ಬೇಸಗೆ ರಜೆಗೆ ಕದ್ರಿ ಸ್ಕೇಟಿಂಗ್ ರಿಂಕ್ ಸಿದ್ಧ
ಪಾಳುಬಿದಿದ್ಧ ಕ್ರೀಡಾಂಗಣದ ಕಾಯಕಲ್ಪಕ್ಕೆ ಯೋಜನೆ
Team Udayavani, Mar 24, 2019, 11:04 AM IST
ಕದ್ರಿ ಸ್ಕೇಟಿಂಗ್ ರಿಂಕ್
ಮಹಾನಗರ: ಸುಮಾರು ಏಳು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕದ್ರಿಯ ಸ್ಕೇಟಿಂಗ್ ರಿಂಕ್ ಕ್ರೀಡಾಂಗಣಕ್ಕೆ ಕೊನೆಗೂ ಕಾಯಕಲ್ಪ ನೀಡಲು ತೋಟಗಾರಿಕೆ ಇಲಾಖೆ ಈಗ ಮುಂದಾಗಿದೆ.
ಸ್ಕೇಟಿಂಗ್‌ನಂಥ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕದ್ರಿ ಉದ್ಯಾನವನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ರೋಲರ್ ಸ್ಕೇಟಿಂಗ್ ರಿಂಕ್ ಅನ್ನು ನಿರ್ಮಿಸಲಾಗಿತ್ತು. ಆದರೆ ಒಂದು ವರ್ಷದಿಂದ ನಾನಾ ಕಾರಣಗಳಿಂದಾಗಿ ಬಳಕೆಯಾಗದೆ ಪಾಳುಬಿದ್ದಿತ್ತು. ಸದ್ಯದಲ್ಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಸಿಗಲಿದ್ದು, ಅಲ್ಲಿನ ಅವ್ಯವಸ್ಥೆ ಸರಿಪಡಿಸಿ ಆಸಕ್ತರ ಉಪಯೋಗಕ್ಕೆ ನೀಡುವಂತೆ ಸಾರ್ವಜನಿಕರು ಸಂಬಂಧ ಪಟ್ಟ ತೋಟಗಾರಿಕೆ ಇಲಾಖೆಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನ ವಾಗಿರಲಿಲ್ಲ.
ಈಗ ಎಚ್ಚೆತ್ತುಕೊಂಡಿರುವ ಸಂಬಂಧ ಪಟ್ಟ ಇಲಾಖೆ ಸ್ಕೇಟಿಂಗ್ ರಿಂಕ್ ಅನ್ನು ಖಾಸಗಿಯವರಿಗೆ ನೀಡುವುದಕ್ಕೆ ಟೆಂಡರ್ ಕರೆಯಲಾಗಿದ್ದು, ಹೈ-ಫ್ಲೈಯರ್ ಸ್ಕೇಟಿಂಗ್ ತರಬೇತಿ ಸಂಸ್ಥೆ ಈ ಟೆಂಡರ್ ಪಡೆದುಕೊಂಡಿದೆ. ಶೀಘ್ರ ಕ್ರೀಡಾಸಕ್ತರ ಉಪಯೋಗಕ್ಕೆ ಲಭ್ಯವಾಗಲಿದೆ.
ನಗರದಲ್ಲಿ ಸ್ಕೇಟಿಂಗ್ ತರಬೇತಿಗೆ ಸುಸಜ್ಜಿತ ರಿಂಕ್ ಆವಶ್ಯಕತೆ ಇದೆ ಎಂದು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್‌ನ ಮಹೇಶ್ ಕುಮಾರ್ ನೇತೃತ್ವದಲ್ಲಿ 2007ರಲ್ಲಿ ತೋಟಗಾರಿಕಾ ಇಲಾಖೆಗೆ ಮನವಿ ಮಾಡಲಾಗಿತ್ತು. ಜಾಗ ಗುರುತಿಸಿ 2008ರ ಬಳಿಕ ಕಾಮಗಾರಿ ಆರಂಭವಾಗಿ, ಕುಂಟುತ್ತಾ ಸಾಗಿದ ಕಾಮಗಾರಿ 2011ರಲ್ಲಿ ಪೂರ್ಣಗೊಂಡಿತ್ತು. ಮೆಸ್ಕಾಂ ಸಹಾಯದಿಂದ 12 ಲಕ್ಷ ರೂ. ಮತ್ತು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ರಿಂಕ್ ನಿರ್ಮಾಣ ಮಾಡಲಾಗಿತ್ತು. ಈ ಕ್ರೀಡಾಂಗಣದಲ್ಲಿ ಈಗಾಗಲೇ ಜಿಲ್ಲಾ ಮಟ್ಟದ, ಶಾಲಾ ವಲಯದ ಅನೇಕ ಸ್ಕೇಟಿಂಗ್ ಪಂದ್ಯಾಟಗಳು ನಡೆದಿವೆ.
ಕ್ರೀಡಾಂಗಣದಲ್ಲಿ ಸುಂದರ ಉದ್ಯಾನವನ
ಕದ್ರಿ ಸ್ಕೇಟಿಂಗ್ ರಿಂಕ್ ಒಟ್ಟಾರೆ 4 ಎಕ್ರೆ ಪ್ರದೇಶದಲ್ಲಿದೆ. ಒಂದು ಎಕ್ರೆ ಪ್ರದೇಶ ಸ್ಕೇಟಿಂಗ್ ರಿಂಕ್ ಹೊಂದಿದೆ. ಒಂದೆಡೆ ಸ್ಕೇಟಿಂಗ್ ಅಭ್ಯಾಸಕ್ಕೆ ಕ್ರೀಡಾಂಗಣ ಬಳಕೆಯಾದರೆ, ಇದಕ್ಕೆ ಹೊಂದಿಕೊಂಡಂತೆ ಮುಖ್ಯದ್ವಾರದ ಬಳಿ ಇರುವ ಪ್ರದೇಶದಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸುತ್ತಿದೆ.
ಹಿರಿಯರಿಗೆ ಸಹಿತ ಸಾರ್ವಜನಿಕರಿಗೆ ನಡೆದಾಡಲು ವಾಕಿಂಗ್ ಟ್ರಾಕ್ ಇರಲಿದ್ದು, ಪಾರ್ಕ್‌ನಲ್ಲಿ ಸುಂದರ ಹೂ-ಗಿಡಗಳು ಕೂಡ ಇರಲಿವೆ. ಪ್ರವಾಸಿಗರನ್ನು ಆಕರ್ಷಿಸಲೆಂದು ತೋಟಗಾರಿಕಾ ಇಲಾಖೆ ಈ ನೂತನ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಕದ್ರಿ ಪಾರ್ಕ್‌ನಲ್ಲಿ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಜಾಗವಿದ್ದು, ಅದೇ ರೀತಿಯ ಪ್ಲೇ ಗ್ರೌಂಡ್ ಕದ್ರಿ ಸ್ಕೇಟಿಂಗ್ ರಿಂಗ್ ಇರುವ ಪ್ರದೇಶದಲ್ಲಿಯೂ ನಿರ್ಮಾಣವಾಗಲಿದೆ.
ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೆ ಆಟವಾಡಲು ಉಪಯೋಗ ವಾದಂತಾಗಿದೆ. ಈ ಎಲ್ಲ ಕಾಮಗಾರಿಗಳು ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳಲಿವೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.
ಒಂದು ವರ್ಷದ ಟೆಂಡರ್
ಹೈ ಫ್ಲೈಯರ್ ಸ್ಕೇಟಿಂಗ್ ತರಬೇತಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಮೂರು ವರ್ಷಗಳ ಅವಧಿಗೆ ಸ್ಕೇಟಿಂಗ್ ರಿಂಕ್ ಟೆಂಡರ್ ನೀಡಬೇಕೆಂದು ತೋಟಗಾರಿಕಾ ಇಲಾಖೆಗೆ ನಾವು ಮನವಿ ಮಾಡಿದ್ದೆವು. ಆದರೆ, ಒಂದು ವರ್ಷಕ್ಕೆ ಟೆಂಡರ್ ನೀಡಲಾಗಿದೆ. ನಾವು ತಿಂಗಳಿಗೆ 9,500 ರೂ. ತೋಟಗಾರಿಕಾ ಇಲಾಖೆಗೆ
ನೀಡಬೇಕಿದೆ. ಅಲ್ಲದೆ, ಹೆಚ್ಚುವರಿಯಾಗಿ ಕ್ರೀಡಾಂಗಣದ ನಿರ್ವಹಣೆ ನಾವೇ ಮಾಡಬೇಕಿದೆ ಎನ್ನುತ್ತಾರೆ.
ಟೆಂಡರ್ ಪ್ರಕ್ರಿಯೆ ಪೂರ್ಣ
ಕದ್ರಿ ಬಳಿ ಇರುವ ಸ್ಕೇಟಿಂಗ್ ಕ್ರೀಡಾಂಗಣವನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಬೇಸಗೆ ರಜೆಯಲ್ಲಿ ವಿದ್ಯಾರ್ಥಿಗಳಿಗೆ ಈ ಕ್ರೀಡಾಂಗಣ ಲಭ್ಯವಾಗಲಿದೆ. ಕ್ರೀಡಾಂಗಣದ ಒಂದಷ್ಟು ಭಾಗವು ಉದ್ಯಾನವನಕ್ಕೆ ಮೀಸಲಿಡಲಾಗಿದೆ.
- ಜಾನಕಿ, ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕಿ
ಎಪ್ರಿಲ್‌ನಿಂದ ಲಭ್ಯ
ಕದ್ರಿ ಸ್ಕೇಟಿಂಗ್ ರಿಂಕ್ ವರ್ಷದಿಂದ ಪಾಳು ಬಿದ್ದಿತ್ತು. ಈಗ ಟೆಂಡರ್ ಕರೆದಿದ್ದು, ಎಪ್ರಿಲ್ ಮೊದಲ ವಾರದಿಂದ ಕ್ರೀಡಾಪಟುಗಳಿಗೆ ಲಭ್ಯವಾಗಲಿದೆ. ಮೊದಲ ಒಂದು ತಿಂಗಳ ಕಾಲ ಬೇಸಗೆ ಶಿಬಿರ ನಡೆಯಲಿದೆ.
– ಸಂತೋಷ್ ಶೆಟ್ಟಿ,
ಹೈ ಫ್ಲೈಯರ್ ಸ್ಕೇಟಿಂಗ್
ತರಬೇತಿ ಸಂಸ್ಥೆ ಕಾರ್ಯದರ್ಶಿ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.