ಸಂಸದ ಪ್ರತಾಪ್ ಸಿಂಹ ಆದಾಯ 6.03 ಲಕ್ಷ ರೂ.
Team Udayavani, Mar 26, 2019, 1:04 PM IST
ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ 2018-19ನೇ ಹಣಕಾಸು ವರ್ಷದಲ್ಲಿನ ಒಟ್ಟು ಆದಾಯ 6,03,937 ರೂ., ಪತ್ನಿ ಡಾ.ಅರ್ಪಿತ ಜೆ.ಎಸ್.ಅವರ ಆದಾಯ 3,01,219 ರೂ. ಎಂದು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಕನ್ನಡ ಪತ್ರಿಕೆಯ ಅಂಕಣಕಾರ ಮತ್ತು ಬರಹಗಾರರಾಗಿರುವ ಪ್ರತಾಪ್ ಸಿಂಹ ಅವರಿಗೆ ಅಂಕಣಕಾರರ ಗೌರವಧನ ಮತ್ತು ಸಂಸದರ ವೇತನ ಆದಾಯದ ಮೂಲವಾದರೆ, ಅವರ ಪತ್ನಿ ಡಾ.ಅರ್ಪಿತ ಅವರಿಗೆ ಮೈಸೂರಿನ ಪ್ರೀಮಿಯರ್ ರೀಟೇಲ್ ಸಂಸ್ಥೆಯಲ್ಲಿನ ವ್ಯಾಪಾರ ಆದಾಯ ಮೂಲವಾಗಿದೆ.
ಪ್ರತಾಪ್ ಸಿಂಹ ಕೈಯಲ್ಲಿ 28 ಸಾವಿರ ರೂ. ನಗದು, ಪತ್ನಿ ಅರ್ಪಿತ ಅವರ ಬಳಿ 25 ಸಾವಿರ ರೂ. ನಗದು ಇದೆ. ಬೆಂಗಳೂರಿನ ಲೇಡಿ ಕರ್ಜನ್ ರಸ್ತೆಯಲ್ಲಿನ ಎಸ್‌ಬಿಐ ಬ್ಯಾಂಕ್ ಶಾಖೆಯ ಖಾತೆಯಲ್ಲಿ 40,330 ರೂ., ನವ ದೆಹಲಿ ಪಾರ್ಲಿಮೆಂಟ್ ಹೌಸ್‌ನ ಎಸ್‌ಬಿಐ ಶಾಖೆಯ ಖಾತೆಯಲ್ಲಿ 1,91,295 ರೂ. ಇದೆ.
ಬೆಂಗಳೂರಿನ ಕರ್ನಾಟಕ ಜರ್ನಲಿಸ್ಟ್ ಸೊಸೈಟಿಯಲ್ಲಿ 500 ರೂ.ಗಳ ಷೇರು ಹೊಂದಿದ್ದಾರೆ. ಬೆಂಗಳೂರಿನ ಸರ್ ಎಂ.ವಿ.ಕೋ ಆಫ್ ಲಿ.ನಲ್ಲಿ 1200 ರೂ. ಷೇರು, ಬೆಂಗಳೂರಿನ ಮಾತಾಜಿ ವಿವಿಧೋದ್ದೇಶ ಸೌಹಾರ್ದ ಸಹಕಾರ ನಿಯಮಿತದಲ್ಲಿ 1000ರೂ.ಗಳ ಷೇರು ಹೊಂದಿದ್ದಾರೆ.
ಅರ್ಪಿತ ಅವರ ಹಿನಕಲ್‌ನ ಕೆನರಾಬ್ಯಾಂಕ್ ಶಾಖೆಯ ಖಾತೆಯಲ್ಲಿ 40,440 ರೂ. ಇದೆ.
ಸೋಮವಾರ ಪೇಟೆಯಲ್ಲಿ ಮೋಹನ್ ರಾಂ ಎಂಬುವವರಿಗೆ ಮನೆ ಬಾಡಿಗೆಗಾಗಿ 2 ಲಕ್ಷ ಮುಂಗಡ ನೀಡಿದ್ದರೆ, ಅರ್ಪಿತ ಅವರು 2,27,078 ರೂ. ನೀಡಿದ್ದಾರೆ.
ಪ್ರತಾಪ್ ಸಿಂಹ 11,09,697 ರೂ. ಮೌಲ್ಯದ ಚರಾಸ್ತಿ, 63,14,697 ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಹೊಂದಿದ್ದರೆ, ಅರ್ಪಿತ ಸಿಂಹ ಅವರು 40,32,435 ರೂ. ಮೌಲ್ಯದ ಚರಾಸ್ತಿ, 1,21,82,435 ರೂ. ಮೌಲ್ಯದ ಸ್ವಯಾರ್ಜಿತ ಸ್ವತ್ತುಗಳನ್ನು ಹೊಂದಿದ್ದಾರೆ.
ಪ್ರತಾಪ್ ಸಿಂಹ ಹೆಸರಲ್ಲಿ 2011ರ ಮಾಡೆಲ್‌ನ 3,25,545 ರೂ. ಮೌಲ್ಯದ ಹುಂಡೈ 120 ಕಾರು, ಅರ್ಪಿತ ಅವರ ಹೆಸರಲ್ಲಿ 2018ರ ಮಾಡೆಲ್‌ನ 24,66,995 ರೂ. ಮೌಲ್ಯದ ಕ್ರಿಸ್ಟಾ 2.4 ಕಾರು ಇದೆ. ಪ್ರತಾಪ್ ಸಿಂಹ ಅವರ ಬಳಿ ಯಾವುದೇ ಚಿನ್ನಾಭರಣವಿಲ್ಲ. ಅರ್ಪಿತ ಅವರ ಬಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ.
ಪ್ರತಾಪ್ ಸಿಂಹ ಸರಸ್ವತಿಪುರಂನ ಎಸ್‌ಬಿಐ ಪರ್ಸನಲ್ ಬ್ಯಾಂಕಿಂಗ್ ಶಾಖೆಯಲ್ಲಿ ಚಿನ್ನದ ಮೇಲೆ 3,53,866 ರೂ. ಸಾಲಪಡೆದಿದ್ದರೆ, ಅರ್ಪಿತ ಸಿಂಹ ಅವರು, ಶ್ರೀ ಕನ್ಯಾಕಾ ಪರಮೇಶ್ವರಿ ಕೋ-ಆಫ್ ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ 2.35 ಲಕ್ಷ ರೂ. ಸಾಲ ಪಡೆದಿದ್ದಾರೆ. ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ 14,62,839 ರೂ. ಕಾರು ಸಾಲ ಪಡೆದಿದ್ದಾರೆ.
ಬೆಂಗಳೂರಿನ ಶೇಷಾಚಲ ಎಂಬುವವರಿಗೆ 16,56,355 ರೂ. ಸಾಲ ಕೊಡಬೇಕಿದೆ. ಅರ್ಪಿತ ಅವರು ಪತಿ ಪ್ರತಾಪ್ ಸಿಂಹ ಅವರಿಗೇ 2,3,078 ರೂ. ಸಾಲ ಪಾವತಿಸಬೇಕಿದೆ. ಸೆಂತಿಲ್ ಕುಮಾರ್ ಅವರಿಗೂ 4.50 ಲಕ್ಷ ರೂ. ಸಾಲ ಕೊಡಬೇಕಿದೆ. ಪ್ರತಾಪ್ ಸಿಂಹ ಒಟ್ಟು 23,64,087 ರೂ. ಸಾಲ, ಅರ್ಪಿತ ಸಿಂಹ 23,74,917 ರೂ. ಸಾಲ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.