ಚೀನದ ಅತಿ ಘೋರ ಕೈಗಾರಿಕಾ ಅವಘಡ: 64 ಬಲಿ; 640 ಮಂದಿಗೆ ಗಾಯ
Team Udayavani, Mar 23, 2019, 7:12 AM IST
ಬೀಜಿಂಗ್: ಈಚಿನ ವರ್ಷಗಳಲ್ಲೇ ಚೀನದಲ್ಲಿ ನಡೆದಿರುವ ಅತ್ಯಂತ ಘೋರ ಕೈಗಾರಿಕಾ ಅವಘಡಕ್ಕೆ ಬಲಿಯಾಗಿರುವವರ ಸಂಖ್ಯೆ 64ಕ್ಕೇರಿದೆ.
ಈ ಭಾರೀ ವಿನಾಶಕಾರಿ ಕೈಗಾರಿಕಾ ಅವಘಡವು ಬಹುತೇಕ 3.0 ಅಂಕಗಳ ತೀವ್ರತೆಗೆ ಸಮಾನವಾಗಿತ್ತು. ಸ್ಫೋಟದ ತೀವ್ರತೆಯಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿದವು; ಮಕ್ಕಳು ಬಹುದೂರಕ್ಕೆ ಗಾಳಿಯಲ್ಲಿ ಎಸೆಯಲ್ಪಟ್ಟರು; ಅವಘಡ ಸಂಭವಿಸಿದ ಇಡಿಯ ಪ್ರದೇಶ ಸಮರತ್ರಸ್ತ ಭೂಮಿಯಂತೆ ಕಂಡು ಬಂತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಅವಘಡದಲ್ಲಿ 64 ಮಂದಿ ಸತ್ತಿರುವ ನಡುವೆಯೇ ಇನ್ನೂ 24 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನದ ಜಿಯಾಂಗುÕ ಪ್ರಾಂತ್ಯದಲ್ಲಿ ನಿನ್ನೆ ಗುರವಾರ ರಸಗೊಬ್ಬರ ಕಾರ್ಖಾನೆಯೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಬೃಹತ್ ಸ್ಫೋಟಕ್ಕೆ ಕಾರಣವಾಯಿತು ಎಂದು ಕ್ಸಿಯಾಂಗ್‌ಶುಯಿ ಕೌಂಟಿಯ ಸರಕಾರ ಹೇಳಿದೆ.
ಅವಘಡದಲ್ಲಿ 640ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ; ಗಂಭೀರವಾಗಿ ಗಾಯಗೊಂಡಿರುವ 73 ಮಂದಿಯ ಪೈಕಿ 34 ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಿದೆ ಎಂದು ಪ್ರಾಂತೀಯ ಸರಕಾರ ಹೇಳಿದೆ.
ಅವಘಡದಿಂದ ತೀವ್ರವಾಗಿ ಬಾಧಿತರಾಗಿರುವ 3,000 ಕಾರ್ಮಿಕರನ್ನು ಮತ್ತು ಸುತ್ತಮುತ್ತಲಿನ 1,000ಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. 88 ಮಂದಿಯನ್ನು ಪಾರುಗೊಳಿಸಲಾಗಿದೆ ಎಂದು ತುರ್ತುಸ್ಥಿತಿ ವ್ಯವಸ್ಥಾಪನ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.