ಅಪಘಾತ: ಯುವ ಸಿನೆಮಾ ನಿರ್ದೇಶಕ ಸಾವು
Team Udayavani, Mar 23, 2019, 12:30 AM IST
ಮೂಡುಬಿದಿರೆ:ಗುರುವಾರ ರಾತ್ರಿ ಮೂಡುಕೊಣಾಜೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತುಳು ಚಿತ್ರರಂಗದ ಯುವ ನಿರ್ದೇಶಕ ಮಹಮ್ಮದ್ ಹ್ಯಾರಿಸ್ (27) ಅವರು ಮೃತಪಟ್ಟಿದ್ದಾರೆ.
ಇವರ ನಿರ್ದೇಶನದ “ಆಟಿಡೊಂಜಿ ದಿನ’ ಚಿತ್ರದ ಚಿತ್ರೀಕರಣ ಮೂಡುಬಿದಿರೆ ಪರಿಸರದಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿತ್ತು.
ಗುರುವಾರ ರಾತ್ರಿ ಮನೆಗೆ ಬಂದು ಸ್ನಾನ, ಊಟ ಮುಗಿಸಿದ ಸ್ವಲ್ಪ ಹೊತ್ತಿನಲ್ಲಿ ನಿರ್ಮಾಪಕರನ್ನು ಭೇಟಿಯಾಗಲು ಆಮ್ನಿ ಕಾರಿನಲ್ಲಿ ಶಿರ್ತಾಡಿಗೆ ಹೊರಟಿದ್ದಾಗ ದುರಂತ ಸಂಭವಿಸಿದೆ.
ಮೂಡುಕೊಣಾಜೆಯಲ್ಲಿ ಇವರ ವಾಹನ ಮರಕ್ಕೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ದಾರಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಸ್ನೇಹಿತರೊಬ್ಬರು ಹ್ಯಾರಿಸ್‌ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ದಾರಿ ಮಧ್ಯೆ ಕೊನೆಯುಸಿರೆಳೆದರು.
ಹೌದಾಲು ನಿವಾಸಿ ಆದಂ ಬ್ಯಾರಿ ಅವರಐವರು ಮಕ್ಕಳ ಪೈಕಿ ಹ್ಯಾರಿಸ್ ಹಿರಿಯವರು ಮತ್ತು ಏಕ ಮಾತ್ರ ಪುತ್ರರಾ ಗಿದ್ದರು.ತುಳು ಚಿತ್ರರಂಗದ ಗಣ್ಯರು ಹ್ಯಾರಿಸ್ ಅವರ ಅಂತಿಮ ದರ್ಶನ ಪಡೆದರು.
ಎಳವೆಯಿಂದಲೇ ಸಿನೆಮಾ ಸೆಳೆತ
ಮಹಾವೀರ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದ ಹ್ಯಾರಿಸ್ ಅವರು ಶಂಕರ್‌ನಾಗ್ ಅಭಿಮಾನಿ. ಶಂಕರ್‌ನಾಗ್ ಹೆಸರಿನಲ್ಲಿ ಶಿರ್ತಾಡಿ ಪರಿಸರದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಸುತ್ತಿದ್ದರು. ಅವರು ಕಾಶಿನಾಥ್ ಜತೆ ಹಲವು ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿ ದಿದ್ದರು. ಲಕ್ಷ್ಮೀ, ಬ್ರೇಕಿಂಗ್ ನ್ಯೂಸ್, ಮುತ್ತು ಮಾವುತ, ಚೆಲ್ಲಾಪಿಲ್ಲಿ, ಮಾರ ಎಲ್‌ಎಲ್‌ಬಿ, ಐಸ್‌ಪೈಸ್ ಹೀಗೆ ಹಲವು ಕನ್ನಡ ಚಿತ್ರಗಳಿಗೆ ಮತ್ತು ಪಂಜರದ ಗಿಳಿ, ಮನೆಯೊಂದು ಮೂರುಬಾಗಿಲು, ಚಕ್ರವಾಹಕ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.ತುಳುವಿನಲ್ಲಿ ಬಿರ್ಸೆ,ರಿಕ್ಷಾ ಡ್ರೈವರ್, ತೆಲಿಕೆದ ಬೊಳ್ಳಿ,ರಂಗ್,ಜೈತುಳುನಾಡ್ ಚಿತ್ರಗಳಲ್ಲಿ ದುಡಿ ದಿದ್ದರು.”ಬೈಲ ಕುರಲ್ ಅವರ ಪೂರ್ಣ ನಿರ್ದೇಶನದ ಮೊದಲ ತುಳು ಚಿತ್ರ.ಆ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲೂ ಅವಘಡ ಸಂಭವಿಸಿದ್ದು ಬಳಿಕ ಚಿತ್ರ ಅಪೂರ್ಣಗೊಂಡಿತ್ತು.”ಆಟಿಡೊಂಜಿ ದಿನ’ಅವರ ಎರಡನೇ ತುಳುಚಿತ್ರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.