ವಿವಾದದ ಮೂಲಕವೇ ಸುದ್ದಿಯಾಗುತ್ತಿರುವ ಮಳೆ ಹುಡುಗಿ


Team Udayavani, Mar 23, 2019, 12:01 PM IST

c-2.jpg

ಕೆಲವು ನಾಯಕ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಅನಗತ್ಯ ವಿಷಯಗಳು, ವಿವಾದಗಳಿಂದಲೇ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೀಗೆ ಸಿನಿಮಾಗಳಿಗಿಂತ ಹೊರತಾಗಿ ಬೇರೆ ವಿಷಯಗಳಿಗೇ ಸುದ್ದಿಯಾಗುವ ನಾಯಕಿಯರ ಸಂಖ್ಯೆಗೇನೂ ಕಡಿಮೆಯಿಲ್ಲ. ಹೀಗೆ ವಿವಾದಗಳಿಂದಲೇ ಸುದ್ದಿಯಾಗುವ ನಾಯಕಿಯರ ಲಿಸ್ಟ್‌ಗೆ ಈಗ ಮಳೆ ಹುಡುಗಿ ಪೂಜಾ ಗಾಂಧಿಯ ಹೆಸರೂ ಸೇರಿಕೊಂಡಿದೆ.

ಮುಂಗಾರು ಮಳೆ  ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪೂಜಾಗಾಂಧಿ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆದ ಹುಡುಗಿ. ಮುಂಗಾರು ಮಳೆ  ಚಿತ್ರದ ಬಳಿಕ ಒಂದರ ಹಿಂದೊಂದು ಚಿತ್ರಗಳ ಆಫ‌ರ್ ಪೂಜಾ ಗಾಂಧಿಯನ್ನು ಹುಡುಕಿಕೊಂಡು ಬಂದರೂ, ಯಾವ ಚಿತ್ರಗಳೂ ಪೂಜಾಗೆ ಹೇಳಿಕೊಳ್ಳುವಂಥ ಯಶಸ್ಸು ತಂದುಕೊಡಲಿಲ್ಲ. ಇದರ ನಡುವೆಯೇ ಪೂಜಾ ಗಾಂಧಿ ಹೆಸರು ಚಿತ್ರರಂಗದಲ್ಲಿ ಇಬ್ಬರು-ಮೂವರ ಜೊತೆ ತಳುಕು ಹಾಕಿಕೊಂಡಿತ್ತು. ಪೂಜಾ ಮದುವೆಯಾಗುತ್ತಾರೆ ಎಂಬ ಸುದ್ದಿ ಕೂಡ ಗಾಂಧಿನಗರದಲ್ಲಿ ಜೋರಾಗಿಯೇ ಹರಿದಾಡಿತು. ಇದಕ್ಕೆ ಪುಷ್ಟಿ ನೀಡುವಂತೆ ಪೂಜಾ ಗಾಂಧಿ, ಆನಂದ್‌ ಎಂಬುವವರ ಜೊತೆ ಎಂಗೇಜ್‌ಮೆಂಟ್‌ ಕೂಡ ಮಾಡಿಕೊಂಡಿದ್ದರು. ಆನಂತರ ಅದೇನಾಯಿತೋ, ಏನೋ.., ಪೂಜಾ ಮತ್ತು ಆನಂದ್‌ ಸಂಬಂಧದಲ್ಲಿ ಬಿರುಕು ಮೂಡಿತು. ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ನಡೆದಿದ್ದ ಎಂಗೇಜ್‌ಮೆಂಟ್‌ ಕೂಡ ರದ್ದಾಯಿತು.

ಅದಾದ ಬಳಿಕ ರಾಜಕೀಯ ಅಂತ ಬ್ಯುಸಿಯಾದ ಪೂಜಾ ಮೊದಲು ಜೆಡಿಎಸ್‌, ನಂತರ ಕೆಜೆಪಿ, ಬಳಿಕ ಬಿಎಸ್‌ಆರ್‌ ಕಾಂಗ್ರೆಸ್‌- ಹೀಗೆ ಎರಡೇ ವರ್ಷದಲ್ಲಿ ಮೂರ್‍ನಾಲ್ಕು ರಾಜಕೀಯ ಪಕ್ಷಗಳ ಕದ ತಟ್ಟಿದರು. ಅಲ್ಲದೆ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿ ಸೋಲುಂಡರು. ರಾಜಕೀಯ ಯಾವಾಗ ಕೈ ಹಿಡಿಯುವುದು ಕಷ್ಟ ಎಂದು ಗೊತ್ತಾಯಿತೋ, ಮತ್ತೆ ಚಿತ್ರರಂಗದತ್ತ ಮುಖ ಮಾಡಿದರು. ಆದರೆ, ಚಿತ್ರರಂಗದಲ್ಲೂ ಪೂಜಾಗೆ ಹೇಳಿಕೊಳ್ಳುವಂಥ ಅವಕಾಶಗಳು ಸಿಗಲಿಲ್ಲ. ಬಳಿಕ ತಾನೇ ಒಂದಷ್ಟು ಚಿತ್ರಗಳನ್ನು ನಿರ್ಮಿಸಿ, ನಟಿಸುವುದಾಗಿ ಘೋಷಿಸಿಕೊಂಡರು. ಏಕಕಾಲಕ್ಕೆ ಅದ್ದೂರಿಯಾಗಿ ಐದಾರು ಚಿತ್ರಗಳು ಸೆಟ್ಟೇರಿದ್ದೂ ಆಯಿತು. ಆ ನಂತರ ಆ ಚಿತ್ರಗಳು ಏನಾದವು, ತೆರೆಗೆ ಬರುತ್ತವೆಯಾ, ಇಲ್ಲವಾ? ಎಂಬ ಯಾವ ಮಾಹಿತಿಗಳೂ ಇಲ್ಲವಾಯಿತು.

ಇಷ್ಟೆಲ್ಲ  ನಡೆದಿರುವಾಗಲೇ, ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ದಿ ಲಲಿತ್‌ ಅಶೋಕ್‌ ಹೊಟೇಲ್‌ನಲ್ಲಿ ರೂಮ್‌ ಬಾಡಿಗೆಗೆ ಪಡೆದಿದ್ದ ಪೂಜಾ, ಅದರ ಬಿಲ್‌ ಪಾವತಿಸದೆ ತಲೆ ಮರೆಸಿಕೊಂಡಿದ್ದಾರೆ ಎಂದು ಹೊಟೇಲ್‌ ವ್ಯವಸ್ಥಾಪಕರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು.     ಈ ಸುದ್ದಿ ಹೊರಬೀಳುತ್ತಿದ್ದಂತೆ, ಬಾಕಿ  ಇರುವ ಹೊಟೇಲ್‌ ಬಿಲ್‌ ಪಾವತಿಸಿ ಪೂಜಾ ಸಂಧಾನಕ್ಕೆ ಮುಂದಾದರೂ, ಅಷ್ಟರಲ್ಲಾಗಲೇ ಈ ಪ್ರಕರಣದಲ್ಲಿ ಪೂಜಾ ಗಾಂಧಿ ಹೆಸರಿನ ಜೊತೆ ರಾಜಕಾರಣಿಯೊಬ್ಬರು ಮತ್ತು ಹಿರಿಯ ಐಎಎಸ್‌ ಅಧಿಕಾರಿಯೊಬ್ಬರ ಹೆಸರು ಕೂಡ ತಳುಕು ಹಾಕಿಕೊಂಡಿತ್ತು.

ಆದರೆ, ಈ ಎಲ್ಲ ವಿವಾದಗಳನ್ನು ಅಲ್ಲಗಳೆಯುವ ಪೂಜಾ ಗಾಂಧಿ, ಇದು ತನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರ ಕೃತ್ಯ ಎನ್ನುತ್ತಾರೆ. ಒಟ್ಟಾರೆ ತನ್ನ ಸಿನಿಮಾಗಳಿಗಿಂತ, ವಿವಾದಗಳಿಗೆ ಸುದ್ದಿಯಾಗುತ್ತಿರುವ ಪೂಜಾ ಗಾಂಧಿ ಮತ್ತೆ ತನ್ನ ಸಿನಿಮಾಗಳ ಮೂಲಕ ಸುದ್ದಿಗೆ ಬರುತ್ತಾರಾ? ಅಥವಾ ಇಂತಹ ವಿವಾದಗಳ ಸುಳಿಯಲ್ಲಿ ಸಿಕ್ಕಿ ಕಳೆದು ಹೋಗುತ್ತಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. 

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.