ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ “ಕಥಾ ಕಮ್ಮಟ’
ಕನ್ನಡ ವೆಲ್ಫೇರ್ ಸೊಸೈಟಿಯಿಂದ ಕಾರ್ಯಕ್ರಮ
Team Udayavani, Mar 24, 2019, 8:55 PM IST
ಮುಂಬಯಿ: ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇವರ ಸಂಯುಕ್ತ ಆಶ್ರಯದಲ್ಲಿ ಮಾ. 17ರಂದು ಪೂರ್ವಾಹ್ನ ಕನ್ನಡ ವೆಲ್ಫೆàರ್ ಸೊಸೈಟಿಯ ಬಾಬಾಸ್ ಮಹೇಶ್ ಎಸ್. ಶೆಟ್ಟಿ ಸಭಾಗೃಹದಲ್ಲಿ ಹಮ್ಮಿಕೊಂಡ “ಅಡುಗೂಲಜ್ಜಿಯ ಕಥಾ ಕಮ್ಮಟ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಅಡುಗೂಲಜ್ಜಿಯ ಕಥೆಗಳು ಚೆಲುವು, ಒಲವು, ಅರಿವಿನಿಂದ ಕೂಡಿರುತ್ತಿದ್ದವು. ಈ ಕಥೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದವು. ಚಿಕ್ಕ ಚೊಕ್ಕ ಕಥೆಗಳಿಗೆ ಅದರದ್ದೇ ಆದ ಕಲ್ಪನೆಗಳಿವೆ. ಈ ಕಥೆಗಳು ಚಿಕ್ಕ ಮಕ್ಕಳಿಗೆ ಪ್ರಾಣಿ ಜಗತ್ತನ್ನು ಪರಿಚಯಿಸುತ್ತಿದ್ದವಲ್ಲದೆ ಪ್ರಾಣಿಗಳ ಗುಣ ಸ್ವಭಾವಗಳನ್ನು ಪ್ರಕೃತಿಯಲ್ಲಿನ ಆಗುಹೋಗುಗಳ ಕುರಿತು ಬೆಳಕು ಚೆಲ್ಲುವಲ್ಲಿ ಸಹಕಾರಿಯಾಗಿದ್ದವು. “ಒಂದಾನೊಂದು ಕಾಲದಲ್ಲಿ’ ಎನ್ನುವ ಶೀರ್ಷಿಕೆ
ಯಿಂದ ಪ್ರಾರಂಭವಾಗುತ್ತಿದ್ದ ಅಡುಗೂಲಜ್ಜಿಯ ಕಥೆಗಳು ಅಂತ್ಯದಲ್ಲಿ ಶಾಂತಿಯ ಸಂದೇಶ ದೊಂದಿಗೆ ಕೊನೆಗೊಳ್ಳುತ್ತಿದ್ದುದಲ್ಲದೆ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿದ್ದವು. ನ್ಯಾಯ, ಅನ್ಯಾಯ, ಒಳಿತು, ಕೆಡುಕು, ಪರಿಶ್ರಮ, ಸಹನೆ, ಸಾಹಸ, ತಾಳ್ಮೆ, ಪರೋಪಕಾರ ಹೀಗೆ ಹಲವು ವಿಚಾರಗಳ ಕುರಿತು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದ್ದ ಈ ಕಥೆಗಳು “ಒಂದಾನೊಂದು ಕಾಲ ದಲ್ಲಿ’ ಎನ್ನುವ ಶೀರ್ಷಿಕೆಯಿಂದ ಪ್ರಾರಂಭವಾಗು ತ್ತಿದ್ದ ಅಡುಗೂಲಜ್ಜಿಯ ಕಥೆಗಳು ಅಂತ್ಯದಲ್ಲಿ ಶಾಂತಿ ಸಂದೇಶದೊಂದಿಗೆ ಕೊನೆಗೊಳ್ಳುತ್ತಿದ್ದುದು ವಿಶೇಷ. ಯಾವುದೇ ಖರ್ಚಿಲ್ಲದ ಈ ಅಡು ಗೂಲಜ್ಜಿಯ ಕಥಾ ಸಂಪ್ರದಾಯವನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾ ಬ್ದಾರಿ ನಮ್ಮ ಮೇಲಿದೆ. ಇಲೆಕ್ಟ್ರಾನಿಕ್ ಮಾಧ್ಯಮದ ಮಧ್ಯದಲ್ಲಿ ಅಜ್ಜಿ-ಮೊಮ್ಮಕ್ಕಳ ಕೊಂಡಿ ಕಳಚಿ ಹೋಗಬಾರದೆಂಬ ಕಿವಿಮಾತನ್ನು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟರ ವಾಣಿಯ ಮಾಸಿಕದ ಸಂಪಾದಕರಾದ ಹಿರಿಯ ರಂಗಕರ್ಮಿ ಅಶೋಕ್ ಪಕ್ಕಳ ಅವರು ಮಾತ ನಾಡಿ, ಇದನ್ನು ಹೇಗೆ ಉಪಯೋಗಿಸಬೇಕೆಂಬ ಅರಿವು ಇಲ್ಲ. ಆಧುನಿಕತೆಯಿಂದ ಬಾಳು ಬೆಳಕಾ
ಗಿದೆ. ಆದರೆ ಬದುಕು ಬರಡಾಗುತ್ತಿದೆ. ಆಧುನಿ ಕತೆ ಸಡಗರದಲ್ಲಿ ಅಡುಗೂಲಜ್ಜಿಯ ವೈಶಿಷ್ಟÂ
ಪೂರ್ಣ ಕಥೆಗಳು ಮರೆಯಾಗಬಾರದು. ಆ ಕಥೆಗಳ ಮಹತ್ವ ಆಸ್ವಾಧಿಸಿದವರಿಗೆ ಗೊತ್ತು ಅದರ ವಿಶಾಲ ಗುಣ. ಇಂತಹ ಅಪರೂಪದ ಕಾರ್ಯಕ್ರಮ ಸಂಘಟಿಸಿದ ಜಂಟಿ ಸಂಸ್ಥೆಗಳಿಗೆ, ಪದಾಧಿಕಾರಿಗಳಿಗೆ ಶುಭ ಹಾರೈಸಿದರಲ್ಲದೆ ಅರ್ಥವತ್ತಾದ ಕಥೆಗಳನ್ನು ಹೇಳಿದರು.
ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಚಂದ್ರ-ಸೂರ್ಯರ ಕುರಿತಾದ ಜಾನಪದ ಕಥೆಯೊಂದನ್ನು ಪ್ರಸ್ತುತಪಡಿಸುವುದರೊಂದಿಗೆ ಸ್ವಾಗತಿಸಿದರು. ಶಿಕ್ಷಕಿ ಸುಜಾತಾ ಶೆಟ್ಟಿ ಮಲಾಡ್, ಕವಿ ಕಥೆಗಾರ ವಿಶ್ವನಾಥ ಶೆಟ್ಟಿ ಪೇತ್ರಿ, ನಿವೃತ್ತ ಶಿಕ್ಷಣಾಧಿಕಾರಿ ಪ್ರಾಧ್ಯಾಪಕ ಸೋಮಶೇಖರ ಮಸೋಳಿ, ಲೇಖಕಿ ಲತಾ ಸಂತೋಷ್ ಶೆಟ್ಟಿ, ಚಿಣ್ಣರ ಬಿಂಬದ ಶಿಕ್ಷಕಿ ಶಾಂತಲಕ್ಷ್ಮೀ ಉಡುಪ, ಲೆಕ್ಕ ಪರಿಶೋಧಕ ಪ್ರಭಾಕರ ನಾಯಕ್, ನಿವೃತ್ತ ಬ್ಯಾಂಕ್ ಉದ್ಯೋಗಿ ಡಾ| ಕರುಣಾಕರ ಶೆಟ್ಟಿ, ಲಕ್ಷ್ಮೀ ಶಿರೂರ, ಶಾಂತಾ ನಾರಾಯಣ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ, ಮಲ್ಲಿಕಾ, ಶ್ರೀಕೃಷ್ಣ ಉಡುಪ, ರೋಶನಿ ನಾಯಕ, ಕುಮಾರಿ ನೇಹಾ ಹೆಗಡೆ ವಿವಿಧ ರೀತಿಯ ಕಥೆಗಳನ್ನು ಪ್ರಸ್ತುತಪಡಿಸಿದರು.
ಅತಿಥಿಯಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ| ವೆಂಕಟೇಶ್ ಪೈ ಅವರು ಅಡುಗೂಲಜ್ಜಿಯ ಕಥೆಯ ಮಹತ್ವವನ್ನು ತಿಳಿಸಿದ್ದಲ್ಲದೆ ಕಥೆ ಹೇಳಿದವರನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಇಂಥ ಕಮ್ಮಟಗಳ ಆವಶ್ಯಕತೆ ಇದೆ. ಅವಕಾಶ ನೀಡಿದ ಕನ್ನಡ ವೆಲ್ಫೆàರ್ ಸೊಸೈಟಿಯನ್ನು ಅಭಿನಂದಿಸಿದರು. ಫ್ರೆಂಡ್ಸ್ ಸ್ವಾವಲಂಬನ ಕೇಂದ್ರದ ಪರಿಸರ ಸ್ನೇಹಿ ಬಟ್ಟೆ ಚೀಲಗಳ ಕುರಿತು ತಿಳಿಸಿದರಲ್ಲದೆ ಚೀಲಗಳನ್ನು ಉಚಿತವಾಗಿ ನೀಡಿದರು.
ಕನ್ನಡ ವೆಲ್ಫೆàರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಮಾತನಾಡಿ, ಅಡುಗೂಲಜ್ಜಿಯ ಕಥಾ ಕಮ್ಮಟದಿಂದ ನಾವು ನೀವೆಲ್ಲ ಇಲ್ಲಿ ಸೇರುವಂತಾಯಿತು. ಇದೊಂದು ಸುಂದರ ಹಾಗೂ ನೆನಪಿರುವಂತಹ ಭಾನುವಾರ. ವಾಟ್ಸಾಪ್, ಫೇಸ್‌ಬುಕ್, ಸೇರಿದಂತೆ ಹಲವು ಮಾಧ್ಯಮಗಳ ಮಧ್ಯೆ ಬಿಡುವು ಮಾಡಿಕೊಂಡು ಬಂದು ಕಮ್ಮಟವನ್ನು ಅರ್ಥಪೂರ್ಣಗೊಳಿಸಿದ ತಮಗೆಲ್ಲಾ ಆಭಾರಿಯಾಗಿರುವೆನು ಎಂದರು.
ಹಿರಿಯ ಸಾಮಾಜಿಕ ಕಾರ್ಯಕರ್ತ ವಿ. ಆರ್. ಭಟ್ ಪ್ರತಿಷ್ಠಾನ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಇಂತಹ ಅಪರೂಪದ ಹಲವು ಕಾರ್ಯಕ್ರಮಗಳನ್ನು ಹಿಂದೆಯೂ ಆಯೋಜಿಸಿತ್ತು. ಇಂದು ಸಹ ಹಳೆನೆನಪುಗಳ ಕಥಾ ಕಮ್ಮಟ ಅರ್ಥಪೂರ್ಣವಾದದ್ದು ಎಂದರು. ಅನಘಾ ಹಾಗೂ ಸುಧುಘಾ ಪ್ರಾರ್ಥನೆಗೈದರು. ಕನ್ನಡ ವೆಲ್ಫೆàರ್ ಸೊಸೈಟಿಯ ಸಕ್ರಿಯ ಕಾರ್ಯಕರ್ತ ನಾರಾಯಣ ಶೆಟ್ಟಿ ನಂದಳಿಕೆ ವೆಲ್ಫೆàರ್ ಸೊಸೈಟಿಯ ಕುರಿತಾಗಿ ತಿಳಿಸಿ, ವಂದಿಸಿರು. ಕು| ಸುಪ್ರಿಯಾ ಉಡುಪ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.