ಜಿಲ್ಲಾಧಿಕಾರಿ ನೇತೃತ್ವದ ತಂಡದಿಂದ ತಪಾಸಣೆ
Team Udayavani, Mar 23, 2019, 12:30 AM IST
ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಜಿಲ್ಲೆಯ ಅರಣ್ಯ ಪ್ರದೇಶಗಳ ಬಳಿಯ ಮತಗಟ್ಟೆಗಳಲ್ಲಿ ಸುರಕ್ಷತಾ ವ್ಯವಸ್ಥೆ ಸಬಲಗೊಳಿಸುವ ಅಂಗವಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ನೇತೃತ್ವದಲ್ಲಿ ಹಿರಿಯ ಮಟ್ಟದ ಅಧಿಕಾರಿಗಳ ತಂಡ ಸಂದರ್ಶನ ನಡೆಸಿದೆ.
ಸಂದರ್ಶನ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ವಿಭಾಗೀಯ ಅರಣ್ಯ ಅಧಿಕಾರಿ ಪಿ.ಕೆ.ಅನೂಪ್ ಕುಮಾರ್ ತಂಡ ನೇತೃತ್ವ ವಹಿಸಿತ್ತು. ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೇಂದ್ರ ಸೇನೆಯ ಭದ್ರತೆ ಏರ್ಪಡಿಸುವ ಹಿನ್ನೆಲೆಯಲ್ಲೂ ಈ ಸಂರಕ್ಷಣೆ ನಡೆದಿದೆ.
ಚಿತ್ತಾರಿಕಲ್ ತೋಮಾಪುರಂ ಸಂತ ಥಾಮಸ್ ಹೈಯರ್ ಸೆಕೆಂಡರಿ ಶಾಲೆಗೆ ಈ ತಂಡ ಮೊದಲಿಗೆ ಭೇಟಿ ನೀಡಿದೆ. ಶಾಲೆ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ ಅನಂತರ ತಯೆÂàನಿ ಸರಕಾರಿ ಪ್ರೌಢ ಶಾಲೆ, ಪಾಲಾವಯಲ್ ಸಂತ ಜೋನ್ಸ್ ಹೈಯರ್ ಸೆಕೆಂಡರಿ ಶಾಲೆ ಇತ್ಯಾದಿ ಕಡೆೆ ಸಂರಕ್ಷಣೆ ನಡೆಸಲಾಯಿತು.
ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಬಿ.ಪ್ರಶೋಬ್, ಡಿವೈಎಸ್‌ಪಿಗಳಾದ ಟಿ.ಎನ್.ಸಜೀವ್, ಎಂ. ಅಸೀನಾರ್ ತಂಡದಲ್ಲಿದ್ದರು. ಜತೆಗೆ ಇನ್ಸ್‌ಪೆಕ್ಟರ್ ದಯಾರಾಂ ಸಿಂಗ್ ನೇತೃತ್ವದ 74 ಸದಸ್ಯರಿರುವ ಸಿ.ಆರ್.ಪಿ.ಎಫ್. ಬೆಟಾಲಿಯನ್ ಇವರ ಜತೆಗಿದ್ದರು.ವನಪ್ರದೇಶಗಳ ಬಳಿಯಿರುವ ಮತಗಟ್ಟೆಗಳಲ್ಲಿ ಸ್ಥಳೀಯರು ಯಾವುದೇ ಭೀತಿ ಆತಂಕಗಳಿಲ್ಲದೆ ಮತದಾನ ನಡೆಸುವ ಎಲ್ಲ ಸೌಲಭ್ಯಗಳನ್ನೂ ಏರ್ಪಡಿಸಲಾಗಿದೆ. ಇವುಗಳ ತಪಾಸಣೆ ಮತ್ತು ಭದ್ರತೆಯ ಪರಿಶೀಲನೆಯ ನಿಟ್ಟಿನಲ್ಲಿ ಈ ಸಂದರ್ಶನ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್ ಬಾಬು ಈ ಸಂದರ್ಭದಲ್ಲಿ ತಿಳಿಸಿದರು.
ಈ ನಿಟ್ಟಿನಲ್ಲಿ ರಾಜಪುರಂ ಮತ್ತು ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲೂ ತಪಾಸಣೆ ನಡೆಯಲಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.