಸುವಿಕೆ ಆರಂಭವಾದ ಬಳಿಕ ಹೊಳೆಯಲ್ಲಿ ಮತ್ತೆ ನೀರು ಕಾಣುತ್ತಿದ್ದು ಇದನ್ನು ಸದ್ವಿನಿಯೋಗಿಸುವ ಉದ್ದೇಶದಿಂದ ಗ್ರಾಮಸ್ಥರು ಕಿಂಡಿ ಅಣೆಕಟ್ಟಿಗೆ ಅಡ್ಡ ಹಲಗೆ ಅಳವಡಿಸಿದ್ದಾರೆ.
ಹೆಚ್ಚಿದ ಅಂತರ್ಜಲ ಮಟ್ಟ
ಕೊರ್ಗಿ ಹಾಗೂ ಹೆಸ್ಕಾತ್ತೂರು ಗ್ರಾಮದಲ್ಲಿ ಹರಿಯುತ್ತಿರುವ ವಾರಾಹಿ ಕಾಲುವೆ ನೀರಿನಿಂದಾಗಿ ಅಚಾÉಡಿ ಗ್ರಾಮದಲ್ಲೂ ನೀರಿನ ಸೆಲೆ ಹೆಚ್ಚಾಗಿದೆ. ಹಿಂದೆ ಎಪ್ರಿಲ್ ಹಾಗೂ ಮೇ ತಿಂಗಳ ಕೊನೆಯಲ್ಲಿ ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಹಲವು ದೂರ ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದಲೂ ಈ ಭಾಗದಲ್ಲಿ ಹರಿಯುತ್ತಿರುವ ವಾರಾಹಿ ಕಾಲುವೆಯ ನೀರು ಹಾಗೂ ಕಿಂಡಿ ಅಣಿಕಟ್ಟಿನ ಸಮರ್ಪಕವಾದ ನಿರ್ವಹಣೆಯ ಫಲವಾಗಿ ಇಲ್ಲಿನ ಕೆರೆ ಬಾವಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ.
ಹೆಸ್ಕಾತ್ತೂರಿನ ಸುತ್ತಮುತ್ತಲಿನ ಸುಮಾರು 138 ಹಾಗೂ ಮೂಡು ಕೊರ್ಗಿಯಲ್ಲಿ ಸುಮಾರು 60ಕ್ಕೂ ಅಧಿಕ ಮನೆಗಳಿಗೆ ಹೆಸ್ಕಾತ್ತೂರು ಹೊಳೆ ಸಮೀಪದಲ್ಲಿಯೇ ನಿರ್ಮಿಸಿದ ಬಾವಿಯಿಂದ ಓವರ್ ಹೆಡ್ ಟ್ಯಾಂಕ್‌ಗಳ ಮೂಲಕ ನೀರು ಸರಬರಾಗುತ್ತಿದೆ.
ಶಾಶ್ವತ ಪರಿಹಾರ ಸಾಧ್ಯ
ವಾರಾಹಿ ಕಾಲುವೆ ನೀರು ಸಮರ್ಪಕವಾಗಿ ಸಂಗ್ರಹಿಸುವ ನಿಟ್ಟಿನಿಂದ ವೈಜ್ಞಾನಿಕವಾಗಿ ಕ್ರಮ ಕೈಗೊಂಡರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ . ನೀರಿನ ಸದ್ಬಳಕೆ ಮಾಡುವಲ್ಲಿ ಗ್ರಾಮಸ್ಥರ ಪಾತ್ರ ಬಹಳ ಮುಖ್ಯವಾಗಿದೆ.
– ಸುಧಾಕರ ಶೆಟ್ಟಿ,
ಪಿಡಿಒ, ಗ್ರಾ.ಪಂ. ಕೊರ್ಗಿ
ಅಂತರ್ಜಲ ಮಟ್ಟ ಏರಿಕೆ
ಹೊಳೆಯಲ್ಲಿ ಹರಿಯುವ ವಾರಾಹಿ ಕಾಲುವೆ ನೀರಿಗೆ ಅಡ್ಡ ಹಲಗೆ ಅಳವಡಿ ಸಿದ ಪರಿಣಾಮವಾಗಿ ಕಳೆದ 2 ವರ್ಷಗಳಿಂದ ಹೆಸ್ಕಾತ್ತೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೆರೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆ ಕಂಡಿದೆ.
– ಪ್ರಕಾಶ್ ಹೆಸ್ಕಾತ್ತೂರು, ಗ್ರಾಮಸ್ಥರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.