ನನ್ನ ಹಣ ಬಳಸಿ, ಜೆಟ್ ಏರ್ ವೇಸ್ ಉಳಿಸಿ : ವಿಜಯ್ ಮಲ್ಯ
Team Udayavani, Mar 26, 2019, 11:12 AM IST
ಹೊಸದಿಲ್ಲಿ : “ನನ್ನ ಹಣ ತೆಗೆದುಕೊಳ್ಳಿ; ಸಾಲದ ಹೊರೆಯಿಂದ ನಲುಗುತ್ತಿರುವ ಜೆಟ್ ಏರ್ ವೇಸ್ ಸಂಸ್ಥೆಯನ್ನು ಪಾರು ಮಾಡಿ’ ಎಂದು ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನಗೈದು ಇದೀಗ ಲಂಡನ್ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿರುವ ದೇಶಭ್ರಷ್ಟ ಅರ್ಥಿಕ ಅಪರಾಧಿ ವಿಜಯ್ ಮಲ್ಯ ಹೇಳಿದ್ದಾರೆ.
“ನಾನಿದನ್ನು ಪುನರುಚ್ಚರಿಸುತ್ತಿದ್ದೇನೆ; ನನ್ನ ನಗದು ಸೊತ್ತುಗಳನ್ನು ನಾನು ಮಾನ್ಯ ಕರ್ನಾಟಕ ಹೈಕೋರ್ಟ್ ಮುಂದೆ ಇರಿಸಿದ್ದೇನೆ; ನನ್ನ ಬ್ಯಾಂಕ್ ಸಾಲ ಮತ್ತು ಇತರ ಸಾಲಗಾರರಿಗೆ ನಾನು ಇರಿಸಿರುವ ಬಾಕಿಯನ್ನು ಪಾವತಿಸಲು ಅದನ್ನು ಉಪಯೋಗಿಸಿ; ಜೆಟ್ ಏರ್ ವೇಸ್ ಸಂಸ್ಥೆಯನ್ನು ಪಾರುಗೊಳಿಸಲು ಬೇರೇನೂ ಇಲ್ಲದಿದ್ದಲ್ಲಿ ನನ್ನ ಈ ಹಣವನ್ನೇ ಬಳಸಿಕೊಳ್ಳಿ’ ಎಂದು ವಿಜಯ ಮಲ್ಯ ಟ್ವೀಟ್ ಮಾಡಿದ್ದಾರೆ.
“ಭಾರತದ ಪಿಎಸ್ಯು ಬ್ಯಾಂಕುಗಳು ಜೆಟ್ ಏರ್ ವೇಸ್ ಸಂಸ್ಥೆಯನ್ನು ಪಾರುಗೊಳಿಸಲು ನೆರವಾಗಿವೆ ಎಂಬುದನ್ನು ತಿಳಿದು ನನಗೆ ಸಂತಸವಾಗಿದೆ. ಇದರಿಂದಾಗಿ ಅನೇಕ ಉದ್ಯೋಗ, ಸಂಪರ್ಕ ವ್ಯವಸ್ಥೆ ಮತ್ತು ಉದ್ಯಮ ಉಳಿಯಲು ಸಾಧ್ಯವಾಗಿದೆ. ಕಿಂಗ್ ಫಿಶರ್ ಸಂದರ್ಭದಲ್ಲಿ ಬ್ಯಾಂಕುಗಳು ಇದನ್ನೇ ಮಾಡಿರಬೇಕಿತ್ತು ಎಂದು ಅನ್ನಿಸುತ್ತಿದೆ’ ಎಂದು ಮಲ್ಯ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್: ಏನಿದರ ಅಸಲೀಯತ್ತು?
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.