ಜೆಟ್ ಆಡಳಿತ ಮಂಡಳಿಗೆ ನರೇಶ್ ರಾಜೀನಾಮೆ
Team Udayavani, Mar 26, 2019, 6:00 AM IST
ಹೊಸದಿಲ್ಲಿ: ಸಾಲದ ಸುಳಿಯಲ್ಲಿರುವ ಜೆಟ್ ಏರ್ವೇಸ್ನ ಆಡಳಿತ ಮಂಡಳಿಯಿಂದ ನರೇಶ್ ಗೋಯಲ್, ಪತ್ನಿ ಅನಿತಾ ಗೋಯಲ್ ಹೊರ ಬಂದಿದ್ದಾರೆ. ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟ ಕಂಪೆನಿಯ ಆಡಳಿತ ಮಂಡಳಿಯನ್ನು ನಿರ್ವಹಿಸಲಿವೆ. ಈ ಬೆಳವಣಿಗೆಯಿಂದಾಗಿ ತಕ್ಷಣದ ಮೊತ್ತವಾಗಿ 1,500 ಕೋಟಿ ರೂ. ಸಂಸ್ಥೆಗೆ ದೊರೆಯಲಿದೆ.
ಗೋಯಲ್ ದಂಪತಿ ಜತೆಗೆ ಎತಿಹಾದ್ ವಿಮಾನಯಾನ ಸಂಸ್ಥೆಯ ನಾಮ ನಿರ್ದೇಶಿತ ನಿರ್ದೇಶಕ ಕೆವಿನ್ ನೈಟ್ ಕೂಡ ರಾಜೀನಾಮೆ ನೀಡಿದ್ದಾರೆ. ಎತಿ ಹಾದ್ ವಿಮಾನಯಾನ ಸಂಸ್ಥೆ ಜೆಟ್ನ ಶೇ.24ರಷ್ಟು ಷೇರನ್ನು ಖರೀದಿಸಿದೆ. ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟ ವಿಮಾನಯಾನ ಸಂಸ್ಥೆಯ ಆಸ್ತಿಯನ್ನು ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಜತೆಗೆ ಹೊಸ ಹೂಡಿಕೆದಾರರನ್ನು ಶೋಧಿಸಿ, ಅಂತಿಮ ಪಡಿಸಲಿದೆ. ಸಾವಿರಾರು ಮಂದಿಯ ಉದ್ಯೋಗ ನಷ್ಟವಾಗಕೂಡದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.