ಸಿಬಿಎಸ್‌ಇ ಪಠ್ಯಕ್ಕೆ ಕೃತಕ ಬುದ್ಧಿಮತ್ತೆ ಸೇರ್ಪಡೆ
Team Udayavani, Mar 25, 2019, 6:00 AM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ), ತನ್ನ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಶಿಶುಗಳ ಆರೈಕೆ ಮತ್ತು ಯೋಗ ವಿಷಯಗಳನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. 2019-20ನೇ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ.
9ನೇ ತರಗತಿ ಹಾಗೂ ಅದಕ್ಕಿಂತಲೂ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 6ನೇ ವಿಷಯವಾಗಿ ಕೃತಕ ಬುದ್ಧಿಮತ್ತೆ ಸೇರ್ಪಡೆಗೊಳ್ಳಲಿದ್ದು, ಶಿಶುಗಳ ಆರೈಕೆ ಮತ್ತು ಯೋಗ ಐಚ್ಛಿಕ ವಿಷಯಗಳಾಗಿರುತ್ತವೆ.
ನಿಯಮಗಳ ಪ್ರಕಾರ, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಐದು ವಿಷಯಗಳನ್ನು ಕಲಿಯಬೇಕಿದ್ದು, ಕೌಶಲ್ಯ ಕುರಿತ ವಿಷಯವೊಂದನ್ನು 6ನೇ ವಿಷಯವಾಗಿ ಸೇರ್ಪಡೆಗೊಳಿಸಲು ಅವಕಾಶವಿದೆ. ಹಾಗಾಗಿ, ಕೃತಕ ಬುದ್ಧಿಮತ್ತೆಯನ್ನು 6ನೇ ವಿಷಯವನ್ನಾಗಿ ಸೇರ್ಪಡೆಗೊಳಿಸಲಾಗಿದೆ. ಕಡ್ಡಾಯ ವಿಷಯಗಳಾದ ವಿಜ್ಞಾನ, ಗಣಿತ ಅಥವಾ ಸಮಾಜ ಶಾಸ್ತ್ರ ದಲ್ಲಿ ಯಾವುದಾದರೊಂದು ವಿಷಯದಲ್ಲಿ ವಿದ್ಯಾರ್ಥಿ ಅನುತ್ತೀರ್ಣನಾದಲ್ಲಿ, ಆ ವಿಷಯದ ಬದಲಿಗೆ 6ನೇ ವಿಷಯವನ್ನು ಪರ್ಯಾಯ ವಿಷಯವನ್ನಾಗಿ ಪರಿಗಣಿಸಿ, ಅದರಲ್ಲಿ ಆತ ಪಡೆದ ಅಂಕಗಳನ್ನು ಫಲಿತಾಂಶಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಮಂಡಳಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.