ಮಾಹೆ ವಾಣಿಜ್ಯ ವಿಭಾಗ: ಒಡಂಬಡಿಕೆಗೆ ಸಹಿ
Team Udayavani, Mar 26, 2019, 6:30 AM IST
ಉಡುಪಿ: ಮಣಿಪಾಲ ಮಾಹೆ ವಾಣಿಜ್ಯಶಾಸ್ತ್ರ ವಿಭಾಗವು ಜಾಗತಿಕ ಪ್ರಸಿದ್ಧವಾದ ತೆರಿಗೆ, ಲೆಕ್ಕ ಪತ್ರ ಮತ್ತು ಲೆಕ್ಕಪರಿಶೋಧನೆ ಕಂಪೆನಿಯಾದ ಅನ್ಸ್$rì ಆ್ಯಂಡ್ ಯಂಗ್‌ನೊಂದಿಗೆ ಒಡಂಬಡಿಕೆ ಪತ್ರಕ್ಕೆ ಶನಿವಾರ ಸಹಿ ಹಾಕಿದೆ.
“ಅಂತಾರಾಷ್ಟ್ರೀಯ ತೆರಿಗೆ ಮತ್ತು ತಂತ್ರಜ್ಞಾನ’ ವಿಷಯದ ವಾಣಿಜ್ಯ ಸ್ನಾತಕೋತ್ತರ ಪದವಿ ಮತ್ತು ಹಣಕಾಸು ಅರ್ಥಶಾಸ್ತ್ರದ ಎಂಎಸ್‌ಸಿ ಪದವಿಗಳನ್ನು ಆರಂಭಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.
ಮಾಹೆ ಕುಲಸಚಿವ ಡಾ| ನಾರಾಯಣ ಸಭಾಹಿತ್ ಮತ್ತು ಅನ್ಸ್$rì ಆ್ಯಂಡ್ ಯಂಗ್ ಹಿರಿಯ ಪ್ರಬಂಧಕಿ ಲಲಿತಾ ಎನ್. ಅವರು ಒಪ್ಪಂದಕ್ಕೆ ಸಹಿ ಹಾಕಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಸಂದೀಪ್ ಶೆಣೈ, ಡಾ| ವಿಕ್ರಮ್ ಬಾಳಿಗ, ಪ್ರೊ| ರವೀಂದ್ರ ಶೆಣೈ, ಪ್ರೊ| ಡೇನಿಯಲ್ ಫ್ರಾಂಕ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.