ಈ ಸಲ ಕಪ್ ನಮ್ದೇ ‘! ಆರ್‌ಸಿಬಿ ಕಿಕ್ ಕೊಡುವ ಹೋಟೆಲ್
Team Udayavani, Mar 23, 2019, 2:32 AM IST
ಈ ಸಲ ಕಪ್ ನಮ್ದೇ! ಕಳೆದವರ್ಷ ಬೆಂಗಳೂರಿನ ಕ್ರಿಕೆಟ್ ಪ್ರಿಯರ ಈ ಘೋಷ ವಾಕ್ಯ ಮುಗಿಲು ಮುಟ್ಟಿದರೂ, ಆರ್‌ಸಿಬಿ ಐಪಿಎಲ್ ಗೆದ್ದಿರ ಲಿಲ್ಲ. ಈ ಬಾರಿ ಆರ್‌ಸಿಬಿಯನ್ನು ಅದೇ ಧ್ವನಿಯಿಂದ ಹುರಿದುಂಬಿಸಲು ಅಭಿಮಾನಿ ಗಳೇನೂ ಹಿಂದುಳಿದಿಲ್ಲ. ಅದರಲ್ಲೂ ಪ್ರಖ್ಯಾತ್ ಮತ್ತು ಸ್ವಾಗತ್ ಸಿ.ಡಿ. ಹಾಗೂ ಇತರ ಸ್ನೇಹಿತರರು ಸೇರಿಕೊಂಡು ಪಕ್ಕಾ ಆರ್‌ಸಿಬಿ ವಾತಾವರಣ ಇರುವ ಹೋಟೆಲ್ ಒಂದನ್ನೇ ತೆರೆದಿದ್ದಾರೆ! ಈ ಹೋಟೆಲ್ ಹೆಸರು ಕೂಡ, “ಈ ಸಲ ಕಪ್ ನಮ್ದೇ! ಇಲ್ಲಿ ಎಲ್ಲದಕ್ಕೂ ಆರ್‌ಸಿಬಿ ಬಣ್ಣ (ಕೆಂಪು), ರೆಸಿಪಿಗಳ ರುಚಿಯೂ ಕ್ರಿಕೆಟಿನದ್ದೇ!
ಪುಟ್ಟ ಕ್ರೀಸು, ಸ್ಕೋರ್‌ಬೋರ್ಡು…
ಎಲ್ಲೋ ಕ್ರಿಕೆಟ್ ಸ್ಟೇಡಿಯಮ್ಮೊಳಗೋ, ಕ್ರಿಕೆಟ್‌ನ ಮ್ಯೂಸಿಯಂ ಒಳಗೋ ಇದ್ದೇವೇನೋ ಎಂಬ ಭಾವ ಹುಟ್ಟಿಸುವ ಈ ಹೋಟೆಲ್ ಒಳಗೆ, ಆರ್‌ಸಿಬಿ ಹುಡುಗರ ದೊಡ್ಡ ದೊಡ್ಡ ಭಾವಚಿತ್ರಗಳಿವೆ. ಆರ್‌ಸಿಬಿ ಆಟಗಾರರ ವೀರೋಚಿತ ಆಟದ ದೃಶ್ಯಗಳನ್ನು ಫ್ರೆàಮ್ ಹಾಕಿಸಿ, ಗೋಡೆ ಮೇಲೆ ತೂಗಿಡಲಾಗಿದೆ. ಗೋಡೆ ಮೇಲೆ ಕ್ರಿಕೆಟ್ ಚೆಂಡುಗಳನ್ನೇ ಹೋಲುವ ವಿನ್ಯಾಸವಿದೆ. ಊಟದ ಟೇಬಲ್ಲುಗಳ ನಡುವೆ ಒಂದು ಪುಟ್ಟ ಕ್ರೀಸ್ ಅನ್ನೂ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲೇ ಇರುವ ಗೋಡೆಯ ಮೇಲೆ ಸ್ಕೋರ್ ಬೋರ್ಡ್ ಕಾಣಿಸುತ್ತದೆ. ಫ್ರಿ ರನ್, ವಿಕೆಟ್, ಎಲ್‌ಬಿಡಬ್ಲ್ಯು, ಫೋರ್, ಸಿಕ್ಸ್, ಔಟ್… ಕ್ರಿಕೆಟ್‌ನಲ್ಲಿ ಬಳಕೆ ಆಗುವಂಥ ಶಬ್ದಗಳನ್ನು ಇಲ್ಲಿ ದೊಡ್ಡದಾಗಿ ನಮೂದಿಸಲಾಗಿದೆ. ಕ್ರೀಸ್‌ನ ಮೇಲ್ಭಾಗದಲ್ಲೇ ದೊಡ್ಡ ಎಲ್‌ಇಡಿ ಸ್ಕ್ರೀನ್ ಇದೆ. ಆರ್‌ಸಿಬಿ ಅಲ್ಲದೇ, ಐಪಿಎಲ್‌ನ ಯಾವುದೇ ತಂಡ ಆಡುವ ಪಂದ್ಯಗಳನ್ನು ಇಲ್ಲಿ ಲೈವ್ ಆಗಿ ಕಣ್ತುಂಬಿಕೊಳ್ಳಬಹುದು.
ಡ್ರೋಣ್, ಕ್ಯಾಮೆರಾ, ಫ್ಲಡ್‌ಲೈಟ್…
ಸ್ಟೇಡಿಯಮ್ಮಿನಲ್ಲಿ ಕ್ರಿಕೆಟ್ ನೋಡುತ್ತಾ ಕುಳಿತಾಗ, ಸ್ಪೈಡರ್ ಕ್ಯಾಮೆರಾ ಅತ್ತಿಂದಿತ್ತ ಹಾರಾಡುತ್ತಾ, ದೃಶ್ಯಗಳನ್ನು ಸೆರೆಹಿಡಿಯುವುದನ್ನು ನೋಡಿರುತ್ತೀರಿ. ಇಲ್ಲೂ ಸ್ಪೈಡರ್ ಕ್ಯಾಮೆರಾದ ಮಾದರಿ ಇದೆ. ಫ್ಲಡ್ ಲೈಟ್, ಡ್ರೋಣ್ ಕ್ಯಾಮೆರಾಗಳ ದರ್ಶನ ಭಾಗ್ಯವೂ ಸಿಗಲಿದೆ.
ಆರ್‌ಸಿಬಿಯ ಎಲ್ಲ ಆಟಗಾರರ ಜೆರ್ಸಿಗಳನ್ನೂ ಇಲ್ಲಿ ನೇತುಹಾಕಲಾಗದ್ದು, ಒಂದು ರೀತಿಯಲ್ಲಿ ಇದು ಆರ್‌ಸಿಬಿ ಮ್ಯೂಸಿಯಂನಂತೆಯೇ ತೋರುತ್ತದೆ. ಈ ಹೋಟೆಲ್‌ನ ಮೆನುಗಳಲ್ಲೂ ಕ್ರಿಕೆಟ್‌ತನವೇ ತುಂಬಿಕೊಂಡಿದೆ.ಆ್ಯಪಲ್ ಜ್ಯೂಸ್‌ಗೆ “ಹೌಝlಟ್’ ನಂತೆ, ಇತರೆ ಆಹಾರಗಳಿಗೂ ಅಂಥದ್ದೇ ಹೆಸರು ಇಡಲಾಗಿದೆ. ಒಟ್ಟಿನಲ್ಲಿ, ಫೆವಿಲಿಯನ್‌ನಲ್ಲಿ ಕುಳಿತಾಗ ಮ್ಯಾಚ್ ನೋಡಿದಾಗ ಹೇಗೆ ಅನುಭವ ಆಗುತ್ತೋ, ಅಂಥದ್ದೇ ಅನುಭವ ಇಲ್ಲಾಗುತ್ತೆ.
ಟೇಬಲ್ ಒಳಗೂ ಕ್ರಿಕೆಟ್‌ಲೋಕ
ಗ್ರಾಹಕರು ಆಸೀನರಾಗುವ ಕುರ್ಚಿಗಳಿಗೆ ಇರುವ ಕಾಲುಗಳೂ ವಿಕೆಟ್‌ನ ಮಾದರಿಯಲ್ಲೇ ಇವೆ. ಗ್ಲಾಸ್‌ನ ಟೇಬಲ್‌ಗಳ ಒಳಗೆ, ಬ್ಯಾಟು, ಲೆಗ್ ಪ್ಯಾಡ್, ಗ್ಲೌಸ್, ಬೆಲ್ಸ್‌ಗಳನ್ನು ಕಾಣುವಂತೆ ಇಡಲಾಗಿದೆ. ಹಾಗೇ ಮೇಲಕ್ಕೆ ನೋಡಿದರೆ, ತೂಗುತ್ತಿರುವ ಹೆಲ್ಮೆಟ್‌ನ ದರ್ಶನವಾಗುತ್ತದೆ.
ಎಲ್ಲಿದೆ? : ನಂ. 922, 28ನೇ ಮುಖ್ಯರಸ್ತೆ,
ಜಯನಗರ 9ನೇ ಬ್ಲಾಕ್
ಸಂಪರ್ಕ: 080 41400545
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.