ಪರಭಾಷೆ ಮತದಾರನದ್ದೇ ಪಾರಮ್ಯ
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ
Team Udayavani, Mar 25, 2019, 12:15 PM IST
ಕ್ಷೇತ್ರದ ವಸ್ತುಸ್ಥಿತಿ: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಚುನಾವಣೆ ನಡೆದರೂ ಹೆಚ್ಚು ಜನ ಕಾಂಗ್ರೆಸನ್ನೇ ಬೆಂಬಲಿಸುತ್ತಾರೆ ಎಂದು ಹಿಂದಿನ ಚುನಾವಣೆಗಳ ಅಂಕಿ ಅಂಶ ಹೇಳುತ್ತವೆ. ಪ್ರಮುಖವಾಗಿ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿಯೂ (2008, 2013, 2018) ಶಾಸಕ ಕೆ.ಕೆ.ಜಾರ್ಜ್ ಜಯಗಳಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1,58,708(ಶೇ.52) ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 80,891 (ಶೇ.51.3) ಮತ, ಬಿಜೆಪಿಯ ಪಿ.ಸಿ.ಮೋಹನ್ ಪರ 63,941 (ಶೇ.40.6) ಮತಗಳು ಚಲಾವಣೆಯಾಗಿವೆ.
ಉಳಿದಂತೆ ಬಿಬಿಎಂಪಿ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 8 ಬಿಬಿಎಂಪಿ ವಾರ್ಡ್‌ಗಳಿದ್ದು, 5ರಲ್ಲಿ ಕಾಂಗ್ರೆಸ್ ಕಾರ್ಪೊರೇಟರ್‌ಗಳು, 3ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. 2014ರ ಲೊಕಸಭೆ ಚುನಾವಣೆ ವೇಳೆಯೂ ಕ್ಷೇತ್ರದ ವಾರ್ಡ್‌ಗಳಲ್ಲಿ ಇದೇ ಪರಿಸ್ಥಿತಿ ಇತ್ತು.
ಸರ್ವಜ್ಞನಗರ ಕ್ಷೇತ್ರದಲ್ಲಿ ಕನ್ನಡಿಗರಗಿಂತ ತಮಿಳು, ಉರ್ದು ಭಾಷಿಕರೇ ಬಹುಸಂಖ್ಯಾತರು. ಜತೆಗೆ ಮುಸ್ಲಿಂ ಹಾಗೂ ತಮಿಳು ಸಮುದಾಯದವರೇ ಹೆಚ್ಚಾಗಿದ್ದಾರೆ. ಕಳೆದ ಬಾರಿ ಬೆಂಗಳೂರು ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಕ್ಷೇತ್ರ ಎಂಬ ಹಣೆಪಟ್ಟಿ ಹೊಂದಿದೆ.
ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
-ಕ್ಷೇತ್ರದ ವಿವಿಧೆಡೆ 18 ಶುದ್ಧ ಕುಡಿಯುವ ನೀರಿನ ಯೋಜನೆಗಳು
-15.6 ಲಕ್ಷ ಅನುದಾನದಲ್ಲಿ ಬಾನಸವಾಡಿಯ ಭುವನೇಶ್ವರಿ ಉದ್ಯಾನ ಅಭಿವೃದ್ಧಿ.
-47.18 ಲಕ್ಷ ಅನುದಾನದಲ್ಲಿ ಬಾನಸಕವಾಡಿ ವಾರ್ಡ್‌ನಲ್ಲಿ ಸಿಸಿಟಿವಿ ಅಳವಡಿಕೆ ಕಾಮಗಾರಿ ಚಾಲನೆ.
ನಿರೀಕ್ಷೆಗಳು
-ಕಿರಿದಾದ ರಸ್ತೆಗಳು, ವಾಹನದಟ್ಟಣೆ, ಕೊಳೆಚೆ ಪ್ರದೇಶಗಳ -ಮುಕ್ತಿಗೆ ಸ್ಮಾರ್ಟ್‌ಸಿಟಿಯಡಿ ಉತ್ತಮ ಯೋಜನೆ.
-ವಾರ್ಡ್‌ಗಳು- 8
-ಬಿಜೆಪಿ- 3
-ಕಾಂಗ್ರೆಸ್- 5
-ಜನಸಂಖ್ಯೆ- 5,34,217
-ಮತದಾರರ ಸಂಖ್ಯೆ- 3,41,806
-ಪುರುಷರು – 1,73,020
-ಮಹಿಳೆಯರು – 1,68,786
2014ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು- 1,58,708(ಶೇ.52)
-ಬಿಜೆಪಿ ಪಡೆದ ಮತಗಳು – 63,941 (ಶೇ.40.6)
-ಕಾಂಗ್ರೆಸ್ ಪಡೆದ ಮತಗಳು – 80,891 (ಶೇ.51.3)
-ಆಮ್ ಆದ್ಮಿ ಪಡೆದ ಮತಗಳು – 6,913 (ಶೇ.4.4)
2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಕೆ.ಜೆ.ಜಾರ್ಜ್ ಕಾಂಗ್ರೆಸ್ ಶಾಸಕ
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 3
-ಕಾಂಗ್ರೆಸ್ ಸದಸ್ಯರು -5
ಮಾಹಿತಿ: ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.