ಹಂಗಾಮಾ 2018ರ ಟಾಪ್ 10 ಕನ್ನಡ ಹಾಡು: ಜನ್ಯ ನಂಬರ್ ವನ್!
Team Udayavani, Mar 23, 2019, 7:20 AM IST
ಬೆಂಗಳೂರು: ಹಂಗಮಾ ಡಿಜಿಟಲ್ ಮೀಡಿಯಾ ಮಾಲೀಕತ್ವದ ಹಂಗಮಾ ಮ್ಯೂಸಿಕ್ ದೇಶದ ಪ್ರಮುಖ ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿದೆ. ಇಂದು ಅದರ ಸೌಂಡ್ ಆಫ್ ಫೇಮ್ ವರದಿಯನ್ನು ಬಿಡುಗಡೆ ಮಾಡಿದ್ದು, ಅದರ ಟ್ರೆಂಡ್ ಪ್ರಕಾರ ಕನ್ನಡದ ಜನಪ್ರಿಯ ಹಾಡುಗಳ ಪಟ್ಟಿಯನ್ನು ಪ್ರಕಟಿಸಿದೆ.
2018 ರಲ್ಲಿ ಕರ್ನಾಟಕವು ಸಂಗೀತ ಲೋಕಕ್ಕೆ 10% ಕೊಡುಗೆ ನೀಡಿದ್ದು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಬಳಕೆದಾರರು ಹಂಗಮಾ ಮ್ಯೂಸಿಕ್ ನಲ್ಲಿ 2017- 18 ರಲ್ಲಿ 3.2x ಹೆಚ್ಚು ಸಮಯವನ್ನು ಕಳೆದಿದ್ದಾರೆ. ಅರ್ಜುನ್ ಜನ್ಯಾ ಅವರು ಮೊದಲೆರಡು ಸ್ಥಾನದಲ್ಲಿರುವ ಏನಮ್ಮಿ ಏನಮ್ಮಿ (ಅಯೋಗ್ಯ) ಮತ್ತು ಚುಟು ಚುಟು (ರಾಂಬೊ 2) ಸೇರಿದಂತೆ 10 ಅತ್ಯಂತ ಪ್ರಸಿದ್ದ ಕನ್ನಡ ಹಾಡುಗಳ ಪೈಕಿ 9 ಹಾಡುಗಳ ಸಂಯೋಜನೆ ಮಾಡಿದ್ದಾರೆ.
ಹಂಗಾಮಾ ಡಿಜಿಟಲ್ ಸಿಇಒ ನೀರಾಜ್ ರಾಯ್:
ವರದಿಯ ಬಗ್ಗೆ ಮಾತನಾಡಿದ ಹಂಗಾಮಾ ಡಿಜಿಟಲ್ ಮೀಡಿಯಾದ ಸಂಸ್ಥಾಪಕ ಮತ್ತು ಸಿಇಒ ನೀರಾಜ್ ರಾಯ್, “ಕಳೆದ ಕೆಲವು ವರ್ಷಗಳಲ್ಲಿ ಸಂಗೀತದ ಹರಿವಿನಲ್ಲಿ ಕಂಡುಬಂದ ಬೆಳವಣಿಗೆಯಿಂದ ಸೃಜನಶೀಲ ಮನಸ್ಸುಗಳಿಗೆ, ಸಂಗೀತದೆಡೆ ತೆರೆದುಕೊಳ್ಳುವುದು ಸುಲಭವಾಗಿದೆ. ಇದು ಬಳಕೆದಾರರಿಗೆ ಅನಿಯಮಿತ ಸಂಗೀತವನ್ನು ಅನ್ವೇಷಿಸುವ ಪರಿಸರವನ್ನು ಸೃಷ್ಟಿಸಿದೆ. ಮುಂದಿನ ಕೆಲ ವರ್ಷಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್ ಸಂಗೀತವನ್ನು ಮೆಚ್ಚಿಕೊಳ್ಳಲಿದ್ದಾರೆ ಎಂದು ನಾವು ಖಚಿತವಾಗಿ ನಂಬುತ್ತೇವೆ” ಎಂದರು.
ಕನ್ನಡ ಸಂಗೀತ ಮತ್ತು ಕಲಾವಿದರಿಗೆ ಮೆಗಾ ವರ್ಷ
ಅಗ್ರ 10 ಹಾಡುಗಳ ಪಟ್ಟಿಯಲ್ಲಿರುವ 9 ಹಾಡುಗಳನ್ನು ನೀಡಿದ ಹೆಗ್ಗಳಿಕೆ ಅರ್ಜುನ್ ಜನ್ಯಾ ಅವರದ್ದು, ಹೀಗಾಗಿ ಅವರಿಗಿದು ಅದ್ಭುತ ವರ್ಷ. ಇದರಲ್ಲಿ ಏನಮ್ಮಿ ಏನಮ್ಮಿ (ಅಯೋಗ್ಯಾ) ವರ್ಷದ ಅತಿ ಹೆಚ್ಚು ಬಾರಿ ಕೇಳಲ್ಪಟ್ಟಿದೆ. ಕನ್ನಡ ಹಾಡು, ಚುಟು ಚುಟು (ರಾಂಬೊ 2), ಐ ಆಮ್ ವಿಲನ್ (ದಿ ವಿಲನ್) ಮತ್ತು ದಮ್ ಮಾರೊ ದಮ್ (ರಾಂಬೊ 2) ಕ್ರಮವಾಗಿ 2, 3 ಮತ್ತು 4 ನೇ ಸ್ಥಾನದಲ್ಲಿದೆ. ಚರಣರಾಜ್ ರವರು ಸಂಯೋಜಿಸಿದ ಬಾಲ್ಮಾ (ಟಗರು) ವರ್ಷದಲ್ಲಿ ಅತಿ ಹೆಚ್ಚು ಪ್ರಸಾರವಾದ ಹಾಡಿನ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವಿಲನ್ ಚಿತ್ರ ಅಗ್ರ 10ರ ಪಟ್ಟಿಗೆ 4 ಹಾಡುಗಳನ್ನು ನೀಡುವುದರೊಂದಿಗೆ ಸಂಗೀತದ ಯಶಸ್ಸನ್ನು ಸಾಬೀತು ಪಡಿಸಿದೆ. ಅದರ ನಂತರ ರಾಂಬೊ 2 ಮತ್ತು ಅಯೋಗ್ಯ ಚಿತ್ರದ ಎರಡು ಹಾಡುಗಳು ಜಾಗ ಪಡೆದಿವೆ.
ಬಾಲಿವುಡ್ ಸಂಗೀತದಲ್ಲಿ ರಿಮೇಕ್ ವರ್ಷ
ಬಾಲಿವುಡ್ ಸಂಗೀತದ ಬಳಕೆಗೆ ಶೇ. 25 ರಷ್ಟು ಕೊಡುಗೆ ನೀಡಿದ್ದು, 2018 ರ ವರ್ಷವನ್ನು ಇಯರ್ ಆಫ್ ದಿ ರಿಮೇಕ್ ಎಂದು ಕರೆಯಬಹುದು. ನೇಹಾ ಕಾಕ್ಕರ್, ದಿಲ್ಬಾರ್ (ಸತ್ಯಮೇವ್ ಜಯತೇ) ಹಾಡಿದ್ದು, 2018 ರ ಅಗ್ರ ಗೀತೆಯು 1999ರ ಸಾಂಪ್ರದಾಯಿಕ ಹಾಡಿನ ರೀಮೇಕ್ ಆಗಿದೆ. ಆಂಖ್ ಮಾರೆ (ಸಿಂಬಾ), ತೆರೆ ಬಿನ್ (ಸಿಂಬಾ), ದೇಖ್ತೆ ದೇಖ್ತೆ (ಬಟ್ಟಿ ಗುಲ್ ಮೀಟರ್ ಚಾಲು), ಉರ್ವಶಿ (ಯೋ ಯೋ ಹನಿ ಸಿಂಗ್), ಪ್ರಾಪರ್ ಪಟೋಲಾ (ನಮಸ್ತೆ ಇಂಗ್ಲೆಂಡ್), ಆಶಿಕ್ ಬನಯಾ ಆಪ್ನೆ (ಹೇಟ್ ಸ್ಟೋರಿ 4) ಮತ್ತು ದಿಲ್ ಚೋರಿ (ಸೊನು ಕೆ ಟಿತು ಕಿ ಸ್ವೀಟಿ) ಮೊದಲಾದವು ರಿಮೇಕ್ ಪಟ್ಟಿಯನ್ನು ಸೇರಿವೆ.
ಹಿಂದಿ ಚಾರ್ಟ್ ಗಳು ಹಾಗೂ ಡ್ಯಾನ್ಸ್ ಸಂಖ್ಯೆಗಳು
ಹಂಗಮಾ ಮ್ಯೂಸಿಕ್ ಸೌಂಡ್ ಆಫ್ ಫೇಮ್ ವರದಿ ಪ್ರಕಾರ 2018 ರ ಟಾಪ್ 10 ಹಿಂದಿ ಹಾಡುಗಳ ಪಟ್ಟಿ 5 ಅಗಾಧವಾದ ನೃತ್ಯವನ್ನು ಒಳಗೊಂಡಿದೆ. ಇವುಗಳಲ್ಲಿ ವರ್ಷದ ಅಗ್ರ ಗೀತೆ, ದಿಲ್ಬಾರ್ (ಸತ್ಯಮೇವ ಜಯತೇ), ಬೊಮ್ ಡಿಗ್ಗಿ ಡಿಗ್ಗಿ (ಬಟ್ಟಿ ಗುಲ್ ಮೀಟರ್ ಚಾಲು), ಕಮರಿಯಾ (ಸ್ತ್ರೀ), ತಾರೀಫಾನ್ (ವೀರೆ ಡಿ ವೆಡ್ಡಿಂಗ್) ಮತ್ತು ಅಖ್ ಲಡ್ ಜಾವೆ (ಲವ್ ಯಾತ್ರಿ) ಸೇರಿವೆ.
ಅಂತರಾಷ್ಟ್ರೀಯ ಸಂಗೀತ ಮತ್ತು ಹಿಪ್ ಹಾಪ್ ಕಡೆಗೆ ಹೆಚ್ಚುತ್ತಿರುವ ಒಲವು ಅಂತರಾಷ್ಟ್ರೀಯ ವಿಷಯದ ಲಭ್ಯತೆಯಿಂದಾಗಿ ಅನ್ಯ ಭಾಷಿಗರ ಸಂಗೀತ ಲೋಕವನ್ನು ಅನ್ವೇಷಿಸುವುದು ಸುಲಭವಾಗುತ್ತದೆ. ಹಿಪ್ ಹಾಪ್ ಜ್ವರವು ಇಂಗ್ಲಿಷ್ ಸಂಗೀತದ ಕೇಳುಗರನ್ನು 2017ರ ಬಳಿಕ ರಿಂದ ದ್ವಿಗುಣಗೊಂಡಿದೆ. ಮರೂನ್ 5 ರ ಗರ್ಲ್ಸ್ ಲೈಕ್ ಯು 2018 ರ ಅತ್ಯುತ್ತಮ ಇಂಗ್ಲಿಷ್ ಹಾಡಾಗಿ ಹೊರಹೊಮ್ಮಿದೆ; ಡಿಜೆ ಸ್ನೇಕ್ ನ ಟಾಕಿ ಟಕಿ ಮತ್ತು ಡ್ರೇಕ್ಸ್ ಇನ್ ಮೈ ಫೀಲಿಂಗ್ಸ್ ಕ್ರಮವಾಗಿ ಎರಡನೆಯ ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ.
ಹಂಗಮಾ ಮ್ಯೂಸಿಕ್ ಸೌಂಡ್ ಆಫ್ ಫೇಮ್ ಎಂಬುದು ಹಂಗಮಾ ಮ್ಯೂಸಿಕ್ ನ ಟ್ರೆಂಡ್ ಮತ್ತು ಬಳಕೆ ಮಾದರಿಗಳನ್ನು ತೋರಿಸುತ್ತದೆ ಇದು ದೇಶದಲ್ಲೇ ಅತಿ ದೊಡ್ಡ ಸಂಗೀತ ಪ್ರಸಾರಗೊಳ್ಳುವ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿದೆ. ಇದು ಹೊಸ ಪ್ರಕಾರಗಳು, ಜನಪ್ರಿಯ ವಿಷಯ ಮತ್ತು ಉದಯೋನ್ಮುಖ ಕಲಾವಿದರಿಗೆ ಅವಕಾಶಗಳನ್ನು ಒದಗಿಸುತ್ತದೆ.
ಮುಖ್ಯಾಂಶಗಳು:
•2017 ಕ್ಕೆ ಹೋಲಿಸಿದರೆ 2018ರಲ್ಲಿ ಕರ್ನಾಟಕದ ಸಂಗೀತ ಶ್ರೋತೃಗಳ ಸಂಖ್ಯೆಯಲ್ಲಿ 3.2x ಹೆಚ್ಚಳವಾಗಿದೆ.
•ವರ್ಷದ 10 ಅಗ್ರಗಣ್ಯ ಕನ್ನಡ ಹಾಡುಗಳ ಪಟ್ಟಿಯಲ್ಲಿ 9 ಹಾಡುಗಳ ಸಂಯೋಜಕ ಅರ್ಜುನ್ ಜನ್ಯ ಎಂಬುದು ವಿಶೇಷ.
•ಅಯೋಗ್ಯ ಚಿತ್ರದ ಏನಮ್ಮಿ ಏನಮ್ಮಿಯು ವರ್ಷದ ಪ್ರಸಿದ್ಧ ಕನ್ನಡ ಹಾಡಾಗಿ ಹೊರಹೊಮ್ಮಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.