ಮತದಾನದಿಂದ ಬದಲಾವಣೆ ಸಾಧ್ಯ
ನಾವು ಯಾಕೆ ಮತ ಹಾಕಬೇಕು
Team Udayavani, Mar 26, 2019, 6:30 AM IST
“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ.
ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.
ಒಳ್ಳೆಯ ಅವಕಾಶ ಕಳೆದುಕೊಳ್ಳಬಾರದು
ಮತದಾನ ಮಾಡದಿದ್ದರೆ ಒಳ್ಳೆಯ ಜನನಾಯಕರನ್ನು ಆರಿಸುವ ಅವಕಾಶ ಕಳೆದುಕೊಳ್ಳುತ್ತೇವೆ. ದೇಶದ ಅಭಿವೃದ್ಧಿಗಾಗಿ ಉತ್ತಮ ನಾಯಕರನ್ನು ಆರಿಸಿ ಕಳುಹಿಸು ವುದು ನಮ್ಮ ಕರ್ತವ್ಯ. ಯುವಕರಿಂದ ದೇಶದ ಅಭಿವೃದ್ಧಿ ಸಾಧ್ಯ. ಉತ್ತಮ ಜನಪ್ರತಿನಿಧಿಗಳನ್ನು ಆರಿಸಿ ದೇಶದ ಪ್ರಗತಿಗೆ ನಾವೆಲ್ಲ ಕೈ ಜೋಡಿಸಬೇಕಿದೆ. ಎಲ್ಲರೂ ಮತದಾನ ಮಾಡುವ ಶಪಥ ಮಾಡೋಣ.
– ಮಂಜೇಶ, ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾರಕೂರು
ಆಯ್ಕೆಯಲ್ಲಿ ನನ್ನದೂ ಪಾಲಿದೆ ಎನ್ನುವ ಸಂತೃಪ್ತಿ
ಮತ ಪ್ರತಿಯೊಬ್ಬರೂ ಹಾಕಲೇ ಬೇಕು. ಮತ ಹಾಕದಿದ್ದರೆ ಸರಕಾರ ತಪ್ಪು ಮಾಡಿದರೆ ಅದನ್ನು ಪ್ರಶ್ನೆ ಮಾಡುವ ಹಕ್ಕನ್ನು ನಾವು ಕಳೆದುಕೊಳ್ಳುತ್ತೇವೆ. ಮತದಾನ ಕೇವಲ ನಮ್ಮ ಕೆಲಸ ಅಲ್ಲ ಅದು ನಮ್ಮ ಹಕ್ಕು,ನಮ್ಮ ಕರ್ತವ್ಯ. ಈ ದೇಶದ ನಾಯಕನ ಆಯ್ಕೆಯಲ್ಲಿ ನನ್ನದೂ ಪಾಲಿದೆ ಎನ್ನುವ ಸಂತ್ರಪ್ತಿ ನಾವು ಮತ ಚಲಾಯಿಸಿದಾಗ ಮಾತ್ರ ಆಗುತ್ತದೆ.
– ನೀತಾ ಗಾಣಿಗ, ಸ. ಪದವಿ ಕಾಲೇಜು, ಬೈಂದೂರು
ಮತದಾನದಿಂದ ಬದಲಾವಣೆ ಸಾಧ್ಯ
ಮತದಾನ ಎನ್ನುವುದು ಸ್ಥಿರಾಸ್ಥಿ. ನಾವು ಯಾರನ್ನು ಬೇಕಾದರೂ ಆಯ್ಕೆ ಮಾಡುವ ಹಕ್ಕು ಇದೆ. ಹಾಗೆಯೇ ಬದಲಾವಣೆಯನ್ನು ಮಾಡುವ ಹಕ್ಕನ್ನು ಕೂಡ ನಾವು ಬಯಸುತ್ತೇವೆ. ನಾವು ಪ್ರಸ್ತುತ ಸರ್ಕಾರದೊಂದಿಗೆ ಅತೃಪ್ತರಾಗಿದ್ದರೆ, ನಾವು ಉತ್ತಮವಾದ ಆಯ್ಕೆಗಾಗಿ ಮತ ಚಲಾಯಿಸಬಹುದು. ಐದು ವರ್ಷಗಳ ಕಾಲ ಅದೇ ಪಕ್ಷದ ಆಳ್ವಿಕೆಗೆ ಕಾರಣವಾಗಬಹುದು. ದೇಶದ ಕೆಟ್ಟ ಸರ್ಕಾರವನ್ನು ಕಿತ್ತು ಎಸೆಯಬಹುದು.
– ಅನಿತಾ, ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಾರಕೂರು
ಮತದಾನವೆಂಬ ಅಸ್ತ್ರ ಪ್ರಯೋಗಿಸಲೇಬೇಕು
ಉತ್ತಮ ಸಮಾಜ ನಿರ್ಮಾಣದಲ್ಲಿ ಮತದಾರರ ಪಾತ್ರ ಮಹತ್ವ¨ªಾಗಿರುತ್ತದೆ. ದೇಶದ ರಾಜಕೀಯ ವ್ಯವಸ್ಥೆ ಕೆಟ್ಟು ಹೋದಾಗ ಮತದಾನವೆಂಬ ಅಸ್ತ್ರವನ್ನು ಬಳಸಿಕೊಂಡು ಸೂಕ್ತ ಬದಲಾವಣೆಯನ್ನು ತರಬೇಕು. ಮತದಾನ ನಮ್ಮೆಲ್ಲರ ಹಕ್ಕು ಮತ್ತು ಆದ ಕರ್ತವ್ಯವಾಗಿದೆ. ಮತದಾರರ ಆಯ್ಕೆ ಸರಿಯಾಗಿದ್ದಲ್ಲಿ ದೇಶದ ಭವಿಷ್ಯ ಮತ್ತು ಅಭಿವೃದ್ಧಿ ಸುಸ್ಥಿತಿಯಲ್ಲಿ ರೂಪುಗೊಳ್ಳುತ್ತದೆ.
– ಅಪೂರ್ವಾ ರಾವ್, ವೈಕುಂಠ ಬಾಳಿಗ ಕಾನೂನು ಕಾಲೇಜು
ದೇಶದ ಅಭಿವೃದ್ಧಿಗೆ ಸಹಕಾರ
ಮತದಾನ ಎಂದರೆ ಒಬ್ಬ ಸರಿಯಾದ ವ್ಯಕ್ತಿಯನ್ನು ಜನರೆಲ್ಲರ ಮತ ಹಾಕುವುದರ ಮೂಲಕ ಆಯ್ಕೆ ಮಾಡುತ್ತಾರೆ. ಪ್ರತಿಯೊಬ್ಬರು ಈ ಪ್ರಕ್ರಿಯೆ ಯಲ್ಲಿ ಭಾಗಿಯಾಗಬೇಕು. ದೇಶದ ಬೆಳವಣಿಗೆಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವುದರಿಂದ ನಾವು ದೇಶದ ಅಭಿವೃದ್ಧಿಗೆ ಸಹಕಾರ ನೀಡಬಹುದಾಗಿದೆ. ಹೊಸ ಚುನಾಯಿತ ಸರಕಾರ ದೇಶದ ಜನರ ಕಲ್ಯಾಣಕ್ಕೆ ಕಾರ್ಯಕ್ರಮಗಳನ್ನು ರೂಪಿಸಬೇಕು. ತಲುಪಿಸುವಂತಿರಬೇಕು.
– ಸೌಜನ್ಯಾ ರಾವ್, ವೈಕುಂಠ ಬಾಳಿಗ ಕಾನೂನು ಕಾಲೇಜು, ಉಡುಪಿ
ನೋಟಿಗೆ ಬೆಲೆ ಕೊಡದಿರಿ
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆ ಮತ ಮತ ಚಲಾಯಿಸುವುದು ಅತ್ಯಗತ್ಯ. ಈ ದೇಶದ ಬೆಳವಣಿಗೆಗೆ ಉತ್ತಮ ನಾಯಕನ ಆಯ್ಕೆ ಮತದಾರನ ಜವಾಬ್ದಾರಿ. ನೋಟಿಗೆ ಬೆಲೆ ಕೊಡದೆ ಮತಕ್ಕೆ ಈ ದೇಶಕ್ಕೆ ಮತಾಂತರದ ಮೂಲಕ ತಮ್ಮ ಕರ್ತವ್ಯ ನಿಷ್ಠೆಯನ್ನು ಕಡ್ಡಾಯವಾಗಿ ತೋರಿಸಬೇಕಾಗಿ ವಿನಂತಿ. ನಮ್ಮ ಮತ ನಮ್ಮ ಹಕ್ಕು ಮತವನ್ನು ಆಸೆ ಆಮಿಷಗಳಿಗೆ ಮಾರಿಕೊಳ್ಳಬೇಡಿ.
– ಲತಾ ಪಾರ್ಶ್ವನಾಥ ಜೈನ್ ನೂಜ್, ಸ.ಪ್ರ. ದರ್ಜೆ ಕಾಲೇಜು, ಬೈಂದೂರು
ಮತದಾನ ಸರಕಾರ ರಚಿಸಲು ಒಂದು ಅಡಿಪಾಯ
ಮತ ಹಾಕುವ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಉದ್ಭವವಾಗುವ ಪ್ರಶ್ನೆ ಎಂದರೆ, ಮತ ಯಾಕೆ ಹಾಕಬೇಕು? ಎನ್ನುವುದಾಗಿದೆ. ನಮ್ಮ ದೇಶ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದ್ದು ಇಲ್ಲಿ ಪ್ರಜೆಗಳೇ ಪ್ರತಿನಿಧಿಯಾಗಿದ್ದು, ಅವರು ಹಾಕುವ ಒಂದು ಮತದ ಮೇಲೆ ದೇಶದ ಭವಿಷ್ಯ ನಿರ್ಧಾರವಾಗಿರುತ್ತದೆ. ಮತದಾನ ಸರಕಾರ ರಚಿಸಲು ಒಂದು ಅಡಿಪಾಯವಾಗಿದೆ. ಉತ್ತಮವಾದ ಬದಲಾವಣೆಗಳನ್ನು ತರಲು ಪ್ರತಿಯೊಬ್ಬರು ಮತದಾನ ಮಾಡಲೇಬೇಕು.
– ಶ್ವೇತಾ, ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಉಡುಪಿ
ಅಮೂಲ್ಯ ಮತ ವ್ಯರ್ಥ ಮಾಡಲಾರೆ
ಇದು ನನ್ನ ಮೊದಲ ಮತ. ರಾಜಕೀಯದಲ್ಲಿ ಪಕ್ಷಗಳ ನಡುವೆ ಹೊಡೆದಾಟ ಬಿಟ್ಟು ಯಾರು ಜನರ ಬಗ್ಗೆ ಗಮನ ಹರಿಸುತ್ತಾರೋ ಅವರಿಗೆ ಮಾತ್ರ ನನ್ನ ಅಮೂಲ್ಯವಾದ ಮತವನ್ನು ಚಲಾಯಿಸುತ್ತೇನೆ. ನನ್ನ ಮತವನ್ನು ಯಾವುದೇ ಹಣದಾಸೆಗೆ ವ್ಯರ್ಥ ಮಾಡುವುದಿಲ್ಲ. ಚುನಾ ಯಿತ ಸರಕಾರವು ಸೂಕ್ತ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕನಿಗೂ ಅದರ ಸೌಲಭ್ಯ ತಲುಪುವ ಹಾಗೆ ವಿನಿಯೋಗಿಸಬೇಕು.
– ಅಬ್ಬುಬಕ್ಕರ್ ಸಿದ್ದಿಕ್ ವಂಡ್ಸೆ, ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.