ಐಸ್‌ಕ್ಯಾಂಡಿ ಪ್ರಕರಣ: ಮತ್ತೆ ಹಲವರು ಆಸ್ಪತ್ರೆಗೆ
Team Udayavani, Mar 27, 2019, 6:35 AM IST
ಕುಂದಾಪುರ/ಸಿದ್ದಾಪುರ: ಐಸ್‌ಕ್ಯಾಂಡಿ ಸೇವಿಸಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರವೂ ವಿವಿಧ ಆಸ್ಪತ್ರೆಗಳಿಗೆ ಮತ್ತಷ್ಟು ಮಂದಿ ದಾಖಲಾಗಿದ್ದಾರೆ. ಇದೇ ವೇಳೆ ಕ್ಯಾಂಡಿ ತಯಾರಿಸಿದ ಸಂಸ್ಥೆಯ ಮಾಲಕ ಹಾಗೂ ಮೂವರು ಕೆಲಸಗಾರರ ವಿರುದ್ಧ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.
ಸೋಮವಾರ 100ಕ್ಕೂ ಅಧಿಕ ಮಂದಿ
ಜ್ವರ, ವಾಂತಿ ಭೇದಿಯಿಂದ ಬಳಲಿ ದಾಖಲಾಗಿದ್ದರು. ಹೆಂಗವಳ್ಳಿ ಗ್ರಾಮದ ಹೆಂಗವಳ್ಳಿ, ತೊಂಭತ್ತು, ಹಣೆಜೆಡ್ಡು, ಬೆಳ್ವೆ ಗ್ರಾಮದ ಬೆಳ್ವೆ, ಗುಮ್ಮೊàಲ, ಗೋಳಿಯಂಗಡಿ, ಆರ್ಡಿ ಪರಿಸರದಲ್ಲಿ ಶನಿವಾರ ಹಾಗೂ ರವಿವಾರ ಬೈಕ್‌ಗಳಲ್ಲಿ ಬಂದ ಹೊರ ಜಿಲ್ಲೆಯ ವ್ಯಕ್ತಿಗಳು ಮನೆ ಮನೆಗೆ ತೆರಳಿ ಐಸ್‌ಕ್ಯಾಂಡಿ ಮಾರಾಟ ಮಾಡಿದ್ದರು. ಅವುಗಳನ್ನು ಸೇವಿಸಿದ ಹಿರಿಯರು, ಮಕ್ಕಳು ಅಸ್ವಸ್ಥಗೊಂಡು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದರೆ, ಮತ್ತೆ ಕೆಲವರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
ಮತ್ತೆ ಹಲವರು ಆಸ್ಪತ್ರೆಗೆ
ಬಿಲ್ಲಾಡಿ, ಹೆಗ್ಗುಂಜೆ, ನಂಚಾರು, ಹೆಸ್ಕಾಂದ, ಆವರ್ಸೆ, ಹಿಲಿಯಾಣ, ಕೇಚೂರು ಪರಿಸರದ ಜನರು ಸೋಮವಾರ ಮತ್ತು ಮಂಗಳವಾರ ಕೂಡ ಆವರ್ಸೆ ಸೇರಿದಂತೆ ಉಡುಪಿಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಐವರು ಉಡುಪಿ, 4 ಬೆಳ್ವೆ, 6 ಮಂದಿ ಕುಂದಾಪುರ, ಕೊರ್ಗಿಯಲ್ಲಿ 7 ಮಂದಿ, ಬಿದ್ಕಲ್‌ಕಟ್ಟೆಯಲ್ಲಿ 8 ಮಂದಿ ಹೊಸದಾಗಿ ಚಿಕಿತ್ಸೆ ಪಡೆದಿದ್ದಾರೆ. ಬೆಳ್ವೆಯಲ್ಲಿ 25 ಮಂದಿ ಚಿಕಿತ್ಸೆ ಪಡೆದಿದ್ದು ಐವರು ಹೊಸದಾಗಿ ಚಿಕಿತ್ಸೆ ಪಡೆದಿದ್ದು 20 ಮಂದಿ ಮರುತಪಾಸಣೆಗೆ ಆಗಮಿಸಿದ್ದರು ಎಂದು ಕೇಂದ್ರದ ವೈದ್ಯಾಧಿಕಾರಿ ಡಾ| ರಾಜೇಶ್ವರಿ ತಿಳಿಸಿದ್ದಾರೆ.
ಕುಂದಾಪುರದಲ್ಲಿ 11 ಮಕ್ಕಳು, 6 ಮಹಿಳೆಯರು, ಉಡುಪಿಯಲ್ಲಿ 5 ಮಕ್ಕಳು, ಐವರು ದೊಡ್ಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆವರ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಲ್ಲಾಡಿ, ಹೆಗ್ಗುಂಜೆ, ನಂಚಾರು, ಹೆಸ್ಕಾಂದ, ಆವರ್ಸೆ, ಹಿಲಿಯಾಣ, ಕೇಚೂರು ಸುತ್ತ ಮುತ್ತಲಿನ ಮಕ್ಕಳು ಸೇರಿದಂತೆ 9 ಮಂದಿ ಐಸ್‌ಕ್ಯಾಂಡಿ ತಿಂದು ಜ್ವರ, ವಾಂತಿ ಬೇದಿಯಿಂದ ಬಳಲಿ ಸೋಮವಾರ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಮಂಗಳವಾರ ಕೂಡ ಮಕ್ಕಳು ಸೇರಿದಂತೆ ಮತ್ತೆ 15ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ ಎಂದು ವೈದ್ಯಾಧಿಕಾರಿ ಡಾ| ಸವಿತಾ ತಿಳಿಸಿದ್ದಾರೆ.
ಆರೋಗ್ಯಾಧಿಕಾರಿ ಭೇಟಿ
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಓಂಪ್ರಕಾಶ್ ಕಟ್ಟಿಮನಿ, ಕುಂದಾಪುರ ತಾಲೂಕು ಆರೋಗ್ಯಾಧಿ ಕಾರಿ ಡಾ| ನಾಗಭೂಷಣ್ ಉಡುಪ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪೆಡೆ°àಕರ್, ಶಂಕರನಾರಾಯಣ ಮತ್ತು ಅಮಾಸೆಬೈಲು ಠಾಣೆಯ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.
ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ವೆ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ. ಸತೀಶ ಕಿಣಿ ಬೆಳ್ವೆ ಅವರು ಕುಂದಾಪುರ ತಾಲೂಕು ಹಾಗೂ ಬೆಳ್ವೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಬಗ್ಗೆ ಭರವಸೆ ನೀಡಿದರು.
ಪ್ರಕರಣ ದಾಖಲು
ತೊಂಭತ್ತು ನಿವಾಸಿ ಚಿತ್ರಾ ಶೆಟ್ಟಿಗಾರ್ ಅವರು ನೀಡಿದ ದೂರಿನನ್ವಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಐಸ್‌ಕ್ಯಾಂಡಿ ಮಾರಾಟ ಮಾಡಿವರ ಮೇಲೆ ಮತ್ತು ತಯಾರಿಸಿದ ಫ್ಯಾಕ್ಟರಿಯ ಮೇಲೆ ಕೇಸು ದಾಖಲಾಗಿದೆ.
ಪೊಲೀಸರು ಸಂಶಯದ ಮೇಲೆ ಒಬ್ಬನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಮಲ್ಪೆಯ ನಾಲ್ವರ ವಿರುದ್ಧ ಕೇಸು ದಾಖಲು
ಕುಂದಾಪುರ: ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಅವರು ಘಟನೆ ನಡೆದ ಕೂಡಲೇ ಶಂಕರನಾರಾಯಣ, ಅಮಾಸೆಬೈಲು, ಕಂಡೂÉರು ಠಾಣೆಗಳ ಪೊಲೀಸರ ತಂಡ ರಚಿಸಿ ಐಸ್ ಕ್ಯಾಂಡಿ ಮಾರಾಟ ಮಾಡಿದವರ ಮಾಹಿತಿ ಸಂಗ್ರಹಿಸಿದರು.
ಮಲ್ಪೆ ಕಲ್ಮಾಡಿಯ ಐಸ್‌ಕ್ಯಾಂಡಿ ತಯಾರಿಕಾ ಸಂಸ್ಥೆಯ ಮಾಲಕ
ಹಾಗೂ ಮೂವರು ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ನಡೆಸಿ ಬಿಡಲಾಗಿದ್ದು ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಪತ್ರಿಕೆಗೆ ಮಾಹಿತಿ ನೀಡಿದರು. ಐಸ್‌ಕ್ಯಾಂಡಿ ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿಂದ ಕೊಂಡೊಯ್ದ ಮಾರಾಟಗಾರರು ಇನ್ನೆಲ್ಲಿ ಮಾರಿ¨ªಾರೆ ಎಂದು ತಿಳಿಯಬೇಕಿದೆ.
ಮುದ್ರಾಡಿ ಪರಿಸರದ 30 ಮಂದಿ ಅಸ್ವಸ್ಥ
ಹೆಬ್ರಿ: ಹೆಬ್ರಿ ಸಮೀಪದ ಮುದ್ರಾಡಿ ಬಚ್ಚಪ್ಪುವಿನಲ್ಲಿ ಐಸ್‌ಕ್ಯಾಂಡಿ ಸೇವಿಸಿದ 30ಕ್ಕೂ ಅಧಿಕ ಮಂದಿ ವಾಂತಿ ಭೇದಿಯಿಂದ ಬಳಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಸಂಭವಿಸಿದೆ.
ಮುದ್ರಾಡಿ, ನೆಲ್ಲಿಕಟ್ಟೆ, ಪೆರ್ಮಣ್ಣು , ಬಚ್ಚಪ್ಪು ಜನವಸತಿ ಪರಿಸರದಲ್ಲಿ ಸೋಮವಾರ ಬೈಕ್‌ಗಳಲ್ಲಿ ಬಂದ ಹೊರ ಜಿಲ್ಲೆಯ ವ್ಯಕ್ತಿಗಳು ಮನೆ ಮನೆಗೆ ತೆರಳಿ ಐಸ್‌ಕ್ಯಾಂಡಿ ಮಾರಾಟ ಮಾಡಿದ್ದರು.
ಪ್ರತಿಯೊಬ್ಬರ ಮೇಲೂ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ಡಿಎಚ್ ಗಮನಕ್ಕೆ ತರಲಾಗಿದೆ ಎಂದು ವೈಧ್ಯಾಧಿಕಾರಿ ಡಾ| ನರಸಿಂಹ ನಾಯಕ್ ತಿಳಿಸಿದ್ದಾರೆ.
ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ಮುದ್ರಾಡಿ ಗ್ರಾಂ.ಪಂ. ಅಧ್ಯಕ್ಷೆ ಶಶಿಕಲಾ
ಡಿ. ಪೂಜಾರಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ. ಸುಧಾಕರ, ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಪೂಜಾರಿ ಆಸ್ಪತ್ರೆಗೆ ಭೇಟಿ ನೀಡಿದರು.
ಮೈಕ್ ಮೂಲಕ ಪ್ರಚಾರ
ಘಟನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹೆಬ್ರಿ ಗ್ರಾ.ಪಂ.ನಿಂದ ರಿಕ್ಷಾಕ್ಕೆ ಧ್ವನಿವರ್ಧಕ ಕಟ್ಟಿ ಯಾರು ಕೂಡ ಮನೆ ಮನೆಗೆ ಮಾರಿಕೊಂಡು ಬರುವ ಕಳಪೆಮಟ್ಟದ ಐಸ್ ಕ್ಯಾಂಡಿಯನ್ನು ತಿನ್ನಬೇಡಿ ಎಂದು ಪ್ರಚಾರ ಮಾಡಲಾಗುತ್ತಿದೆ.
ಮಾಹಿತಿ ನೀಡಿ: ಅಪರಿಚಿತರು ಐಸ್ ಕ್ಯಾಂಡಿ ಮಾರಿಕೊಂಡು ಬಂದಾಗ ಕೂಡಲೇ ಹೆಬ್ರಿ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.