ನನಗೂ ಒಬ್ಬ ಗೆಳೆಯ ಬೇಕು…
Team Udayavani, Mar 26, 2019, 6:00 AM IST
ನೋಡಲು ಸುರ ಸುಂದರಾಂಗನೇ ಆಗಿರಬೇಕು ಅಂತೇನಿಲ್ಲ. ಆದರೆ, ಆಂತರ್ಯದಲ್ಲಿ ಸುಂದರನಾಗಿರಬೇಕು. ಯಾರಿಗೂ ನೋವು ಕೊಡಬಾರದು. ತುಂಬಾ ಹೆಲ್ಪಿಂಗ್ ನೇಚರ್ ಇರಬೇಕು. ಮಕ್ಕಳೆಂದರೆ ಪ್ರಾಣ, ಬಡವರೆಂದರೆ ಕಾಳಜಿ ಇರಬೇಕು. ಏನೇ ಕಷ್ಟ ಬಂದರೂ ತನ್ನತನವನ್ನು ಬಿಟ್ಟು ಕೊಡದ ಸ್ವಾಭಿಮಾನ ಇರಲೇಬೇಕು.
ನನಗೊಂದು ಆಸೆ ಇದೆ. ಏನ್ ಗೊತ್ತಾ? ನಂಗೊಬ್ಬ ಗೆಳೆಯ ಬೇಕು. ಅವನಿಗೆ ನಾನೇ ಪ್ರಪಂಚ ಆಗದಿದ್ದರೂ ಪರವಾಗಿಲ್ಲ, ನನ್ನನ್ನು ನಾನಿರುವಂತೆ ಒಪ್ಪಿಕೊಂಡರೆ ಸಾಕು. ಜೊತೆಗೆ, ಅವನು ಸಿಕ್ಕಾಪಟ್ಟೆ ತರ್ಲೆ ಮಾಡಬೇಕು, ನನ್ನನ್ನು ಯಾವಾಗ್ಲೂ ಗೋಳು ಹೊಯೊಬೇಕು. ಆದ್ರೆ, ಯಾವತ್ತಿಗೂ ನನ್ನನ್ನು ಅಳಿಸಬಾರದು.
ನಮ್ಮಿಬ್ಬರ ಮೊದಲ ಭೇಟಿ ಜಗಳದಲ್ಲೇ ಶುರು ಆಗಬೇಕು. ಅವನನ್ನು ಕಂಡ ಮೊದಲ ದಿನವೇ “ಸೇಮ್ ಪಿಂಚ್’ ಎನ್ನುವಂತೆ ಇರಬೇಕು. ಅಂದ್ರೆ ಇಬ್ಬರೂ ಮ್ಯಾಚಿಂಗ್ ಮ್ಯಾಚಿಂಗ್ ಕಲರ್ ಡ್ರೆಸ್ ಹಾಕಿರಬೇಕು. ಇವನೇ ನನ್ನವನು ಅಂತ ಮೊದಲ ನೋಟದಲ್ಲೇ ತಿಳಿಯಬೇಕು. ಇದು ಸ್ವಲ್ಪ ಓವರ್ ಆಯಿತೇನೋ, ಆದ್ರೂ, ಅವನು ಹತ್ತಿರ ಬರುತ್ತಿದ್ದರೆ ನನಗೆ ಏನೋ ಫೀಲ್ ಆಗಬೇಕು. ನನ್ನವನು ಇಲ್ಲೇ ಎಲ್ಲೋ ಇದ್ದಾನೆ ಅಂತ ಅನ್ನಿಸಿ ಕಣ್ಮನಸು ಅವನನ್ನು ಹುಡುಕಬೇಕು.
ಅವನು ಯಾವತ್ತೂ “ನಿನ್ನನ್ನು ಪ್ರೀತಿಸುತ್ತೇನೆ’ ಅಂತ ಬಾಯಿ ಬಿಟ್ಟು ಹೇಳಬಾರದು. ಆದರೂ, ಅವನ ನಿಷ್ಕಲ್ಮಶ ಪ್ರೀತಿಗೆ ನಾ ಸೋಲಬೇಕು. ನಮ್ಮಪ್ಪನಿಗಿಂತ ಜಾಸ್ತಿ ನನ್ನನ್ನು ಪ್ರೀತಿಸಬೇಕು.
ಇಷ್ಟಕ್ಕೇ ಮುಗಿಯಲ್ಲ; ಮಳೆ ಬರುವಾಗ ಒಂದೇ ಕೊಡೆಯ ಕೆಳಗೆ ಇಬ್ಬರೂ ಸಾಗಬೇಕು, ಒಂದೇ ಇಯರ್‌ಫೋನ್‌ನಲ್ಲಿ ಇಬ್ಬರೂ ನನ್ನಿಷ್ಟದ ಹಾಡು ಕೇಳಬೇಕು, ಆ ಹಾಡಿನ ಸಾಲಿಗೆ ದನಿಗೂಡಿಸಬೇಕು, ಅವನು ದಿನಾ ನಂಗೆ ರಾಶಿ ರಾಶಿ ಹೂಗಳನ್ನು ತಂದು ಕೊಡಬೇಕು.
ಏನು ಕಾಮಿಡಿ ಅನ್ಸುತ್ತಾ? ನಗು ಬರ್ತಿದ್ಯಾ? ನನ್ನ ಹುಡುಗನ ಬಗ್ಗೆ ಇಷ್ಟೆಲ್ಲಾ ಕನಸುಗಳಿವೆ ನನಗೆ. ಇದೆಲ್ಲಾ ನಡೆಯೋದು ಸಿನಿಮಾದಲ್ಲಿ ಮಾತ್ರ ಅಂತ ನಂಗೂ ಗೊತ್ತು. ಆದ್ರೂ, ಮೊದಲ ನೋಟದಲ್ಲೇ “ಇವನು ನನ್ನವನು’ ಅಂತ ಅನ್ನಿಸಬೇಕು. ನೋಡಲು ಸುರ ಸುಂದರಾಂಗನೇ ಆಗಿರಬೇಕು ಅಂತೇನಿಲ್ಲ. ಆದರೆ, ಆಂತರ್ಯದಲ್ಲಿ ಸುಂದರನಾಗಿರಬೇಕು. ಯಾರಿಗೂ ನೋವು ಕೊಡಬಾರದು. ತುಂಬಾ ಹೆಲ್ಪಿಂಗ್ ನೇಚರ್ ಇರಬೇಕು. ಮಕ್ಕಳೆಂದರೆ ಪ್ರಾಣ, ಬಡವರೆಂದರೆ ಕಾಳಜಿ ಇರಬೇಕು. ಎಲ್ಲರೂ ನಮ್ಮವರೇ ಎನ್ನುವ ವಿಶಾಲ ಮನೋಭಾವ, ಏನೇ ಕಷ್ಟ ಬಂದರೂ ತನ್ನತನವನ್ನು ಬಿಟ್ಟು ಕೊಡದ ಸ್ವಾಭಿಮಾನ ಇರಲೇಬೇಕು. ಕಷ್ಟ ಜೀವಿ, ನಿಸ್ವಾರ್ಥಿ, ಪ್ರಾಮಾಣಿಕನಾಗಿರಬೇಕು.
ಬಡವನಾದರೂ ಚಿಂತೆ ಇಲ್ಲ. ಈ ಬಡವಿಯ ಸಣ್ಣ ಪುಟ್ಟ ಆಸೆಗಳನ್ನು ತೀರಿಸಿದರೆ ಸಾಕು. ಅವನಿಗೆ ನೆರಳಾಗಿ, ಉಸಿರಾಗಿ ಜೊತೆಗಿರುತ್ತೇನೆ. ಇಷ್ಟು ಒಳ್ಳೆಯ ಹುಡುಗ ಸಿಕ್ಕರೆ, ಅವನನ್ನೂ, ಅವನ ಒಳ್ಳೆಯತನವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ಜವಾಬ್ದಾರಿ ನನ್ನದು.
ಆದರೆ, ಇಂಥ ಹುಡುಗನನ್ನು ಎಲ್ಲಪ್ಪಾ ಹುಡುಕೋದು? ಆ ಮುದ್ದುಗುಮ್ಮ ಆದಷ್ಟು ಬೇಗ ನನಗೆ ಸಿಗಲಿ. ದೇವರೇ ಪ್ಲೀಸ್, ಇದೊಂದು ಆಸೆ ನೆರವೇರಿಸು. ಈ ಸಲ ಐವತ್ತು ರೂಪಾಯಿಯ ಎರಡು ಡೈರಿಮಿಲ್ಕ್ ಚಾಕೊಲೇಟ್, 2 ರೋಜಾ ಹೂ ಕೊಡ್ತೀನಿ. ಡೀಲ್ ಓಕೆನಾ? ಪ್ಲೀಸ್ ಮರೀಬೇಡ ಆಯ್ತಾ.
ತುಂಟ ಹುಡುಗನ ದಾರಿ ಕಾಯುತ್ತಿರೋ ರಾಜ…ಕುಮಾರಿ
ಅಪೂರ್ವ ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.