ಹಂಚಿ ಉಣ್ಣುವುದು ಶರಣ ಸಂಸ್ಕೃತಿ


Team Udayavani, Mar 23, 2019, 10:45 AM IST

23-march-16.jpg

ಕುಷ್ಟಗಿ: ಕರೆದುಕೊಂಡು, ಹಂಚಿಕೊಂಡು ಉಣ್ಣುವುದರಿಂದ ಆರೋಗ್ಯ ಪ್ರಾಪ್ತಿಯಾಗಲಿದ್ದು, ಕದ ಹಾಕಿಕೊಂಡು ಉಣ್ಣುವುದರಿಂದ ಆರೋಗ್ಯ ದೂರವಾಗಲಿದೆ. ತಳವಗೇರಾದಲ್ಲಿ ಆಚರಿಸಿಕೊಂಡು ಬಂದಿರುವ ಈ ಬೆಳದಿಂಗಳ ಬುತ್ತಿ ಜಾತ್ರೆಯ ಸಂಪ್ರದಾಯ ಈಗಾಗಲೇ ಕರೆದುಕೊಂಡು ಉಣ್ಣುವ ಸಂಸ್ಕೃತಿ ಶರಣ ಸಂಸ್ಕೃತಿ ಎಂಬುದು ನಿರೂಪಿಸಿದೆ ಎಂದು ಬಾಳೆಹೊಸೂರು ದಿಂಗಾಲೇಶ್ವರಮಠದ ಶ್ರೀ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಇಲ್ಲಿನ ಆದರ್ಶ ಮಹಾವಿದ್ಯಾಲಯ ಮೈದಾನದಲ್ಲಿ ನಡೆದ ಭಾವೈಕ್ಯತೆ ಬೆಸೆಯುವ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಅವರು ಆಶೀರ್ವಚನ ನೀಡಿದರು. ದೇಹದ ತೃಪ್ತಿಗಾಗಿ ವಿವಿಧ ತರಹದ ಅಡುಗೆಗಳಿರಬಹುದು, ಆದರೆ ಮನಸ್ಸಿನ ತೃಪ್ತಿಗಾಗಿ ಈ ರೀತಿಯಾಗಿ ಊಟ ಮಾಡುವವರು. ಮನೆಯಲ್ಲಿ ವಿವಿಧ ತರಹದ ಅಡುಗೆ ಮಾಡಿ ತಾವು ಮಾಡಿದ್ದನ್ನು ಕದ ಹಾಕಿಕೊಂಡು ಕೀಳು ಮಟ್ಟದ ಭಾವನೆಯಲ್ಲಿ ಊಟ ಮಾಡುವುದು ದೇಹದ ತೃಪ್ತಿಯಾಗಿದೆ. ಇದರಿಂದ ದೇಹ ಬಲಿಷ್ಠವಾಗುತ್ತಿದೆ, ಮನಸ್ಸು ದುರ್ಬಲವಾಗುತ್ತಿದೆ. ಅದೇ ರೀತಿ ಕದ ಹಾಕಿಕೊಳ್ಳದೇ ಕರೆದುಕೊಂಡು, ಹಂಚಿಕೊಂಡು, ಮಾತನಾಡಿಕೊಂಡು ಉಣ್ಣುವುದು ಮನಸ್ಸಿನ ತೃಪ್ತಿಗಾಗಿ ಎಂದರು.

ಅನ್ನ, ನೀರು, ಗಾಳಿ ಜಗತ್ತಿನಲ್ಲಿರುವ ಮೂರೇ ಮೂರು ಒಳ್ಳೆಯ ರತ್ನಗಳು. ಯಾವುದೇ ಕಾರಣಕ್ಕೂ ತಿನ್ನುವ ಅನ್ನ, ಕುಡಿಯುವ ನೀರು, ಉಸಿರಾಡುವ ಗಾಳಿಯನ್ನು ಕೆಡಿಸಬಾರದು. ಯಾವುದೇ ಕಾರಣಕ್ಕೂ ತಟ್ಟೆಯಲ್ಲಿರುವ ಒಂದು ಅಗುಳು ಕೆಡಿಸದಂತೆ ಸಂಕಲ್ಪಿಸಬೇಕಿದೆ. ಅನ್ನದ ಅಗಳು ಭೂಮಿಯಲ್ಲಿ ಬೆಳೆಯಲು ಆರು ತಿಂಗಳು ಕಷ್ಟಪಡಬೇಕು. ಅದೇ ಬೆಳೆದ ಅನ್ನವಾದ ಅಗಳು ಕೆಡಿಸಲು 6 ಸೆಕೆಂಡ್‌ ಸಾಕು. ಹೀಗಾಗಿ ಯಾವುದೇ ಕಾರಣಕ್ಕೂ ತಿನ್ನುವ ಅನ್ನವನ್ನು ಕೆಡಿಸುವುದಿಲ್ಲ ಎನ್ನುವ ಸಂಕಲ್ಪ ಇಂದು ಮಾಡಬೇಕಿದೆ. ತಿನ್ನುವ ಅನ್ನ ಸಾಕಷ್ಟಿದ್ದರೂ ಚೆಲ್ಲುವುದೇ ಬಹಳವಾಗುತ್ತಿದೆ.
ದೇಶಕ್ಕೆ ಬರಗಾಲ ಅನ್ನ ಕೊರತೆಯಿಂದ ಅಲ್ಲ ಚೆಲ್ಲುವುದರಿಂದ ಎಂದು ದಿಂಗಾಲೇಶ್ವರ ಶ್ರೀಗಳ ಕಳವಳ ವ್ಯಕ್ತಪಡಿಸಿದರು.

ಮೂವತ್ತನೇ ವರ್ಷಕ್ಕೆ 3 ಹೊತ್ತು, 60ನೇ ವರ್ಷಕ್ಕೆ 2 ಹೊತ್ತು, 60ರ ನಂತರ ಒಂದು ಹೊತ್ತು, 90ರ ನಂತರ ಹಣ್ಣಿನ ರಸ ಸೇವಿಸಬೇಕೆಂದು ಆರೋಗ್ಯ ಸೂತ್ರ ಹೇಳುತ್ತದೆ ಎಂದರು.

ಇದೇ ವೇಳೆ ಶರಣಬಸವೇಶ್ವರ ಜಾತ್ರೋತ್ಸವ ಸಮಿತಿಯಿಂದ ದಿಂಗಾಲೇಶ್ವರ ಶ್ರೀಗಳನ್ನು ಸನ್ಮಾನಿಸಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಸದಸ್ಯ ಕೆ. ಮಹೇಶ ಇತರರು ಭಾಗವಹಿಸಿದ್ದರು.

ಬೆಳದಿಂಗಳ ಬೆಳಕಲ್ಲಿ ಭೋಜನ
ಈ ಬುತ್ತಿ ಜಾತ್ರೆಯಲ್ಲಿ ತಳವಗೇರಾ, ತೋಪಲಕಟ್ಟಿಯ ಭಕ್ತರು ಬುತ್ತಿಗಂಟಿನೊಂದಿಗೆ ಮೆರವಣಿಗೆಯಲ್ಲಿ ಶರಣಬಸವೇಶ್ವರ ಸನ್ನಿಧಿ ಗೆ ಆಗಮಿಸಿದರು. ಅಲ್ಲಿಂದ ಬುತ್ತಿ ಜಾತ್ರೆ ನಡೆಯುವ ಬಯಲು ಸ್ಥಳದಲ್ಲಿ ಬೆಳದಿಂಗಳ ಬೆಳಕಿನಲ್ಲಿ ಎಲ್ಲರೂ ಸೇರಿ ಶರಣಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಜಂಗಮ ಗಣಾರಾಧನೆ ನಂತರ ತಾವು ತಂದಿರುವ ಬುತ್ತಿಯನ್ನು ಸವಿದರು. ಊಟ ಮಾಡುವಾಗಿನ ಮನಸ್ಸಿನ ಪರಿಣಾಮದಂತೆ ರಕ್ತ ಉತ್ಪತ್ತಿಯಾಗುತ್ತಿದೆ. ಪ್ರತಿಯೊಬ್ಬರೂ ಊಟವನ್ನು ಸಮಾಧಾನದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ,
ದಿಂಗಾಲೇಶ್ವರಮಠ ಬಾಲೆಹೊಸೂರು

ಊಟ ಮಾಡುವಾಗಿನ ಮನಸ್ಸಿನ ಪರಿಣಾಮದಂತೆ ರಕ್ತ ಉತ್ಪತ್ತಿಯಾಗುತ್ತಿದೆ. ಪ್ರತಿಯೊಬ್ಬರೂ ಊಟವನ್ನು ಸಮಾಧಾನದಿಂದ ಮಾಡುವುದನ್ನು ರೂಢಿಸಿಕೊಳ್ಳಬೇಕು.
 ಶ್ರೀ ದಿಂಗಾಲೇಶ್ವರ ಸ್ವಾಮೀಜಿ,
 ದಿಂಗಾಲೇಶ್ವರಮಠ ಬಾಲೆಹೊಸೂರು

ಟಾಪ್ ನ್ಯೂಸ್

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

accident

Vitla: ರಿಕ್ಷಾ- ಬೈಕ್‌ ಢಿಕ್ಕಿ; ಮೂವರಿಗೆ ಗಾಯ

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.