ಐಪಿಎಲ್ ಟಿ-20 ಪಂದ್ಯ; ಮೆಟ್ರೋ ಹೆಚ್ಚುವರಿ ಸೇವೆ
Team Udayavani, Mar 24, 2019, 12:37 PM IST
ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28 ರಿಂದ ಮೇ 04 ರವರೆಗೂ ನಡುಲಿರುವ ವಿವಿಧ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯ ಹಿನ್ನೆಲೆ, ಪಂದ್ಯ ವೀಕ್ಷಣೆಗೆ ಬರುವವರ ಅನುಕೂಲಕ್ಕಾಗಿ “ನಮ್ಮ ಮೆಟ್ರೋ’ ಸೇವೆಯನ್ನು ಮಧ್ಯರಾತ್ರಿ 12.30ರ ವರೆಗೆ ವಿಸ್ತರಿಸಲಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.28, ಏಪ್ರಿಲ್ 5, 21,24, 30 ಹಾಗೂ ಮೇ 4 ರಂದು ಐಪಿಎಲ್ ಪಂದ್ಯಾವಳಿಗಳು ನಿಗದಿಗೊಂಡಿವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ತನ್ನ ವಾಣಿಜ್ಯ ಸಂಚಾರ ಸೇವೆಯನ್ನು ವಿಸ್ತರಿಸಿದ್ದು, ಆ ದಿನಗಳಲ್ಲಿ ರಾತ್ರಿ 12.30ಕ್ಕೆ ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ಯಲಚೇನಹಳ್ಳಿ ಮತ್ತು ನಾಗಸಂದ್ರದಿಂದ ಮೆಜೆಸ್ಟಿಕ್ ಕಡೆ ರೈಲು ಹೊರಡಲಿದೆ.
ಕೊನೆದಿನ ಸೇವೆಯು ಕೆಂಪೇಗೌಡ ನಿಲ್ದಾಣದಿಂದ ಎಲ್ಲ ನಾಲ್ಕೂ ದಿಕ್ಕುಗಳಿಗೂ ಮಧ್ಯರಾತ್ರಿ 1 ಗಂಟೆ ವರೆಗೆ ಸಿಗಲಿದೆ. ಪಂದ್ಯ ಮುಗಿದ ನಂತರ ಪ್ರಯಾಣಿಕರು ಟೋಕನ್‌ಗಾಗಿ ಕಾಯದಿರಲು “ರಿಟರ್ನ್ಜರ್ನಿ ಪೇಪರ್’ ಟಿಕೆಟ್ ಪರಿಚಯಿಸಲಾಗಿದೆ. ಈ ಟಿಕೆಟ್‌ಗಳನ್ನು ಪ್ರಯಾಣಿಕರು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರವರೆಗೆ ಯಾವುದೇ ಮೆಟ್ರೋ ನಿಲ್ದಾಣಗಳಿಂದ ಖರೀದಿಸಬಹುದು.
ಈ ಪೇಪರ್ ಟಿಕೆಟ್‌ಗಳು ಪಂದ್ಯಾವಳಿ ದಿನದ ಕೊನೆಯ ಮೆಟ್ರೋ ರೈಲು ಸೇವೆವರೆಗೆ ಮಾತ್ರ ಅನ್ವಯ ಆಗಲಿದೆ. ಪಂದ್ಯದ ದಿನದಂದು ಕಬ್ಬನ್ ಪಾರ್ಕ್ ಮೆಟ್ರೋ ರೈಲು ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ರಾತ್ರಿ 10 ಗಂಟೆ ನಂತರ ಪ್ರಯಾಣ ದರ 50 ರೂ. ಇರಲಿದೆ.
ಈ ದಿನಗಳಲ್ಲಿ ರಾತ್ರಿ 10ರ ನಂತರ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಸಾಮಾನ್ಯ ಟೋಕನ್ ಮಾರಾಟವಿರುವುದಿಲ್ಲ. ಇಲ್ಲಿನಿಂದ ಪ್ರಯಾಣಿಸುವಾಗ ಪೇಪರ್ ಟಿಕೆಟ್ ಮಾತ್ರ ಉಪಯೋಗಿಸಬೇಕು. ಇನ್ನು ಏ.7ರಂದು ಸಂಜೆ 4 ಗಂಟೆಗೆ ಪಂದ್ಯವಿರುವುದರಿಂದ ಅಂದು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಬೆಳಗ್ಗೆ 11 ಮಧ್ಯಾಹ್ನ 3 ಗಂಟೆವರೆಗೆ ಪೇಪರ್ ಟಿಕೆಟ್ ಲಭ್ಯವಿರುತ್ತವೆ. ಉಳಿದಂತೆ ಟೋಕನ್, ಸ್ಪಾರ್ಟ್‌ಕಾರ್ಡ್ ಉಪಯೋಗ ಎಂದಿನಂತೆ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.