ಕಾಲಿಗೊಂದು ಕೂಲರ್
ಬೇಸಗೆಯ ಸೆಕೆಗೆ ಫ್ಲಾಟ್ ಸ್ಯಾಂಡಲ್ಸ್
Team Udayavani, Mar 27, 2019, 6:00 AM IST
ಬೇಸಿಗೆ ಶುರುವಾಗಿದ್ದೇ ತಡ, ನಾವು ಶೂಗಳಿಂದ ಆದಷ್ಟು ದೂರವಿರಲು ಶುರು ಮಾಡುತ್ತೇವೆ. ಈ ಸೆಕೆಯಲ್ಲಿ ಶೂ – ಸಾಕ್ಸ್ ತೊಟ್ಟರೆ ಪಾದಗಳಿಂದ ದುರ್ವಾಸನೆ ಬರುವುದು ಖಚಿತ. ಬೆವರು, ದುರ್ವಾಸನೆ, ಕಿರಿಕಿರಿ, ಇವೆಲ್ಲಕ್ಕೂ ಗುಡ್ ಬೈ ಹೇಳಬೇಕು ಎಂದಾದರೆ ಚಪ್ಪಲಿಗಳನ್ನು ತೊಡುವುದು ಉತ್ತಮ. ಚಪ್ಪಲಿ ಎಂದರೆ ಬರೀ ಹವಾಯಿ ಚಪ್ಪಲಿ ಅಲ್ಲ! ಸ್ಟೈಲಿಶ್ ಮತ್ತು ಟ್ರೆಂಡಿ ಫ್ಲಾಟ್ ಸ್ಯಾಂಡಲ್ ಗಳು, ಸದ್ಯಕೆ ಟ್ರೆಂಡ್ ಆಗುತ್ತಿರುವ ಸಮ್ಮರ್ ಫುಟ್‌ವೇರ್(ಬೇಸಗೆಯ ಪಾದರಕ್ಷೆಗಳು). ಪಾದಗಳಿಗೆ ಉಸಿರಾಡಲು ಇವಕ್ಕಿಂತ ಒಳ್ಳೆಯ ಪಾದರಕ್ಷೆ ಬೇರೆ ಇಲ್ಲ. ಓಪನ್ ಶೂಸ್, ಚಪ್ಪಲಿ, ಫ್ಲಿಪ್ ಫ್ಲಾಕ್ಸ್, ಸ್ಯಾಂಡಲ್ಸ… ಅಥವಾ ಗ್ಲಾಡಿಯೇಟರ್ ತೊಡಲು ಇದು ಒಳ್ಳೆಯ ಸಮಯ. ಎಲ್ಲಕ್ಕಿಂತ ಹೆಚ್ಚಾಗಿ ಫ್ಲಾಟ್ ಸ್ಯಾಂಡಲ್‌ಗಳು ಬೇಸಗೆಗೆ ಅತ್ಯಂತ ಸೂಕ್ತವಾದುದು.
ಕಂಫರ್ಟ್ ಮತ್ತು ಸ್ಟೈಲಿಶ್
ಪಾಶ್ಚಾತ್ಯ ಹಾಗೂ ಸಾಂಪ್ರದಾಯಿಕ, ಎರಡೂ ಪ್ರಕಾರದ ಉಡುಗೆಗಳ ಜೊತೆ ಫ್ಲಾಟ್ ಸ್ಯಾಂಡಲ್‌ಗಳು ಚೆನ್ನಾಗಿ ಕಾಣುತ್ತವೆ. ಹಾಗಾಗಿ ಇವನ್ನು ಇವುಗಳನ್ನು ಬೀಚ್, ಪೂಲ್ ಸೈಡ್, ಶಾಪಿಂಗ್, ಔಟಿಂಗ್, ಪಾರ್ಟಿ, ಸಿನಿಮಾ, ಮತ್ತಿತರ ಜಾಗಗಳಿಗೂ ಧರಿಸಿಕೊಂಡು ಹೋಗಬಹುದು. ಇವುಗಳನ್ನು ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ತೊಡಬಹುದು. ಕಂಫರ್ಟ್ ಮತ್ತು ಸ್ಟೈಲ್ ಎರಡನ್ನೂ ನೀಡುವ ಈ ಫ್ಲಾಟ್ ಸ್ಯಾಂಡಲ್ಸ…ಗೆ ಬೇಸಗೆಯಲ್ಲೇ ಬಹಳ ಬೇಡಿಕೆ ಇರುವುದು.
ಉಡುಗೆಗೆ ಹೋಲುವಂಥ ಬಣ್ಣದ ಫ್ಲಾಟ್ ಸ್ಯಾಂಡಲ್ಸ…, ತೊಟ್ಟ ಬೆಲ್ಟ… (ಸೊಂಟ ಪಟ್ಟಿ), ವಾಚ್ (ಕೈ ಗಡಿಯಾರ), ಬ್ಯಾಗ್, ಆಭರಣ ಮತ್ತಿತರ ಆಕ್ಸೆಸರೀಸ್‌ಗೆ ಹೋಲುವಂಥ ಫ್ಲಾಟ್ ಸ್ಯಾಂಡಲ್ಸ… ಅಥವಾ ಕೇಶದ ಬಣ್ಣ (ಹೇರ್ ಕಲರ್ ಮಾಡಿದ್ದರೆ)ಕ್ಕೆ ಹೋಲುವಂಥ ಫ್ಲಾಟ್ ಸ್ಯಾಂಡಲ್ಸ…ಅನ್ನು ತೊಟ್ಟು ಸ್ಟೈಲ್ ಸ್ಟೇಟ್ಮೆಂಟ್ ಮಾಡಬಹುದು!
ಜತೆಗೆ ಸಾಕ್ಸ್ ಬೇಡ
ಇಂಥ ಚಪ್ಪಲಿಗಳಿಗೆ ಆ್ಯಂಕಲ್ ಸಪೋರ್ಟ್ ಇರುವುದಿಲ್ಲ. ಅಂದರೆ ಪಾದದ ಗಂಟಿನ ಸುತ್ತ ಯಾವುದೇ ಸ್ಟ್ರಾಪ್, ಬಕಲ…, ಎಲಾಸ್ಟಿಕ್ ಅಥವಾ ಬೆಲ್ಟ… ಇರುವುದಿಲ್ಲ. ಹಾಗಾಗಿ ನಡೆಯುವಾಗ ಪಟಾ- ಪಟಾ ಎಂಬ ಸದ್ದು ಬರುತ್ತದೆ. ಒಂದು ವಿಷಯ ಗಮನದಲ್ಲಿರಲಿ. ಇಂಥ ಫ್ಲಾಟ್ ಸ್ಯಾಂಡಲ್ಸ… ತೊಟ್ಟಾಗ ಕಾಲ ಬೆರಳುಗಳು ಕಾಣುವುದರಿಂದ ಅಂದದ ನೈಲ್ ಪೈಂಟ್ (ಉಗುರು ಬಣ್ಣ) ಹಚ್ಚಬಹುದು ಅಥವಾ ನೈಲ್ ಆರ್ಟ್ ಮಾಡಬಹುದು. ಇಂಥ ಫ್ಲಾಟ್ ಸ್ಯಾಂಡಲ್ಸ… ಜೊತೆ ಯಾವುದೇ ಕಾರಣಕ್ಕೆ ಸಾಕ್ಸ್ ತೊಡುವ ಹಾಗಿಲ್ಲ. ಎಷ್ಟೇ ತೆಳ್ಳಗಿನ ಸಾಕ್ಸ್ ಆದರೂ ಇವುಗಳ ಜೊತೆ ತೊಡಬೇಡಿ. ಸಾಕ್ಸ್ ತೊಟ್ಟರೆ, ಸ್ಯಾಂಡಲ್ಸ… ತೊಡುವ ಉದ್ದೇಶವೇ ತಪ್ಪಾಗುತ್ತದೆ.
ತೊಡುವುದು ಕಳಚುವುದು ಎರಡೂ ಸುಲಭ
ಫ್ಲಾಟ್ ಸ್ಯಾಂಡಲ್‌ಗಳನ್ನು ಸೀರೆ, ಚೂಡಿದಾರ, ಲಂಗ, ಪ್ಯಾಂಟ್, ಶಾರ್ಟ್ ಡ್ರೆಸ್ ಎಲ್ಲದರ ಜೊತೆಗೂ ಹಾಕಿಕೊಳ್ಳಬಹುದು. ಇಂಥ ಪಾದರಕ್ಷೆಗಳನ್ನು ತೊಡುವುದೂ ಸುಲಭ, ಕಳಚುವುದೂ ಸುಲಭ. ಫ್ಲಾಟ್ ಸ್ಯಾಂಡಲ್‌ಗಳಲ್ಲಿ ಲೇಸ್ ವರ್ಕ್, ಸ್ಟ್ರಾಕ್ಸ್, ದಾರಗಳು, ಎಂಬ್ರಾಯxರಿ, ಮಿರರ್ ವರ್ಕ್ ಮತ್ತು ಊಹಿಸಲೂ ಆಗದಷ್ಟು ವಿಭಿನ್ನ ಬಣ್ಣಗಳು, ವಿನ್ಯಾಸಗಳು ಮತ್ತು ನಮೂನೆಗಳಿವೆ!
ಸ್ವಂತ ಡಿಸೈನ್
ಇವುಗಳ ಮೇಲೆ ನಾವೇ- ರಿಬ್ಬನ್, ಬೋ, ಬಟನ್ (ಗುಬ್ಬಿ), ಕನ್ನಡಿಯಂಥ ವಸ್ತುಗಳನ್ನು ಅಂಟಿಸಿ ಅಥವಾ ಹೊಲಿದು ಪ್ರಯೋಗ ಮಾಡಿ ನೋಡಬಹುದು. ಆದರೆ ನೆನಪಿರಲಿ, ಬಲ ಕಾಲಿನ ಚಪ್ಪಲಿ ಮೇಲಿನ ವಿನ್ಯಾಸ ಎಡ ಕಾಲಿನ ಚಪ್ಪಲಿಯ ಮೇಲಿನ ವಿನ್ಯಾಸಕ್ಕೆ ಹೋಲಬೇಕು. ಇಲ್ಲವಾದರೆ ಮರೆತುಬಿಟ್ಟು ಬೇರೆ – ಬೇರೆ ಚಪ್ಪಲಿಗಳನ್ನು ತೊಟ್ಟು ಬಂದಿದ್ದೀರಾ ಎಂದುಕೊಳ್ಳಬಹುದು ಜನ!
ಅದಿತಿಮಾನಸ ಟಿ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.