ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 3ನೇ ಸ್ಥಾನ


Team Udayavani, Mar 26, 2019, 6:00 AM IST

q-22

ತಮ್ಮ ದೋಣಿ ಯಾತ್ರೆಯ ಸಮಯದಲ್ಲಿ ಪ್ರಿಯಾಂಕಾ ಗಾಂಧಿಯವರು ದೇಗುಲಗಳಿಗೆ ಹೋದರು, ವಿದ್ಯಾರ್ಥಿಗಳನ್ನು ಭೇಟಿಯಾದರು, ನದಿತಟದ ಜನರನ್ನು ಮಾತನಾಡಿಸಿದರು. ಇವೆಲ್ಲವನ್ನೂ ನೋಡಿದಾಗ ಉತ್ತರಪ್ರದೇಶದಲ್ಲಿ ಬೇರುಮಟ್ಟದಲ್ಲಿ ಅವರು ಯಾವ ರೀತಿಯ ಬದಲಾವಣೆ ತರಬಲ್ಲರು ಎಂದು ನಿಮಗನಿಸುತ್ತದೆ?
ಮೊದಲನೆಯದಾಗಿ, ದುರ್ಬಲ ಸಂಘಟನಾ ಸಾಮರ್ಥ್ಯದಿಂದ ಬಳಲುತ್ತಿರುವ ಪಕ್ಷವೊಂದರ ನಾಯಕರು ಬೇರುಮಟ್ಟದಲ್ಲಿ ಬೃಹತ್‌ ಬದಲಾವಣೆಗೆ ಕಾರಣರಾಗುತ್ತಾರೆ ಎಂಬ ಊಹೆಯನ್ನು ನಾವು ಪ್ರಶ್ನಿಸಬೇಕಿದೆ.

ಪ್ರತಿ ನಾಯಕನಿಗೂ ತನ್ನ ವರ್ಚಸ್ಸಿನ ಜೊತೆ ಜೊತೆಗೆ ಸಕ್ರಿಯ ಸಂಘಟನಾ ಶಕ್ತಿಯೂ ಮುಖ್ಯವಾಗುತ್ತದೆ. ಇಲ್ಲಿ ಪ್ರಶ್ನೆ ಇರುವುದು ಪ್ರಿಯಾಂಕಾ ಗಾಂಧಿಯವರ ವೈಯಕ್ತಿಕ ವರ್ಚಸ್ಸು ಹೇಗಿದೆ ಎನ್ನುವುದಲ್ಲ, ಅವರ ಪ್ರಚಾರಗಳ ಹಿಂದೆ ಸಾಂ ಕ ಬೆನ್ನೆಲುಬು ಹೇಗಿದೆ ಎನ್ನುವುದು. ಒಂದು ವೇಳೆ ಪ್ರಿಯಾಂಕಾ ಗಾಂಧಿಯವರೇನಾದರೂ ತಾವು ಪ್ರಚಾರ ನಡೆಸುವ ಪ್ರದೇಶಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಬಯಸುತ್ತಾರೆಂದರೆ, ಅವರು ಬೇರುಮಟ್ಟದಲ್ಲಿ ಕಾಂಗ್ರೆಸ್‌ ಸಂಘಟನೆಗೆ ಪುನರ್ಜೀವ ಕೊಡಬೇಕು. ಸದ್ಯಕ್ಕಂತೂ ಕಾಂಗ್ರೆಸ್‌ ಪಕ್ಷ ಕುದುರೆಯ ಹಿಂದೆ ರಥವನ್ನು ನಿಲ್ಲಿಸುವುದನ್ನು ಬಿಟ್ಟು, ರಥದ ಹಿಂದೆ ಕುದುರೆಯನ್ನು ನಿಲ್ಲಿಸಿದೆ.

ಹಿಂದಿನ ಚುನಾವಣೆಗಳಲ್ಲಿ ಪ್ರಿಯಾಂಕಾ ಪ್ರಚಾರಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ಅವರು ಸಕ್ರಿಯ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ಭವಿಷ್ಯ ಬದಲಾಗಬಹುದಲ್ಲವೇ?
ಉತ್ತರಪ್ರದೇಶದಲ್ಲಿ ಪ್ರಿಯಾಂಕಾರದ್ದು ಮೊದಲಿನಿಂದಲೂ ಪರಿಚಿತ ಮುಖವೇ. ಅನೇಕ ವರ್ಷಗಳಿಂದ ಅವರು ತಮ್ಮ ಕುಟುಂಬದ ಕ್ಷೇತ್ರಗಳ ದೇಖರೇಖೀ ನೋಡಿಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳಿಂದ ಉತ್ತರಪ್ರದೇಶ ಕಾಂಗ್ರೆಸ್‌ನ ಬಿಲ್‌ಬೋರ್ಡ್‌ಗಳ ಮೇಲೆಲ್ಲ ಅವರದ್ದೇ ಚಹರೆ ಇರುತ್ತದೆ. ಅವರು ಈಗ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದಾರೆ ಎನ್ನುವುದಷ್ಟೇ ಬದಲಾಗಿರುವುದು. ಸತ್ಯವೇನೆಂದರೆ ಅವರು ರಾಜಕೀಯದಲ್ಲಿ ಎಂದಿನಿಂದಲೋ ಇದ್ದಾರೆ. ಹಿಂದೆಯೂ ಅವರು ಪಕ್ಷದ ಪ್ರಚಾರಗಳಲ್ಲಿ ಭಾಗಿಯಾಗಿದ್ದರು, ಆದರೆ ಆಗ ಕಾಂಗ್ರೆಸ್‌ ಕೆಟ್ಟ ಪ್ರದರ್ಶನ ನೀಡಿತು. ಹಾಗಿದ್ದರೆ, ಈ ಬಾರಿಯೇಕೆ ಅವರು ಬದಲಾವಣೆ ತಂದುಬಿಡುತ್ತಾರೆ ಎಂದು ಭಾವಿಸಬೇಕು?

ನೀವಂದಂತೆ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಸಂಘಟನಾ ಸಾಮರ್ಥ್ಯ ದುರ್ಬಲವಾಗಿದೆ. ಅಂದರೆ, ಪ್ರಿಯಾಂಕಾರ ವಿಚಾರದಲ್ಲಿ ಕಾಂಗ್ರೆಸ್‌ ಬಿಂಬಿಸುತ್ತಿರುವುದರಲ್ಲಿ ಕಾಳಿಗಿಂತ ಜೊಳ್ಳು ಜಾಸ್ತಿ ಇದೆಯೇ?
ಆ ರಾಜ್ಯದಲ್ಲಿ ತೋರಿಸಲು ಕಾಂಗ್ರೆಸ್‌ಗೆ ಬೇರೆ ಏನೂ ಇಲ್ಲವಲ್ಲ. ಪ್ರಿಯಾಂಕಾ ಪಕ್ಷಕ್ಕಂತೂ ಪಬ್ಲಿಸಿಟಿ ತಂದು ಕೊಡುತ್ತಾರೆ ಮತ್ತು ಪಾಸಿಟಿವ್‌ ಸಂದೇಶಗಳನ್ನು ನೀಡುತ್ತಾರೆ. ಆದರೆ ಪಬ್ಲಿಸಿಟಿ ಎನ್ನುವುದು ಮತಗಳಾಗಿ ಬದಲಾಗುತ್ತವೆ ಎನ್ನುವುದಕ್ಕೆ ಖಾತ್ರಿಯಿಲ್ಲ. ಚುನಾವಣೆಯಲ್ಲಿ ನಾಯಕತ್ವ ಮತ್ತು ಪಬ್ಲಿಸಿಟಿಗಿಂತಲೂ ಹೆಚ್ಚಾಗಿ, ಸಂಪನ್ಮೂಲಗಳು ಮತ್ತು ಸಂಘಟನಾ ಶಕ್ತಿಯ ಅಗತ್ಯವಿರುತ್ತದೆ. ಅಲ್ಲದೇಪಕ್ಷಗಳಿಗೆ ಬೃಹತ್‌ ಪ್ರಮಾಣದಲ್ಲಿ ದೇಣಿಗೆಯ ಅಗತ್ಯವಿರುತ್ತದೆ. ಗೆಲ್ಲುವ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವ ನಿಷ್ಠುರ-ನಿರ್ಭಾವುಕ ಲೆಕ್ಕಾಚಾರ ಬೇಕಾಗುತ್ತದೆ. ಇದನ್ನೆಲ್ಲ ಗಮನಿಸಿದಾಗ, ಕಾಂಗ್ರೆಸ್‌ ಈ ಬಾರಿ ಉತ್ತರಪ್ರದೇಶದಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎನ್ನುವುದು ಸ್ಪಷ್ಟ.

ಒಂದೋ ಕಾಂಗ್ರೆಸ್‌ ಪಕ್ಷ ತನ್ನ ಪುನರುತ್ಥಾನಕ್ಕೆ, ಸಂಘಟನೆ ಬಲವರ್ಧನೆಗೆ ಪ್ರಯತ್ನಿಸಬೇಕು. ಇಲ್ಲವೇ ಇತರೆ ಪಕ್ಷಗಳಿಗೆ ಅಡ್ಡಬರದೇ ಬಿಜೆಪಿಯನ್ನು ದುರ್ಬಲಗೊಳಿಸುವ ಪರೋಕ್ಷ ರಣತಂತ್ರಕ್ಕೆ ಮೊರೆಹೋಗಬೇಕು. ಆದರೆ ಕಾಂಗ್ರೆಸ್‌ ಎರಡೂ ಹಡಗುಗಳ ಮೇಲೆ ಕಾಲಿಡಲು ಹೊರಟಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ 5 ಪ್ರತಿಶತ ಓಟುಗಳಿಂದ 8-10 ಅಥವಾ 15 ಪ್ರತಿಶತ ಮತಗಳನ್ನು ಹೆಚ್ಚಿಸಿಕೊಂಡ ಮಾತ್ರಕ್ಕೆ ಸ್ಥಾನಗಳೇನೂ ಸಿಗುವುದಿಲ್ಲ.

ಬಿಎಸ್‌ಪಿ-ಎಸ್‌ಪಿ ಮತ್ತು ಕಾಂಗ್ರೆಸ್‌ ಜೊತೆಗೂಡಿ ಸ್ಪರ್ಧಿಸಿದರೆ ಬಿಜೆಪಿಯ ಸ್ಥಾನಗಳನ್ನು 50ಕ್ಕಿಂತಲೂ ತಗ್ಗಿಸಬಹುದಿತ್ತಲ್ಲವೇ? ಹಾಗಿದ್ದರೆ ಕಾಂಗ್ರೆಸ್‌ ಏಕೆ ಎಸ್‌ಪಿ-ಬಿಎಸ್‌ಪಿಯೊಂದಿಗೆ ಮೈತ್ರಿಮಾಡಿಕೊಳ್ಳಲಿಲ್ಲ?
ಅದ್ಯಾವ ಕಾರಣಕೆ ಅದು ಹೀಗೆ ಮಾಡುತ್ತದೋ ತಿಳಿಯದು. ಉತ್ತರಪ್ರದೇಶದಲ್ಲಿ ಏಕಾಂಗಿಯಾಗಿ ಹೋಗುವುದು ಕಾಂಗ್ರೆಸ್‌ಗೆ ವ್ಯೂಹಾತ್ಮಕವಾಗಿ ಲಾಭವೇ ಅಲ್ಲ. ಮೈತ್ರಿ ಮಾಡಿಕೊಂಡರೆ ಅನ್ಯ ಪಕ್ಷಗಳ ಜೊತೆಗೆ ರಾಜಿಮಾಡಿಕೊಳ್ಳಬೇಕಾಗುತ್ತದೆ ಎಂಬ ಚಿಂತೆ ಕಾಂಗ್ರೆಸ್‌ಗೆ ಇರಬಹುದು. ಆದರೆ ಹೀಗೆ ಮಾಡಿ ಬಿಜೆಪಿಯನ್ನು ಸೋಲಿಸುವುದೇ ತನ್ನ ಗುರಿ ಎನ್ನುವುದನ್ನು ಅದು ಅವಗಣಿಸುತ್ತಿದೆ. ಇತ್ತೀಚಿನ ರಾಜ್ಯ ಚುನಾವಣೆಗಳ ಫ‌ಲಿತಾಂಶವನ್ನು ನೋಡಿ ತಾನು ಪುನರುಜ್ಜೀವನದ ಪಥದಲ್ಲಿದ್ದೇನೆ ಎಂಬ ಭ್ರಮೆಯಲ್ಲಿದೆ ಕಾಂಗ್ರೆಸ್‌. ಲಾಭವನ್ನು ಅಧಿಕಗೊಳಿಸಬೇಕು ಎಂದರೆ ರಾಜಿ ಮಾಡಿಕೊಳ್ಳಬೇಕು, ಸ್ವಲ್ಪ ನಷ್ಟ ಅನುಭವಿಸಬೇಕು ಮತ್ತು ರಾಜಕೀಯ ಸ್ಥಾನಗಳನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ಅದು ಅರ್ಥಮಾಡಿಕೊಳ್ಳುತ್ತಿಲ್ಲ. ಒಂಟಿಯಾಗಿ ಅಖಾಡಕ್ಕಿಳಿದು ತನ್ನ ಅಭಿಯಾನಕ್ಕೇ ಅದು ಹಾನಿಮಾಡುತ್ತಿದೆ.

ಕಾಂಗ್ರೆಸ್‌, ಇತರೆ ಪಕ್ಷಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದಿದ್ದಾರೆ ಅಖೀಲೇಶ್‌ ಯಾದವ್‌…
ಇದಷ್ಟೇ ಅಲ್ಲ, ಕಾಂಗ್ರೆಸ್‌ ಮಹಾಘಟಬಂಧನದಲ್ಲೂ ತಾನೇ ಕೇಂದ್ರಬಿಂದುವಾಗಬೇಕು ಎಂಬ ತಪ್ಪು ಸಂದೇಶಗಳನ್ನು ಕಳುಹಿಸುತ್ತಿದೆ. ಚುನಾವಣಾ ಪೂರ್ವ ಮೈತ್ರಿಯ ಬಗ್ಗೆ ಚರ್ಚೆ ಮಾಡಲೂ ಸಿದ್ಧವಿಲ್ಲದ ಪಕ್ಷದೊಡನೆ ಅದ್ಯಾರು ಕೆಲಸ ಮಾಡಲು ಬಯಸುತ್ತಾರೋ ನೀವೇ ಹೇಳಿ?
(2005ರಲ್ಲಿ ಭಾರತಕ್ಕೆ ಬಂದ ಬೆಲ್ಜಿಯಂ ಮೂಲದ ಡಾ. ಗಿಲ್ಲೆಸ್‌ ವರ್ನಿಯರ್ಸ್‌ ಉತ್ತರ ಪ್ರದೇಶದ ರಾಜಕೀಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಸಕ್ತ ಅಶೋಕಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿರುವ ಅವರು, ಸಮಾಜವಾದಿ ಪಕ್ಷದ ಬೆಳವಣಿಗೆಯ ಬಗ್ಗೆ ಪಿಎಚ್‌.ಡಿ. ಪದವಿಯನ್ನೂ ಪಡೆದಿದ್ದಾರೆ.)

ಸಂದರ್ಶನ
ಡಾ. ಗಿಲ್ಲೆಸ್‌ ವನೀಯರ್ಸ್‌, ರಾಜಕೀಯ ವಿಶ್ಲೇಷಕ

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.