ದೇವೆಗೌಡರ ಕಾಲಿಗೆರಗಿದ ಡಿ.ಕೆ.ಸುರೇಶ್
Team Udayavani, Mar 25, 2019, 3:44 PM IST
ಕನಕಪುರ: ಹಳೆ ಮೈಸೂರು ಭಾಗದಲ್ಲಿ ರಾಜಕೀಯ ದೃವೀಕರಣಕ್ಕೆ ಹೆಬ್ಟಾಗಿಲಾದ ರಾಮನಗರ ಜಿಲ್ಲೆಯಲ್ಲಿ ಬದ್ಧ ವೈರಿಗಳಂತೆ ಕಾದಾಡುತ್ತಿದ್ದ ಎಚ್‌ಡಿಡಿ ಮತ್ತು ಡಿಕೆಶಿ ಕುಟುಂಬ ಕಾದಾಟ ಬಿಟ್ಟು ಕೈ ಜೋಡಿಸಿದೆ. ಸಂಸದ ಡಿ.ಕೆ.ಸುರೇಶ್ ಇತ್ತೀಚೆಗೆ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗರಿಗೆದರಿದ ಚುನಾವಣೆಯಲ್ಲಿ ಅನೇಕ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕಾರಣಿಗಳ ನಡೆಗಳು ಕನಕಪುರದಲ್ಲಿ ಚರ್ಚೆಗೆ ಮುನ್ನುಡಿ ಬರೆದಿದೆ. ಮತ್ತೂಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಸಹಿಸಿಕೊಳ್ಳದ ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಧಾನ ಹುಟ್ಟು ಹಾಕಿರುವುದು ಎರಡು ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ ಪರಿಣಮಿಸಿದೆ.
ದೇವೇಗೌಡರ ಕಾಲಿಗೆ ಬಿದ್ದ ಮರ್ಮ ಏನು?: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮತ್ತು ಅದಕ್ಕೂ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಮಾತಿನ ಯುದ್ಧ ಮಾಡುತ್ತಿದ್ದರು. ಕಾಂಗ್ರೆಸ್ ಪ್ರಮುಖರು ಮಾಜಿ ಪ್ರಧಾನಿ ದೇವೇಗೌಡರನ್ನು ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಹೋಲಿಕೆ ಮಾಡಿ ಜರಿಯುತ್ತಿದ್ದವರು, ಇಂದು ಈ ಎಲ್ಲಾ ವೈರತ್ವವನ್ನು ಬದಿಗಿಟ್ಟುರುವುದು,
ಎಚ್‌ಡಿಡಿ ಕಾಲಿಗೆ ಬಿದ್ದು ನಮಸ್ಕರಿಸಿರುವುದು ಕನಕಪುರ ರಾಜಕಾರಣದ ಮಟ್ಟಿಗೆ ಚರ್ಚೆಯ ವಿಷಯವಾಗಿದೆ. ಸಂಸದರಾಗಿ ಪುನರಾಯ್ಕೆಗೆ ಡಿ.ಕೆ.ಸುರೇಶ್ ದೇವೇಗೌಡರ ಕಾಲು ಹಿಡಿದಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ ವಿಧನಸಭಾ ಚುನಾವಣೆಯಲ್ಲಿ 47ರಿಂದ 50 ಸಾವಿರ ಮತಗಳು ಜೆಡಿಎಸ್‌ಗೆ ಹೋಗಿವೆ. ಪಕ್ಷ ಕಾಯುವ ಒಬ್ಬ ಮುಖಂಡನೂ ಇಲ್ಲದ ಕ್ಷೇತ್ರದಲ್ಲಿ ಅಷ್ಟು ಮತಗಳು ಹೇಗೆ ಹೋದವು ಎಂದು ಡಿ.ಕೆ.ಸು ತಮ್ಮ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಅವು ಸ್ವಾಭಿಮಾನದ ಮತಗಳೂ ನೀವು ಜೆಡಿಎಸ್ ಕಾರ್ಯಕರ್ತರ ಜೊತೆಯಲ್ಲಿ ಗಲಾಟೆ ಮಾಡಿ, ಕಟ್ಟಿಕೊಂಡ ವೈರತ್ವದ ಮತಗಳು ಎಂದು ತಮ್ಮ ಪಕ್ಷದ ಕಾರ್ಯಕರ್ತರನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಈ ಚುನಾವಣೆಯಲ್ಲಿ ಆ ಸ್ವಾಭಿಮಾನದ ಮತಗಳು ತಮ್ಮತ್ತ ಸೆಳೆಯಲು ಡಿ.ಕೆ.ಸುರೇಶ್ ದೇವೇಗೌಡರ ಮುಂದೆ ಸಾಷ್ಟಾಂಗ ಹಾಕಿದ್ದಾರೆ ಎಂಬ ಮಾತುಗಳು ತಾಲೂಕಿನಲ್ಲಿ ಕೇಳಿ ಬಂದಿದೆ.
ಕಾನೂನು ಕುಣಿಕೆಗೂ ಎಚ್‌ಡಿಕೆ ಮುಂದಾಗಿದ್ದರು: ಎಚ್.ಡಿ.ಕುಮಾರಸ್ವಾಮಿ ಹಿಂದೊಮ್ಮೆ ಡಿಕೆಶಿಯವರನ್ನು ಕಾನೂನು ಕುಣಿಕೆಗೆ ಸಿಲುಕಿಸಿ ಕನಕಪುರದ ಆಪ್ತರಿಂದ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ಹಾಕಿಸಿದ್ದರು. ರಾಜ್ಯದ ಪ್ರತಿಷ್ಠಿತ ಮಠಾಧೀಶರೊಬ್ಬರ ಮಧ್ಯಸ್ಥಿತಿಕೆಯಿಂದ ರಾಜಿ ಸಂಧಾನದ ಮೂಲಕ ಈ ಪ್ರಕರಣಕ್ಕೆ ಅಂತ್ಯ ಕಂಡಿತ್ತು. ಇಷ್ಟು ವಿರೋಧ ಇದ್ದ ಇಬ್ಬರು ಇಂದು ಒಟ್ಟಾಗಿರುವುದು ಕಾರ್ಯಕರ್ತರನ್ನು ದಂಗಾಗಿಸಿದೆ.
ಕಾರ್ಯಕರ್ತರಿಗೆ ಮುಜುಗರ: ರಾಜ್ಯ ರಾಜಕಾರಣದಲ್ಲಿ ನುರಿತ ರಾಜಕಾರಣಿ ಮತ್ತು ರಾಜಕೀಯ ಪಟ್ಟುಗಳ ಚಾಣಾಕ್ಷರು ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ತನ್ನ ಚಾಣಾಕ್ಷ ನಡೆಗಳಿಂದಲೇ ತಮ್ಮ ರಾಜಕೀಯ ನೆಲೆಗಟ್ಟನ್ನು ಬದ್ರಮಾಡಿಕೊಂಡರೆ ಇತ್ತ ಸಹೋದರ ಡಿ.ಕೆ. ಸುರೇಶ್ ಅವರ ನಡೆಯಿಂದಲೇ ಕಾರ್ಯಕರ್ತರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಂತೆ ಮಾಡುತ್ತಿದ್ದರು.
ಇಂದು ಎಚ್‌ಡಿಡಿ ಕಾಲಿಗೆ ಬಿದ್ದದ್ದು ಮತ್ತು ತಲೆ ತಗ್ಗಿಸಿ ನಿಂತದ್ದನ್ನು ಕಂಡ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ಲೇವಡಿ ಮಾಡುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರ ತರಿಸಿದ್ದು, ಅನ್ನುವ ಹಾಗಿಲ್ಲ ಅನುಭವಿಸುವ ಹಾಗಿಲ್ಲ ಎನ್ನುವಂತಾಗಿದೆ. ಕಾರ್ಯಕರ್ತರ ಸ್ಥಿತಿ.
ಡಿ.ಕೆ.ಶಿ ಹುಟ್ಟನ್ನೇ ಪ್ರಶ್ನಿಸಿದ್ದರು?: ಕಳೆದ ಕೆಲ ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಂದು ಸಹ ಮುಖ್ಯಮಂತ್ರಿಯಾಗಿದ್ದರೂ ಅಂದು ಡಿಕೆಶಿ ವಿರುದ್ಧ ಯಾವ ಮಟ್ಟದ ವೈರತ್ವ ಇತ್ತು ಎಂದರೆ ಬಹಿರಂಗವಾಗಿ ಡಿಕೆಶಿ ಹುಟ್ಟನ್ನೇ ಪ್ರಶ್ನಿಸಿ, ರಾಜ್ಯವ್ಯಾಪಿ ಚರ್ಚೆ ಹುಟ್ಟುಹಾಕಿ ಸಾತನೂರಿನಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು ಹೊಗಿದ್ದವು. ಇಂದು ಅವೆಲ್ಲವನ್ನು ಮರೆತು ಕೈಕೈ ಜೋಡಿಸಿರುವುದು ಕಾರ್ಯಕರ್ತರಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ.
* ಉಮೇಶ್ ಬಾಣಗಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.