ನೀತಿ ಸಂಹಿತೆಯಿಂದ ಕಾಡು ಹಂದಿಗಳಿಗೆ ಬಲ!


Team Udayavani, Mar 23, 2019, 5:30 AM IST

23-march-2.jpg

ಸುಬ್ರಹ್ಮಣ್ಯ : ಲೋಕಸಭಾ ಚುನಾವಣೆಯ ಕಾವು ಎಲ್ಲೆಡೆ ಕಂಡುಬರುತ್ತಿದೆ. ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪರವಾನಿಗೆ ಇರುವ ಕೋವಿಗಳನ್ನು ಪೊಲೀಸ್‌ ಠಾಣೆಗಳಲ್ಲಿ ಎಲ್ಲರೂ ಡೆಪಾಸಿಟ್‌ ಮಾಡಬೇಕಾಗಿದೆ. ಇದರಿಂದಾಗಿ ಕಾಡಂಚಿನ ರೈತರು ಕಂಗಾಲಾಗಿದ್ದಾರೆ. ನೀತಿ ಸಂಹಿತೆಯ ನಿಯಮ ಕಾಡು ಹಂದಿಗಳಿಗಂತೂ ಬಲ ತಂದುಕೊಟ್ಟಿದೆ! ಹಂದಿಗಳ ಹಿಂಡು ಮನುಷ್ಯನ ಮೇಲೂ ದಾಳಿ ಮಾಡುತ್ತಿದೆ.

ಕಾಡು ಪ್ರಾಣಿಗಳು ಹತ್ತಿರ ಬರದಂತೆ ತಡೆಯಲು ಕೃಷಿಕರು ಕೋವಿಗಳನ್ನು ಬಳಸುತ್ತಾರೆ. ಈ ರಕ್ಷಣಾ ಕೋವಿಗಳನ್ನು ಈಗ ಠಾಣೆಯಲ್ಲಿ ಠೇವಣಿ ಇಡಲಾಗಿದೆ. ಹಾಗಾಗಿ ಯಾವುದೇ ಹೆದರಿಕೆ ಇಲ್ಲದೆ ಕಾಡು ಹಂದಿಗಳು ಕೃಷಿಕನ ಅಂಗಳಕ್ಕೆ ಬರುತ್ತಿವೆ. ವಾರದ ಹಿಂದೆ ಹರಿಹರ-ನಡುಗಲ್ಲು-ಸುಳ್ಯ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಉಮೇಶ್‌ ಕಜೊjàಡಿ ಅವರ ವಾಹನಕ್ಕೆ ಮಲ್ಲಾರ ಬಳಿ ಕಾಡು ಹಂದಿ ಹಿಂಡು ಅಡ್ಡ ಬಂದಿತ್ತು. ಈ ವೇಳೆ ನಡೆದ ಅವಘಡದಿಂದ ಅವರು ಮಾರಣಾಂತಿಕ ಗಾಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಪಡೆದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮುಖ್ಯ ರಸ್ತೆಯಲ್ಲೆ ಈ ಘಟನೆ ನಡೆದಿತ್ತು. ಅದಕ್ಕಿಂತ ಒಂದೆರಡು ದಿನಗಳ ಹಿಂದೆ ಕೂಡ ಇದೇ ಮಾರ್ಗದಲ್ಲಿ ನಾಲ್ಕೈದು ಮಂದಿ ವಾಹನದಲ್ಲಿ ತೆರಳುತ್ತಿದ್ದಾಗ ಇದೇ ರೀತಿ ಹಂದಿಗಳ ಹಿಂಡು ಅಡ್ಡ ಬಂದ ಪ್ರಕರಣವೂ ನಡೆದಿದೆ. ಕೆಲ ಪ್ರಕರಣಗಳು ಬೆಳಕಿಗೆ ಬಂದರೆ, ಹಲವು ಘಟನೆಗಳು ಬೆಳಕಿಗೆ ಬರುತ್ತಿಲ್ಲ.

ಸುಳ್ಯ ಮತ್ತು ಕಡಬ ತಾಲೂಕು ಗಡಿಭಾಗದ ಕೃಷಿ ಅವಲಂಬಿತ ಕಾಡಂಚಿನ ಗ್ರಾಮಗಳಾದ ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಐನಕಿದು, ಕಲ್ಮಕಾರು ದೇವಚಳ್ಳ, ಮಡಪ್ಪಾಡಿ, ಗುತ್ತಿಗಾರು, ಸುಬ್ರಹ್ಮಣ್ಯ, ಯೇನೆಕಲ್ಲು, ಕೈಕಂಬ ಮೊದಲಾದ ಕಡೆಗಳ ಜನವಸತಿ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿವೆ. ಕಾಡಾನೆ, ಕಡವೆ, ಮಂಗಗಳ ಕಾಟದ ಹಿಂದೆಯೇ ಕಾಡು ಹಂದಿ ತೀವ್ರ ತರಹದ ತೊಂದರೆ ನೀಡುತ್ತಿದೆ.

ಹಂದಿ ಬೇಟೆಗೆ ಅನುಮತಿ ಇದೆ
ಮಾನವನ ಜೀವ ಮತ್ತು ಫಸಲು ನಾಶ ಪಡಿಸುವ ಕಾಡು ಹಂದಿ ಹತ್ಯೆಗೆ ಸರಕಾರದ ಅನುಮತಿ ನೀಡಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಯಾವುದೇ ಕಾಡು ಪ್ರಾಣಿಯು ಮನುಷ್ಯನ ಪ್ರಾಣ ಮತ್ತು ಸೊತ್ತಿಗೆ ಅಪಾಯಕಾರಿಯಾಗಿ ಕಂಡು ಬಂದರೆ ಅಂತಹ ಪ್ರಾಣಿಯ ಬೇಟೆಗೆ ಅವಕಾಶ ಕಲ್ಪಿಸಲಾಗಿದೆ.

ಹಂದಿಗೆ ಗುಂಡು ಹಾರಿಸಿದ ಬಳಿಕ ಸಂಬಂಧಿಸಿದ ಫಾರೆಸ್ಟರ್‌ ಅಥವಾ ಮೇಲಿನ ಹಂತದ ಅಧಿಕಾರಿಗಳು ಇಬ್ಬರು ಸಾಕ್ಷಿದಾರರ ಸಮ್ಮುಖದಲ್ಲೆ ಮಹಜರು ನಡೆಸಬೇಕು. ಸತ್ತ ಹಂದಿಯ ಮಾಂಸವನ್ನು ತಿನ್ನುವಂತಿಲ್ಲ ಮತ್ತು ಇತರೆ ಉದ್ದೇಶಕ್ಕೂ ಬಳಸುವಂತಿಲ್ಲ. ಹಂದಿಯ ಶವವನ್ನು 3 ಅಡಿ ಆಳದಲ್ಲಿ ಹೂತು ಹಾಕಬೇಕು ಅಥವಾ ಸುಟ್ಟು ಹಾಕಬೇಕು ಎನ್ನುವ ನಿಯಮವಿದೆ.

ಬೆಳೆಗಳೆಲ್ಲ ನಾಶ
ಕಾಡು ಹಂದಿಗಳು ಬೆಳೆಗಳನ್ನು ನಾಶ ಪಡಿಸುತ್ತಿವೆ. ತೋಟದಲ್ಲಿ ಬೆಳೆದಿರುವ ಸಣ್ಣ ಬಾಳೆಗಿಡಗಳನ್ನು ಬುಡಸಮೇತ ಕಿತ್ತು ಹಾಕುತ್ತಿವೆ. ವಿವಿಧ ರೀತಿಯ ಕೃಷಿ ಮತ್ತು ತೋಟದಲ್ಲಿ ಬಿದ್ದಿರುವ ತೆಂಗಿನ ಕಾಯಿಗಳನ್ನು ಹಂದಿಗಳು ಸುಲಿದು ತಿನ್ನುತ್ತಿವೆ. ಸಂಜೆ ವೇಳೆಗೆ ಕಾಡು ಹಂದಿಗಳು ಸಮೀ ಪದ ಕಾಡು ಗುಡ್ಡದಿಂದ ಕೃಷಿ ತೋಟಗಳಿಗೆ ನುಗ್ಗಿ ರಾತ್ರಿಯಿಡಿ ಕೃಷಿ ಧ್ವಂಸಗೊಳಿಸುತ್ತವೆ. ಅವುಗಳನ್ನು ಓಡಿಸುವ ವೇಳೆ ಕೆಲವೊಮ್ಮೆ ಮನುಷ್ಯನ ಮೇಲೆ ಆಕ್ರಮಣಕ್ಕೂ ಅವುಗಳು ಮುಂದಾಗುತ್ತವೆ.

ಹಿಂಡೇ ರಸ್ತೆಗೆ ಬಂತು
ಡಾಮರು ರಸ್ತೆಯ ಮೇಲೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದೆ. ಈ ವೇಳೆ ಏಕಾಏಕಿ ಐದಾರು ಹಂದಿಗಳ ಹಿಂಡು ಕಾಡಿನಿಂದ ರಸ್ತೆಗೆ ನುಗ್ಗಿತು. ಬ್ರೇಕ್‌ ಹಾಕುವಷ್ಟರಲ್ಲಿ ಅವುಗಳು ಬೈಕಿಗೆ ಢಿಕ್ಕಿ ಹೊಡೆದವು. ಬೈಕ್‌ ಸಮೇತ ನಾನು ಬಿದ್ದೆ. ರಸ್ತೆಗೆ ಎಸೆಯಲ್ಪಟ್ಟೆ. ನನ್ನ ಕಾಲಿಗೆ ಗಾಯಗಳಾಯಿತು.
– ಉಮೇಶ್‌ ಕಜ್ಜೋಡಿ
ದಾಳಿಗೆ ಒಳಗಾದವರು

ದೃಢಪಟ್ಟಲ್ಲಿ ಪರಿಹಾರ
ಕಾಡು ಹಂದಿಯಿಂದ ಮಾರಣಾಂತಿಕೆ ಹಲ್ಲೆಗೊಳಗಾಗಿ ಗಾಯಗೊಂಡ ಬಗ್ಗೆ ಪೊಲೀಸ್‌ ದೂರು, ವೈದ್ಯರ ದೃಢೀಕರಣ ಮೊದಲಾದ ದಾಖಲೆಗಳನ್ನು ಪರಿಶೀಲಿಸಿ ಹಂದಿಯಿಂದಲೇ ಮಾರಣಾಂತಿಕ ಹಲ್ಲೆ ಆಗಿರುವುದರ ಕುರಿತು ದೃಢ ಪಟ್ಟಲ್ಲಿ ಪರಿಹಾರ ನೀಡಲು ಅವಕಾಶವಿದೆ.
– ತ್ಯಾಗರಾಜ್‌ ಆರ್‌ಎಫ್ಒ,
ಸುಬ್ರಹ್ಮಣ್ಯ ಅರಣ್ಯ ವಿಭಾಗ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Chhattisgarh: 20 coaches of goods train derail

Chhattisgarh: ಹಳಿ ತಪ್ಪಿದ  ಗೂಡ್ಸ್‌ ರೈಲಿನ 20 ಬೋಗಿಗಳು

accident

Bantwal: ಕೆಎಸ್‌ಆರ್‌ಟಿಸಿ ಬಸ್‌-ಬೈಕ್‌ ಢಿಕ್ಕಿ; ದಂಪತಿಗೆ ಗಾಯ

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

Mangaluru: ಭಾರತ ಬಲಿಷ್ಠವಾಗಲು ಕೌಶಲಯುತ ಶಿಕ್ಷಣ ಅಗತ್ಯ: ಡಾ| ನಿರ್ಮಲಾನಂದನಾಥ ಸ್ವಾಮೀಜಿ

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.